BBK11: ಗೆಳತಿ ಮೋಸದಾಟಕ್ಕೆ ದಾಳವಾದ್ರಾ ಮಂಜಣ್ಣ..? ಅಸಲಿಗೆ ಗೌತಮಿ ಮಾಡಿದ್ದೇನು?

author-image
Veena Gangani
Updated On
BBK11: ಗೆಳತಿ ಮೋಸದಾಟಕ್ಕೆ ದಾಳವಾದ್ರಾ ಮಂಜಣ್ಣ..?  ಅಸಲಿಗೆ ಗೌತಮಿ ಮಾಡಿದ್ದೇನು?
Advertisment
  • ಬಿಗ್​ಬಾಸ್​ ಶುರುವಾದಾಗಿನಿಂದ ಜೊತೆಗಿದ್ದ ಗೌತಮಿ ಹಾಗೂ ಮಂಜು
  • ಗೆಳತಿ ಗೌತಮಿ ಜಾಧವ್​ ಮೋಸದಾಟಕ್ಕೆ ದಾಳವಾದ್ರಾ ಉಗ್ರಂ ಮಂಜಣ್ಣ?
  • ಬಿಗ್​ಬಾಸ್​ ಮನೆಯಲ್ಲಿ ಸದ್ಯ ಉಳಿದುಕೊಂಡಿದ್ದಾರೆ 9 ಸ್ಟ್ರಾಂಗ್​ ಸ್ಪರ್ಧಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಫಿನಾಲೆ ಹಂತಕ್ಕೆ ತಲುಪುತ್ತಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಶುರುವಾದ ಮೊದಲ ದಿನದಿಂದ ಇಲ್ಲಿಯವರೆಗೂ ಇಟ್ಟುಕೊಂಡಿದ್ದ ಈ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ. ಇನ್ನೇನು 3 ವಾರಗಳಲ್ಲಿ​ ಬಿಗ್​ಬಾಸ್​​ ಗ್ರ್ಯಾಂಡ್​ ಫಿನಾಲೆ ಹೊಸ್ತಿಲಿಗೆ ಬರುತ್ತಿದ್ದಂತೆ ಉಗ್ರಂ ಮಂಜು ಮತ್ತೆ ಡಲ್​ ಹೊಡೆದಿದ್ದಾರೆ.

ಇದನ್ನೂ ಓದಿ:Bigg Boss ಮನೆಗೆ ಎಂಟ್ರಿ ಕೊಟ್ಟ ಶರಣ್, ಅದಿತಿ ಪ್ರಭುದೇವ.. ಕಾರಣವೇನು?

ಫ್ಯಾಮಿಲಿ ರೌಂಡ್​ನಲ್ಲಿ ಗೌತಮಿ ಹಾಗೂ ಉಗ್ರಂ ಮಂಜು ಇಬ್ಬರ ಕುಟುಂಬಸ್ಥರು ಹೇಳಿದ್ದು ಒಂದೇ ಮಾತು. ನಿನ್ನ ಆಟ ನೀನು ಆಡು, ಯಾರ ಹಿಂದೆಯೂ ಹೇಗಬೇಡ, ಫಿನಾಲೆಗೆ ಕೆಲವು ವಾರಗಳು ಅಷ್ಟೇ ಉಳಿದಿವೆ ಅಂತ. ಆದ್ರೆ ಉಗ್ರಂ ಮಂಜು ತಂಗಿ ಮುಖಕ್ಕೆ ಹೊಡೆದ ಹಾಗೇ, ಇಂತಹ ಗೋಲ್ಡನ್​ ಆಪರ್ಚುನಿಟಿ ಮಿಸ್​ ಮಾಡಿಕೊಳ್ಳಬೇಡ ಪ್ಲೀಸ್. ತುಂಬಾ ಚೆನ್ನಾಗಿ ಆಡುತ್ತಿದ್ದೀಯಾ. ಇಷ್ಟು ದಿನದಲ್ಲಿ ನಿನ್ನ ಪ್ರತಿಭೆಯನ್ನು ಎಲ್ಲೂ ಹೊರಗಡೆ ಹಾಕಿಲ್ಲ. ಯಾರ ಬಾಲವನ್ನು ಹಿಡಿಯೋದಕ್ಕೆ ಹೋಗಬೇಡ. ಏಕೆ ಮಂಕಾಗಿದ್ದೀಯಾ ಅಂತ ಗೊತ್ತಾಗುತ್ತಿಲ್ಲ. ನಿನ್ನ ಹತ್ತಿರ ಈಗ ಸಮಯ ಇಲ್ಲ. ನಿನ್ನ ಹಿಂದೆ ಹಾಕಿ ಮುಂದೆ ಬೇರೆಯವರು ಹೋಗುತ್ತಿದ್ದಾರೆ. ಅವರ ಜೊತೆಗೆ ಇರೋದು ಬೇಡ. ಈ ಫ್ರೆಂಡ್ಶಿಪ್ ಕಟ್​ ಮಾಡು ಅಂತ ಪ್ರಮಾಣ ಮಾಡಿಸಿಕೊಂಡಿದ್ದರು.

