/newsfirstlive-kannada/media/post_attachments/wp-content/uploads/2025/03/manju.jpg)
ಬಿಗ್ಬಾಸ್ ಸ್ಪರ್ಧಿಗಳನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ತಿದ್ದಾರೆ. ಒಂದು ಸಾರಿ ಮತ್ತೇ ಎಲ್ಲಾ ಒಟ್ಟಿಗೆ ಕಾಣಿಸಿಕೊಳ್ಳಿ ಅನ್ನೋದು ಅವರ ಆಶಯ. ಆದ್ರೆ ಎಲ್ಲರೂ ತಮ್ಮ ತಮ್ಮ ಲೈಫ್ನಲ್ಲಿ ಬ್ಯುಸಿ ಆಗ್ಬಿಟಿದ್ದಾರೆ. ಆಗಾಗ ಅಲ್ಲಿ.. ಇಲ್ಲಿ ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಕ್ಲಿಕ್ಕಿಸಿದ ಫೋಟೋಗಳನ್ನ ನೋಡಿ ಫ್ಯಾನ್ಸ್ ಸಂಭ್ರಮಿಸುತ್ತಾ ಇರುತ್ತಾರೆ.
ಇದನ್ನೂ ಓದಿ:BREAKING: ವಿನಯ್ ಗೌಡ, ರಜತ್ಗೆ ಷರತ್ತು ಬದ್ಧ ಜಾಮೀನು ಮಂಜೂರು
ಹನುಮಂತ ಅಂತೂ ಯಾರ್ ಕೈಗೂ ಸಿಕ್ಕಿರಲಿಲ್ಲ. ಗೆದ್ದ ನಂತರ ಹಳ್ಳಿ ಜನರ ಜೊತೆನೇ ಟೈಮ್ ಸ್ಪೆಂಡ್ ಮಾಡ್ತಿರೋ ಹನುಮ ಬಾಯ್ಸ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಳ್ತಿದ್ದಾನೆ ಅಷ್ಟೇ. ಅದು ಬಿಟ್ಟು ಸ್ಪರ್ಧಿಗಳ ಕಾಣಸಿಕ್ಕಿರಲಿಲ್ಲ. ಇತ್ತಿಚೀಗೆ ಭವ್ಯಾ ಹನುಮನ ಜೊತೆಗೆ ಫೋಟೋ ಕ್ಲಿಕ್ಕಿಸಿದ್ರು. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ರು. One with smart ಹನುಮೂ.. ನಿನ್ನ ಒಳ್ಳೆತನಕೆ ದೇವರು ಒಳ್ಳೆದೆ ಮಾಡ್ಲಿ.. ಎಂದು ಕ್ಯಾಪ್ಶನ್ ಬರೆದಿದ್ರು. ಅಬ್ಬಾ ಒಂದಾದ್ರು ಪೋಸ್ಟ್ ಬಂತಲ್ಲ ಅಂತ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇನ್ನೂ, ಬಿಗ್ಬಾಸ್ ಮನೆಯ ಗೆಳೆಯ.. ಗೆಳತಿ ಅಂತಲೇ ಫೇಮಸ್ ಆಗಿರೋ ಜೋಡಿ ಗೌತಮಿ ಹಾಗೂ ಮಂಜು. ಶೋ ನಂತರ ಇಬ್ಬರೂ ಕ್ಯಾಮೆರಾ ಕಣ್ಣಿಗೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಸದ್ಯ ಇಬ್ಬರೂ ಕುಟುಂಬ ಸಮೇತ ವನದುರ್ಗಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಗೌತಮಿ ಪ್ರತಿ ತಿಂಗಳು ತಾಯಿ ದರ್ಶನಕ್ಕೆ ಮಂಗಳೂರಿಗೆ ಭೇಟಿ ನೀಡ್ತಾರೆ.
View this post on Instagram
ಕಳೆದ ತಿಂಗಳೂ ತಾಯಿ ದರ್ಶನದ ಜೊತೆಗೆ ಧನರಾಜ್ ಆಚಾರ್ಯ ಕುಟುಂಬವನ್ನ ಭೇಟಿ ಮಾಡಿ ಬಂದಿದ್ರು. ಈ ಬಾರಿ ಅಮ್ಮನ ದರ್ಶನಕ್ಕೆ ಮಂಜು ಹಾಗೂ ಅವರ ತಂದೆ, ತಾಯಿಯನ್ನ ಜೊತೆಗೆ ಕರೆದುಕೊಂಡು ಹೋಗಿದ್ರು. ಒಟ್ಟಾರೆ ಗೌತಮಿ ಹೊಸ ಹೊಸ ಫೋಟೋಶೂಟ್ ಮಾಡಿಸೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಒಳ್ಳೆ ಪ್ರಾಜೆಕ್ಟ್ ಮೂಲಕ ಕಮ್ ಬ್ಯಾಕ್ ಮಾಡೋಕೆ ರೆಡಿಯಾಗ್ತಿದ್ದಾರೆ. ಮಂಜು ಮ್ಯಾಕ್ಸ್ ಸಕ್ಸಸನ ಸಂಭ್ರಮಿಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