newsfirstkannada.com

×

‘ಬಿಗ್​ಬಾಸ್​ನಲ್ಲಿ ಗುದ್ದಾಟಕ್ಕೆ ನಿಂತರೆ..’ ಖಡಕ್ ಡೈಲಾಗ್ ಮೂಲಕ ಗೌತಮಿ ಎಂಟ್ರಿ VIDEO

Share :

Published September 29, 2024 at 12:25pm

Update September 29, 2024 at 12:27pm

    ಇಂದಿನಿಂದ ಕಲರ್ಸ್​ ವೀಕ್ಷಕರಿಗೆ ಬಿಗ್​ಬಾಸ್ ಜಾತ್ರೆ

    ಸ್ಪರ್ಧಿಗಳ ಬಗ್ಗೆ ಹೆಚ್ಚಿದ ಕುತೂಹಲ, ಯಾರೆಲ್ಲ ಬರ್ತಿದ್ದಾರೆ?

    ಸ್ಪರ್ಧಿ ಗೌತಮಿ ಜಾಧವ್ ಎಂಟ್ರಿ ಹೆಂಗಿದೆ ಗೊತ್ತಾ?

ಇಂದಿನಿಂದ ಬಿಗ್​ಬಾಸ್​ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ. ತುಂಬಾ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದ್ದು, ಬಿಗ್​​ಬಾಸ್​ ಸೀಸನ್​-11 ಇಂದು ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಆ ಮೂಲಕ ಯಾರೆಲ್ಲ ದೊಡ್ಮನೆಗೆ ಹೋಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬೀಳಲಿದೆ.

ಕಲರ್ಸ್ ಕನ್ನಡದಲ್ಲಿ ನಿನ್ನೆ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ ನಡೆಯಿತು. ಈ ವೇಳೆ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಅವರಲ್ಲಿ ಗೌತಮಿ ಜಾಧವ್ ಕೂಡ ಒಬ್ಬರು. ಇದೀಗ ಕಲರ್ಸ್​ ಕನ್ನಡ ಗೌತಮಿ ಬಿಗ್​ಬಾಸ್​ ವೇದಿಕೆಯ ಎಂಟ್ರಿಗೆ ಸಂಬಂಧಿಸಿದ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಸಿನಿಮಾ ಹೀರೋ ರೀತಿಯಲ್ಲಿ Yezdi D250 Classic ಮೂಲಕ ಎಂಟ್ರಿ ನೀಡಿರುವ ಗೌತಮಿ, ಮಸ್ತ್ ಡೈಲಾಗ್ ಹೊಡೆದಿದ್ದಾರೆ. ‘ಬಿಗ್​ಬಾಸ್​ನಲ್ಲಿ ಗುದ್ದಾಟಕ್ಕೆ ಅಂತಾ ನಿಂತ್ರೆ, ಫೀಲ್ಡು ನಂದೆ, ಶೀಲ್ಡು ನಂದೇ’ ಎಂದು ಡೈಲಾಗ್ ಹೊಡೆದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​​ ಮನೆಗೆ ಹಿಂದುತ್ವದ ಫೈಯರ್​​ ಬ್ರ್ಯಾಂಡ್​​​ ಚೈತ್ರಾ ಕುಂದಾಪುರ ಎಂಟ್ರಿ

ಸತ್ಯ ಸೀರಿಯಲ್ ಮೂಲಕ ಜನಪ್ರಿಯರಾಗಿರುವ ಗೌತಮಿ ಜಾಧವ್‌, ಅವರು ಖಡಕ್ ರೋಲ್ ಮೂಲಕನೇ ಪ್ರಖ್ಯಾತಿ ಪಡೆದಿದ್ದಾರೆ. ಅವರು ರಿಯಲ್ ಲೈಫ್‌ನಲ್ಲಿ ಸಖತ್ ಸಾಫ್ಟ್‌. ಆದ್ರೆ, ಬಿಗ್‌ಬಾಸ್‌ನಲ್ಲಿ ಹೇಗಿರ್ತಾರೋ ಏನೋ ಗೊತ್ತಿಲ್ಲ. ಈಗಾಗಲೇ ಬಿಗ್​ಬಾಸ್ ಕ್ಯೂರಿಸಿಟಿಯನ್ನು ಹೆಚ್ಚಿಸಿದ್ದಾರೆ. ಈ ಬಾರಿಯ ಬಿಗ್​ಬಾಸ್​ನಲ್ಲಿ ಸ್ವರ್ಗ, ನರಕ ಅನ್ನೋ ಕಾನ್ಸೆಪ್ಟ್ ಇದೆ. ಅದರಲ್ಲಿ ಗೌತಮಿ ಸ್ವರ್ಗಕ್ಕೆ ಹೋಗ್ತಾರೋ? ನರಕಕ್ಕೆ ಹೋಗ್ತಾರೋ ಎಂಬ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:ಇಂದಿನಿಂದ ಬಿಗ್​ಬಾಸ್ ಶೋ – ದೊಡ್ಮನೆಗೆ ಹೋಗುವ 16 ಸ್ಪರ್ಧಿಗಳ ಪಕ್ಕಾ ಲಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಿಗ್​ಬಾಸ್​ನಲ್ಲಿ ಗುದ್ದಾಟಕ್ಕೆ ನಿಂತರೆ..’ ಖಡಕ್ ಡೈಲಾಗ್ ಮೂಲಕ ಗೌತಮಿ ಎಂಟ್ರಿ VIDEO

https://newsfirstlive.com/wp-content/uploads/2024/09/GAUTAMI.jpg

Load More