ಇದಾದ ಬಳಿಕ ಗೌತಮಿ ಪತಿ ಅಭಿಷೇಕ್ ಕೂಡ ಪತ್ನಿಗೆ ಸಲಹೆ ಕೊಟ್ಟಿದ್ದರು. ನೀನು ನಿನ್ನ ಆಟ ಆಡು. ಇನ್ನೂ ಕೆಲವೇ ದಿನಗಳು ಉಳಿದಿವೆ. ಇದನ್ನೇಲ್ಲ ಬಿಟ್ಟು ಮುಂದಕ್ಕೆ ಹೋಗು ಅಂತೆಲ್ಲಾ ಪತ್ನಿಗೆ ಧೈರ್ಯ ತುಂಬಿದ್ದರು. ಇದಾದ ಬೆನ್ನಲ್ಲೇ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್​ ಸ್ನೇಹ ಬಿಗ್​ಬಾಸ್​ ಮನೆಯಲ್ಲೇ ಮುಕ್ತಾಯಗೊಂಡಿತ್ತು. ಆದರೆ ಟಾಸ್ಕ್​ನಲ್ಲಿ ಮತ್ತೆ ಒಂದಾಗಿ ಒಬ್ಬರ ಮೇಲೆ ಒಬ್ಬರು ನಂಬಿಕೆ ಇಟ್ಟುಕೊಂಡು ಮೋಸ ಹೋಗಿದ್ದಾರೆ. ಬಿಗ್​ಬಾಸ್​ ಈ ಬಾರಿ ಟಿಕೆಟ್​ ಟು ಫಿನಾಲೆ ಟಾಸ್ಕ್​ ಭವ್ಯಾ ಗೌಡ ಹಾಗೂ ಗೌತಮಿ ತಂಡಕ್ಕೆ ಟಾಸ್ಕ್​ವೊಂದನ್ನು ಕೊಟ್ಟಿದ್ದರು.

ಇದೇ ಟಾಸ್ಕ್​ನಲ್ಲಿ ಅಚ್ಚರಿ ಎಂಬಂತೆ ಬಿಗ್​ಬಾಸ್​ ಸಖತ್​ ಸ್ಟ್ರಾಂಗ್​ ಆಗಿದ್ದ ಗೌತಮಿ ಹಾಗೂ ಉಗ್ರಂ ಮಂಜು ಟಿಕೆಟ್​ ಟು ಫಿನಾಲೆಗೆ ಆಯ್ಕೆಯಾಗಿಲ್ಲ. ಎರಡು ತಂಡಕ್ಕೆ ಒಬ್ಬೊಬ್ಬ ಸದಸ್ಯರು ಪೆಟ್ಟಿಗೆಯ ಒಳಗಡೆ ಮಲಗಬೇಕು. ಪೆಟ್ಟಿಗೆ ತುಂಬಾ ನೀರು ತುಂಬಲು ಶುರುವಾಗುತ್ತದೆ. ಇನ್ನೊಬ್ಬ ಸದಸ್ಯ ಪೆಟ್ಟಿಗೆ ಒಳಗಡೆ ತುಂಬಿದ ನೀರನ್ನು ಕಡಿಮೆಗೊಳಿಸುತ್ತಾ ಹೋಗಬೇಕು ಅಂತ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ಆಗ ಗೌತಮಿ ಹಾಗೂ ಮಂಜಣ್ಣ ಒಂದು ತಂಡದಲ್ಲಿ ಇದ್ದರು. ಭವ್ಯಾ ಗೌಡ ಹಾಗೂ ಮೋಕ್ಷಿತಾ ಮತ್ತೊಂದು ತಂಡದಲ್ಲಿ ಇರುತ್ತಾರೆ. ಈ ಟಾಸ್ಕ್​ ಮೊದಲು ಮಂಜಣ್ಣ ಹಾಗೂ ಗೌತಮಿ ಚರ್ಚೆ ಮಾಡಿದ್ದರು. ನಾನು ಪೆಟ್ಟಿಗೆ ಒಳಗಡೆ ಇರುತ್ತೇನೆ. ನೀನು ನೀರು ತೇಗಿ ಅಂತ ಮಂಜಣ್ಣ ಹೇಳುತ್ತಾರೆ. ಇದಾದ ಬಳಿಕ ಗೌತಮಿ ಚರ್ಚೆ ವೇಳೆಯೇ ನಾನು ಹೋಗುತ್ತೇನೆ, ನೀವು ನೀರನ್ನು ತೆಗೆಯಿರಿ ಅಂದಿದ್ದರು.

