newsfirstkannada.com

ಸ್ವಂತ ಸ್ಕೋರ್​ ಹೊರತುಪಡಿಸಿ IPLನಲ್ಲಿ ಏನನ್ನೂ ಸಾಧಿಸಿಲ್ಲ.. RCB ಮಾಜಿ ಆಟಗಾರನ​ ಬಗ್ಗೆ ಗಂಭೀರ್​ ಸ್ಫೋಟಕ ಹೇಳಿಕೆ

Share :

Published May 15, 2024 at 11:39am

  ಹಾರ್ದಿಕ್​​ ಪಾಂಡ್ಯ ವಿಚಾರವಾಗಿ ಬ್ಯಾಟ್​ ಬೀಸಿದ KKR ಮೆಂಟರ್​

  ಮುಂಬೈ ತಂಡದ ನಾಯಕನ ವಿಫಲತೆ ಬಗ್ಗೆ ಗಂಭೀರ್ ಗಂಭೀರ​ ಮಾತು

  ಕಿತ್ತಳೆಯನ್ನು ಆರೆಂಜ್​ಗೆ ಹೋಲಿಸಬಾರದು ಎಂದ ಗೌತಮ್​ ಗಂಭೀರ್​

ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅವರ ಪ್ರದರ್ಶನದ ಬಗ್ಗೆ ನಾನಾ ಟೀಕೆಗಳು ಕೇಳಿಬರುತ್ತಿವೆ. ಅದರಲ್ಲೂ ರೋಹಿತ್​ ಶರ್ಮಾರನ್ನು ನಾಯಕತ್ವದಿಂದ ಕೈಬಿಟ್ಟ ಮುಂಬೈ ತಂಡ ಪಾಂಡ್ಯನನ್ನು ನಾಯಕನನ್ನಾಗಿ ನೇಮಿಸಿದ ವಿಚಾರವಾಗಿ ಅನೇಕರು ಮಾತನಾಡುತ್ತಿದ್ದಾರೆ. ಅದರ ಜೊತೆಗೆ ಮುಂಬೈ ತಂಡ ಈ ಬಾರಿ 13 ಪಂದ್ಯಗಳಲ್ಲಿ 4 ಪಂದ್ಯವನ್ನು ಮಾತ್ರ ಗೆದ್ದಿರೋದು ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಇದೀಗ ಇದೇ ಟೀಕೆ-ಟಿಪ್ಪಣಿ ವಿಚಾರವಾಗಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಮೆಂಟರ್​ ಗೌತಮ್​ ಗಂಭೀರ್​ ಮಾತನಾಡಿದ್ದಾರೆ.

ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೆವಿನ್​​ ಪೀಟರ್ಸನ್​ ಮತ್ತು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ಆಟಗಾರ ಎಬಿಡಿ ವಿಲಿಯರ್ಸ್​ ಅವರನ್ನು ಈ ವಿಚಾರವಾಗಿ ಗಂಭೀರ್​ ಹೋಲಿಕೆ ಮಾಡಿದ್ದು, ಪಾಂಡ್ಯ ಪರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್​

ಆರ್​ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್​ ಸ್ವಂತ ಸ್ಕೋರ್​ ಹೊರತುಪಡಿಸಿ, ಅವರು ಐಪಿಎಲ್​ನಲ್ಲಿ ಏನೂ ಸಾಧಿಸಿಲ್ಲ ಎಂದು ಗೌತಮ್​ ಗಂಭಿರ್​ ಹೇಳಿದ್ದಾರೆ. ಜೊತೆಗೆ ಅವರು ನಾಯಕರಾಗಿದ್ದಾಗ ಸ್ವಂತ ಪ್ರದರ್ಶನ ಹೇಗಿತ್ತು?. ನಾವು ಅದನ್ನು ಯೋಚಿಸುವುದಿಲ್ಲ. ಅವರು ನಾಯಕತ್ವದಲ್ಲಿರುವಾಗ ವೃತ್ತಿ ಜೀವನದಲ್ಲಿ ಯಾವ ಪ್ರದರ್ಶನ ನೀಡಿದ್ದಾರೆ. ಏನೂ ಇಲ್ಲ. ಹಾಗಾಗಿ ಹಾರ್ದಿಕ್​ ವಿಜೇತ ನಾಯಕ. ನೀವು ಕಿತ್ತಳೆಯನ್ನು ಆರೆಂಜ್​ಗೆ ಹೋಲಿಸಬಾರದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಂತ ಸ್ಕೋರ್​ ಹೊರತುಪಡಿಸಿ IPLನಲ್ಲಿ ಏನನ್ನೂ ಸಾಧಿಸಿಲ್ಲ.. RCB ಮಾಜಿ ಆಟಗಾರನ​ ಬಗ್ಗೆ ಗಂಭೀರ್​ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/05/Goutha-gambir.jpg

Load More