/newsfirstlive-kannada/media/post_attachments/wp-content/uploads/2024/08/Googlev-Pixel-7.jpg)
ಜನಪ್ರಿಯ ಗೂಗಲ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪಿಕ್ಸೆಲ್ 9 ಸರಣಿ ಈಗಾಗಲೇ ಮಾರ್ಕೆಟ್​​ ತಂದಿದೆ. ಇದರ ಸೇಲ್​ ಕೂಡ ಹೆಚ್ಚಳವಾಗಿದೆ. ಇದರ ಮಧ್ಯೆ ಗೂಗಲ್​ Pixel 8 Pro, Pixel 8, Pixel 7a ಮತ್ತು Pixel 7 ನಂತಹ ಶ್ರೇಣಿಯ ಹಳೆಯ ಮಾದರಿಗಳು ರಿಯಾಯಿತಿ ಬೆಲೆಗೆ ಮಾರಾಟ ಮಾಡುತ್ತಿದೆ.
ಅಂದಹಾಗೆ ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ ಗೂಗಲ್​ ಪಿಕ್ಸೆಲ್​ ಹಳೆಯ ಮಾದರಿಗಳ ಮೇಲೆ ಭಾರೀ ರಿಯಾಯಿತಿ ನೀಡಿದೆ. Pixel 8 Pro, Pixel 8, Pixel 7a ಮತ್ತು Pixel 7 ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಒಂದಕ್ಕಿಂತ ಒಂದು ಬೆಲೆ ಕಡಿತಗೊಳಿಸಿ ಮಾರಾಟ ಮಾಡಲಾಗುತ್ತಿದೆ.
![]()
ಫ್ಲಿಪ್​ಕಾರ್ಟ್​ನಲ್ಲಿ ಗೂಗಲ್​ ಪಿಕ್ಸೆಲ್​ 7 ಭಾರೀ ರಿಯಾಯಿತಿಯಲ್ಲಿ ಸಿಗುತ್ತಿದೆ. ಇದನ್ನು ಖರೀದಿಸುವವರು ಸುಮಾರು 27 ಸಾವಿರದಷ್ಟು ಉಳಿಸಬಹುದಾಗಿದೆ. ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್​ಫೋನನ್ನು 2023 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. 59,999 ರೂಪಾಯಿಗೆ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 32,999 ಗೆ ಸಿಗುತ್ತಿದೆ. ಇದರ ಜೊತೆಗೆ, ಖರೀದಿದಾರರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 2,000 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ.
ಗೂಗಲ್​ ಪಿಕ್ಸೆಲ್​ 7a ಸ್ಮಾರ್ಟ್‌ಫೋನ್​ಗಿಂತ 5 ಸಾವಿರ ರೂಪಾಯಿ ಕಡಿಮೆಗೆ ಗೂಗಲ್​ ಪಿಕ್ಸೆಲ್​ 7 ಸಿಗುತ್ತಿದೆ. ಪ್ರಸ್ತುತ ಫ್ಲಿಪ್​ಕಾರ್ಟ್​ನಲ್ಲಿ ಪಿಕ್ಸೆಲ್​ 7a ರೂಪಾಯಿ 35,999ಗೆ ಖರೀದಿಗೆ ಸಿಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us