ಆದರೆ ಮಂಜಣ್ಣ ನೀನು ನೀರು ತೆಗಿ, ನಾನು ಒಳಗಡೆ ಇರ್ತಿನಿ. ಸಾಯೋದಿಲ್ಲ ಬದುಕುತ್ತೇನೆ ಅಂತ ಹೇಳಿದ್ದರು. ಆದರೆ ಜಾಸ್ತಿ ಹೊತ್ತು ನೀರಲ್ಲಿ ಇರಲು ಆಗದೇ ಮಂಜಣ್ಣ ಪೆಟ್ಟಿಗೆಯಿಂದ ಆಚೆ ಬಂದು ಬಿಟ್ಟಿದ್ದಾರೆ. ಅಲ್ಲಿ ಈ ಟಿಕೆಟ್​ ಟು ಫಿನಾಲೆ ಟಾಸ್ಕ್​ ಆಡಲು ಅನರ್ಹ ರಾಗಿದ್ದಾರೆ ಗೌತಮಿ ಹಾಗೂ ಮಂಜು. ಟಾಸ್ಕ್​ ಮುಗಿದ ಕೂಡಲೇ ಬಾತ್​ ರೂಂಗೆ ಹೋದ ಗೌತಮಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ಅಲ್ಲದೇ ಮಂಜಣ್ಣ ಮಾಡಿದ ತಪ್ಪಿಗೆ ಕರ್ಮ ರಿಟರ್ನ್ಸ್‌ ಎಂಬ ಪದ ಗೌತಮಿ ಬಾಯಿಂದ ಬಂದಿದೆ. ನಾವು ಉಳಿಬೇಕು ಅಂತ ಅವರನ್ನು ಆಚೆ ಹಾಕಿದ್ವಿ. ಆದರೆ ಈ ನಾವು ಆಚೆ ಉಳಿದುಕೊಂಡ್ವಿ. ಇದೇ ನೋಡಿ ಕರ್ಮ ರಿಟರ್ನ್ಸ್‌ ಅಂತ ಹೇಳಿದ್ದಾರೆ. ಇಂದು ಎಲ್ಲರ ಮುಂದೆಯೇ ಈ ವಾರದ ಕಳಪೆ ಪಟ್ಟವನ್ನು ಉಗ್ರಂ ಮಂಜು ಅವರಿಗೆ ಕೊಟ್ಟಿದ್ದಾರೆ. ಜೊತೆಗೆ ಇದ್ದುಕೊಂಡು ಟಾಸ್ಕ್​ ಆಡಿದ ಗೆಳೆಯ ಮಂಜಣ್ಣಿಗೆ ಮೊದಲ ಬಾರಿ ಗೌತಮಿ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ. ಇದೇ ವಿಚಾರ ಉಗ್ರಂ ಮಂಜು ಅಭಿಮಾನಿಗಳಿಗೆ ಬೇಸರ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment