Advertisment

BBK11: ಈ ಬಾರಿಯ ಬಿಗ್​ಬಾಸ್​ ವಿನ್ನರ್ ಯಾರಾಗ್ತಾರೆ? ಗೌತಮಿ, ಧನರಾಜ್ ಹೇಳಿದ್ದೇನು?

author-image
Veena Gangani
Updated On
BBK11: ಈ ಬಾರಿಯ ಬಿಗ್​ಬಾಸ್​ ವಿನ್ನರ್ ಯಾರಾಗ್ತಾರೆ? ಗೌತಮಿ, ಧನರಾಜ್ ಹೇಳಿದ್ದೇನು?
Advertisment
  • ಬಿಗ್​ಬಾಸ್​ ವಿನ್ನರ್​ ಬಗ್ಗೆ ಗೌತಮಿ ಜಾಧವ್​ ಮಾತಾಡಿದ್ದೇನು?
  • ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಧನರಾಜ್ ಆಚಾರ್ಯ
  • ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ ಆರು ಸ್ಪರ್ಧಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್ ಫಿನಾಲೆ ವಾರದಲ್ಲಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಈ ಬಾರಿಯ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಯಾರಾಗಲಿದ್ದಾರೆ ಎಂದು ಚರ್ಚೆ ಜೋರಾಗಿದೆ.

Advertisment

ಇದನ್ನೂ ಓದಿ:BBK11: ಭವ್ಯಾ ಗೌಡ ಮೇಲಿನ ಸಿಟ್ಟಿಗೆ ಬಿಗ್​ಬಾಸ್​ ಪ್ರಾಪರ್ಟಿ ಪುಡಿ ಪುಡಿ; ಉಗ್ರಾವತಾರ ತಾಳಿದ ಮಂಜು

publive-image

ಮತ್ತೊಂದು ಕಡೆ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಆದ್ರೆ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಹೋಗದೇ ಬಿಗ್​ಬಾಸ್​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಆಚೆ ಬಂದ ಧನರಾಜ್​ ಆಚಾರ್ಯ ಹಾಗೂ ಗೌತಮಿ ಜಾಧವ್​ ನ್ಯೂಸ್ ಫಸ್ಟ್​ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

ಅದರಲ್ಲೂ ಈ ಬಾರಿಯ ಬಿಗ್​ಬಾಸ್​ ವಿನ್ನರ್​ ಯಾರಾಗಬಹುದು ಅಥವಾ ಯಾರು ಆಗಬೇಕು ಅಂತ ಹೇಳಿದ್ದಾರೆ. ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಭಾಗಿಯಾಗಿದ್ದ ಗೌತಮಿ ಅವರು, ನನಗೆ ಹನುಮಂತ ಗೆಲ್ಲಬೇಕು ಅನ್ನೋದು ಇದೆ. ಒಳ್ಳೆಯ ವ್ಯಕ್ತಿತ್ವ ಗೆದ್ದರೇ ಫುಲ್ ಖುಷ್ ಆಗುತ್ತೆ. ಫಿನಾಲೆ ಟು ಟಿಕೆಟ್​ ಟಾಸ್ಕ್​ಗೆ ನನ್ನ ಏಕೆ ಆಯ್ಕೆ ಮಾಡಿದ್ರು ಅಂತ ಗೊತ್ತಾಗಲಿಲ್ಲ. ಆದ್ರೆ ಆಗ ನಾನು ಮನಸ್ಸಿನಿಂದ ದೇವರಿಗೆ ಬೇಡಿಕೊಂಡೆ. ಹೀಗಾಗಿ ಒಳ್ಳೆಯ ವ್ಯಕ್ತಿತ್ವ ಇರೋ ಹನುಮನ ಗೆಲ್ಲಬೇಕು.

Advertisment

ಇನ್ನೂ, ಈ ಬಗ್ಗೆ ಮಾತಾಡಿದ ಧನರಾಜ್​, ಹನುಮಂತನೇ ಗೆಲ್ಲಬೇಕು. ಅವರ ಅಕ್ಕ ಪಕ್ಕ ತಂಗಿ ಜಿಂಕೆ ಭವ್ಯಾ ಇರಬೇಕು, ಇಲ್ಲವಾದರೇ ರಜತ್​ ಇರಬೇಕು. ಗೆದ್ದರೆ ದೋಸ್ತಾ ಹನುಮಂತನೇ ಗೆಲ್ಲಬೇಕು ಅಂತ ಹೇಳಿದ್ದಾರೆ. ಇನ್ನೂ ಒಂದೇ ವಾರದಲ್ಲಿ ಬಿಗ್​ಬಾಸ್​ ವಿನ್ನರ್​ ಯಾರು ಆಗಲಿದ್ದಾರೆ ಅಂತ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment