/newsfirstlive-kannada/media/post_attachments/wp-content/uploads/2025/01/gouthapmi.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 95ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಒಬ್ಬರಾದ ಮೇಲೆ ಒಬ್ಬರು ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಕನ್ನಡದ ಬಿಗ್​ಬಾಸ್​ ಮನೆಗೆ ಗೌತಮಿ ಜಾಧವ್​ ಪತಿಯ ಆಗಮನವಾಗಿದೆ. ಪತಿಯನ್ನು ನೋಡಿದ ಕೂಡಲೇ ಗೌತಮಿ ಜಾಧವ್ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2025/01/gouthami2.jpg)
ಹೌದು, 94 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿದ್ದ ಗೌತಮಿ ಜಾಧವ್​ ಮುಖದಲ್ಲಿ ಮಂದಹಾಸ ಮೂಡಿದೆ. ಇಷ್ಟು ದಿನ ಕುಟುಂಬಸ್ಥರನ್ನು ಬಿಟ್ಟು ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದ ಗೌತಮಿ ಈಗ ಸಖತ್​ ಹ್ಯಾಪಿಯಾಗಿದ್ದಾರೆ. ಅದರಲ್ಲೂ ನಿನ್ನೆ ಗೌತಮಿ ಜಾಧವ್​ ಅವರ ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ ವಿವಾಹ ವಾರ್ಷಿಕೋತ್ಸವದ ದಿನವೇ ಬಿಗ್​ಗಾಸ್​ ಗೌತಮಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅಲ್ಲದೇ ಪತಿಯಿಂದಲೂ ಗೌತಮಿ ಅವರಿಗೆ ಸರ್ಪ್ರೈಸ್ ಗಿಫ್ಟ್​ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2025/01/gouthami3.jpg)
ಬಿಗ್​ಬಾಸ್​ ಮನೆಗೆ ಬಂದ ಪತಿ ವಿಶೇಷವಾದ ಗಿಫ್ಟ್ ಅನ್ನು ಪತ್ನಿಗೆ ಕೊಟ್ಟಿದ್ದಾರೆ. ಕಾಲಿಗೆ ಗೆಜ್ಜೆ ಹಾಗೂ ಕತ್ತಿಗೆ ಸರ ಹಾಕಿ ​ಸರ್ಪ್ರೈಸ್ ಕೊಟ್ಟಿದ್ದಾರೆ. ಇದಾದ ಬಳಿಕ ಗೌತಮಿ ಬಿಗ್​ಬಾಸ್​ ಬಾಸ್​ಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ, ಪ್ರೀತಿಸಿ ಮದುವೆಯಾಗಿರೋ ಗೌತಮಿ ಹಾಗೂ ಅಭಿಷೇಕ್​ ಬಿಗ್​ಬಾಸ್​ ಮನೆಯಲ್ಲೇ ಆರನೇ ವರ್ಷದ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಬಿಗ್​ಬಾಸ್​ ಮನೆಯಲ್ಲೇ ಕೇಕ್ ಮಾಡಿ ಗೌತಮಿ ಹಾಗೂ ಅಭಿಷೇಕ್ ಸಂಭ್ರಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us