ಮಂಜಣ್ಣನನ್ನು ಶಕ್ತಿ ದೇವತೆ ಬಳಿಗೆ ಕರೆದೊಯ್ದ ಬಿಗ್​ಬಾಸ್​ ಖ್ಯಾತಿಯ ಗೌತಮಿ; ಏನಿದರ ವಿಶೇಷ?

author-image
Veena Gangani
Updated On
ಮಂಜಣ್ಣನನ್ನು ಶಕ್ತಿ ದೇವತೆ ಬಳಿಗೆ ಕರೆದೊಯ್ದ ಬಿಗ್​ಬಾಸ್​ ಖ್ಯಾತಿಯ ಗೌತಮಿ; ಏನಿದರ ವಿಶೇಷ?
Advertisment
  • ಗೆಳಯ ಮಂಜಣ್ಣನ ಜೊತೆಗೆ ಆ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟಿ
  • ಬಿಗ್​ಬಾಸ್​ನಲ್ಲಿ ಮಸ್ತ್ ಸೌಂಡ್ ಮಾಡಿದ್ದ ಸತ್ಯ ನಟಿ ಗೌತಮಿ ಜಾಧವ್
  • ಬಿಗ್​ಬಾಸ್​ ಸೀಸನ್ 11 ಮೂಲಕ ಸಖತ್​ ಫೇಮಸ್​ ಆಗಿದ್ದ ಗೌತಮಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಮೂಲಕ ಸಖತ್​ ಫೇಮಸ್​ ಆಗಿದ್ದಾರೆ ಗೌತಮಿ ಜಾಧವ್. ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್.

ಇದನ್ನೂ ಓದಿ:BBK11: ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್​ ಅಷ್ಟೂ ಸ್ಟ್ರಾಂಗ್ ಆಗಿ ಇರಲು ಕಾರಣ ಏನು?

ಬಿಗ್​ಬಾಸ್​ ಮನೆಯಲ್ಲಿದ್ದಾಗ ಒಂದು ರೇಂಜ್​ಗೆ ಸೌಂಡ್ ಮಾಡುತ್ತಿದ್ದರು. ಇನ್ನೂ ಈ ಹಿಂದೆ ಗೌತಮಿ ಅವರ ಪರ್ಫಾಮನ್ಸ್​ ಖಡಕ್​ ಆಗಿ ಇರಬೇಕು ಅಂತ ವೀಕ್ಷಕರು ಕೂಡ ನಿರೀಕ್ಷಿಸುತ್ತಿದ್ದರು. ಅದರಂತೆ ದಿನ ಕಳೆದಂತೆ ಬಿಗ್​ಬಾಸ್​ ಮನೆಯಲ್ಲಿ ಆಡುತ್ತಿದ್ದ ಟಾಸ್ಕ್​ ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಟಾಸ್ಕ್​ ಅಂತ ಬಂದರೆ ಅವರು ಎಷ್ಟು ಸ್ಟ್ರಾಂಗ್​ ಆಗಿ ಆಡುತ್ತಾರೆ? ಯಾವ ತರ ಸ್ಟಾಟರ್ಜಿ ಯೂಸ್​ ಮಾಡ್ತಾರೆ ಅಂತ ಗೊತ್ತಾಗಿತ್ತು. ಹೀಗೆ ಇಷ್ಟೆಲ್ಲಾ ಗಮನಕೊಟ್ಟು ಆಡುವ ಆಟದ ಹಿಂದೆ ಒಂದು ಶಕ್ತಿ ಇದೆ. ಅದುವೆ ಧ್ಯಾನ.

publive-image

ಹೌದು, ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡುವ ಗೌತಮಿ ಬಾಯಲ್ಲಿ ವನದುರ್ಗೆ, ವನದುರ್ಗಮ್ಮ ಎನ್ನುವ ಹೆಸರನ್ನು ನೀವು ಕೇಳ್ತಿರುತ್ತೀರಿ. ಬಿಗ್ ಬಾಸ್ ಮನೆಯಲ್ಲಿ ವನದುರ್ಗೆ ಪೂಜೆ ಹಾಗೂ ಜಪವನ್ನು ಗೌತಮಿ ಮಾಡ್ತಿದ್ದರು. ಆಟವಾಡುವಾಗೆಲ್ಲ ಗೌತಮಿ ಬಾಯಿಂದ ವನದುರ್ಗೆ ಹೆಸರು ಕೇಳ್ತಾನೆ ಇತ್ತು. ಅಷ್ಟೇ ಅಲ್ಲ ಮಂಜು ಕ್ಯಾಪ್ಟನ್ ಆಗ್ಬೇಕು, ಹನುಮಂತು ಕ್ಯಾಪ್ಟನ್ ಆಗ್ಬೇಕು ಎನ್ನುವ ಸಮಯದಲ್ಲೂ ಗೌತಮಿ ವನದುರ್ಗೆ ಮಂತ್ರವನ್ನು ಜಪಿಸುತ್ತಿದ್ದರು. ಬಿಗ್​ಬಾಸ್​ನಿಂದ ಆಚೆ ಬಂದ ಕೂಡಲೇ ಗೌತಮಿ ಅವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು.

publive-image

ಇದೀಗ ಎರಡನೇ ಬಾರಿಗೆ ನೆಚ್ಚಿನ ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ ಗೌತಮಿ ಜಾಧವ್​. ವಿಶೇಷ ಎಂದರೆ ಗೆಳಯ ಉಗ್ರಂ ಮಂಜು ಅವರಿಗೂ ವನದುರ್ಗಾ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಗೌತಮಿ ಅವರ ಜೊತೆಗೆ ಪತಿಯೂ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೇ ಫೋಟೋವನ್ನು ಗೌತಮಿ ಅವರು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ಗೌತಮಿಯನ್ನು ಮೆಚ್ಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment