BBK11: ಆ ಜಾಗಕ್ಕೆ ಹೊಡೆದ ಧನರಾಜ್​​ ವಿರುದ್ಧ ಸಿಡಿದೆದ್ದ ಪಾಸಿಟಿವಿಟಿ ಗೌತಮಿ; ಅಸಲಿಗೆ ಆಗಿದ್ದೇನು?

author-image
Veena Gangani
Updated On
BBK11: ಆ ಜಾಗಕ್ಕೆ ಹೊಡೆದ ಧನರಾಜ್​​ ವಿರುದ್ಧ ಸಿಡಿದೆದ್ದ ಪಾಸಿಟಿವಿಟಿ ಗೌತಮಿ; ಅಸಲಿಗೆ ಆಗಿದ್ದೇನು?
Advertisment
  • ಮಲಗಿಕೊಂಡಿದ್ದ ಸ್ಪರ್ಧಿಗಳನ್ನು ಹೊಡೆದು ಎಬ್ಬಿಸಿದ ಧನರಾಜ್
  • ಬಿಗ್​ಬಾಸ್​ ಸೀಸನ್​ 11ಕ್ಕೆ ಗ್ರ್ಯಾಂಡ್​ ಆಗಿ ಬಂದಿದ್ದ ನಟಿ ಸತ್ಯ
  • ಸೈಲೆಂಟ್​ ಆಗಿದ್ದ ಗೌತಮಿ ಏಕಾಏಕಿ ಕೋಪ ಮಾಡಿಕೊಂಡಿದ್ದೇಕೆ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇಷ್ಟು ದಿನ ಸೈಲೆಂಟ್​ ಆಗಿದ್ದ ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್ ಏಕಾಏಕಿ ಪಟಾಕಿಯಂತೆ ಸಿಡಿದೆದ್ದಿದ್ದಾರೆ.

ಇದನ್ನೂ ಓದಿ:ದೀಪಾವಳಿಗೆ ಸಿಹಿ ತಿಂಡಿ ಖರೀದಿಸುವ ಮುನ್ನ ಇರಲಿ ಎಚ್ಚರ! ಹಬ್ಬದ ಸಂಭ್ರಮವೇ ಕಿತ್ತುಕೊಂಡೀತು ಹುಷಾರ್​..!

publive-image

ಬಿಗ್​ಬಾಸ್​ ಮನೆಯಲ್ಲಿ ಆಗಾಗ ಗಲಾಟೆ ನಡೆಯುತ್ತಲೇ ಇರುತ್ತಾರೆ. ಆದರೆ ಈ ಬಾರಿಯ ಬಿಗ್​ಬಾಸ್​ ಸೀಸನ್​​ 11ರಲ್ಲಿ ಎಲ್ಲ ಸ್ಪರ್ಧಿಗಳು ಫೈರ್‌ ಬ್ರ್ಯಾಂಡ್ ಆಗಿ ಆಡುತ್ತಿದ್ದಾರೆ. ಕೊಂಚವೂ ಸೈಲೆಂಟ್​ ಆಗಿರದೇ ಮಾಡಿದ ತಪ್ಪಿಗೆ ಧ್ವನಿ ಎತ್ತುತ್ತಿದ್ದಾರೆ.

ಹೌದು, ನಿನ್ನೆ ನಡೆದ ಎಪಿಸೋಡ್​ನಲ್ಲೂ ಗೌತಮಿ ಜಾಧವ್ ಅವರು ಧನರಾಜ್​ ಆಚಾರ್ಯ ಮೇಲೆ ಕೋಪಗೊಂಡಿದ್ದಾರೆ. ಹೀಗೆ ಮುಂಜಾನೆ ಬಿಗ್​ಬಾಸ್​ ಮನೆಯಲ್ಲಿ ಸಾಂಗ್​ ಹಾಕಲಾಗಿತ್ತು. ಸಾಂಗ್​ ಪ್ಲೈ ಆಗುತ್ತಿದ್ದಂತೆ ಮನೆ ಮಂದಿ ಒಬ್ಬರಾಗಿ ಎದ್ದೇಳುತ್ತಿದ್ದರು. ಆದರೆ ಇನ್ನೂ ಗೌತಮಿ ಜಾಧವ್​ ಎದ್ದಿರಲಿಲ್ಲ. ಹೀಗಾಗಿ ಧನರಾಜ್​ ಅವರು ದಿಬ್ಬಿನಿಂದ ನಿಧಾನಕ್ಕೆ ಹೊಡೆದು ಎಬ್ಬಿಸಿದ್ದಾರೆ.

publive-image

ಇದಕ್ಕೆ ಕೋಪಗೊಂಡ ಗೌತಮಿ, ನನಗೆ ಹಾಗೇ ಎಬ್ಬಿಸಬೇಡಿ. ಸಾಂಗ್​ ಪ್ಲೈ ಆದ ಕೂಡಲೇ ನಾನೇ ಎದ್ದೇಳುತ್ತೇನೆ. ಇನ್ನೂ ಯಾವತ್ತು ಹೀಗೆ ಮಾಡಬೇಡಿ. ಮಾಡಿದರೇ ನಾನು ಸುಮ್ಮನೆ ಇರೋದಿಲ್ಲ ಅಂತ ವಾರ್ನಿಂಗ್​ ಕೊಟ್ಟಿದ್ದಾರೆ. ಆಗ ಧನರಾಜ್​ ಅವರು ನಾನು ಬೇಕು ಅಂತಾ  ಹಾಗೇ ಮಾಡಲಿಲ್ಲ. ನೀವು ನನಗೆ ಬೈಯುವಾಗ ಪಾಸಿಟಿವ್ ಆಗಿ ಇರಲಿಲ್ಲ ಅಂತ ಹೇಳಿದ್ದಾರೆ. ಕೊನೆಗೆ ಇದೇ ವಿಚಾರಕ್ಕೆ ಧನರಾಜ್​ ಗೌತಮಿಗೆ ನಾಮಿನೇಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment