/newsfirstlive-kannada/media/post_attachments/wp-content/uploads/2024/11/bbk11.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಯಶಸ್ವಿಯಾಗಿ ಐದನೇ ವಾರಕ್ಕೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಬಿಗ್​ಬಾಸ್​ ಮನೆಯಲ್ಲಿ 13 ಮಂದಿ ಉಳಿದುಕೊಂಡಿದ್ದಾರೆ. ಮೊನ್ನೆಯಷ್ಟೇ ಬಿಗ್​ಬಾಸ್​ ಮನೆಯಿಂದ ಮಾನಸ ಅವರು ಎಲಿಮಿನೇಟ್​ ಆಗಿದ್ದರು.
ಇದನ್ನೂ ಓದಿ: ಸಂಧ್ಯಾ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್.. CCTV ಸಿಕ್ಕಿಲ್ಲ, ಡ್ಯಾಶ್ ಬೋರ್ಡ್ ಕ್ಯಾಮೆರಾನೂ ಇಲ್ವಾ? ಪತಿ ಭಾವುಕ!
/newsfirstlive-kannada/media/post_attachments/wp-content/uploads/2024/11/bbk112.jpg)
ಮಾನಸ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುತ್ತಿದ್ದಂತೆ ಎಲ್ಲ ಸ್ಪರ್ಧಿಗಳು ಕಣ್ಣೀರು ಹಾಕಿದ್ದರು. ಬಿಗ್​ಬಾಸ್​ ಮನೆಯಲ್ಲಿ ತುಂಬಾ ಕ್ಲೋಸ್​ ಆಗಿದ್ದ ಗೌತಮಿ, ಮೋಕ್ಷಿತಾ ಹಾಗೂ ಉ್ರಗಂ ಮಂಜು ಅವರ ನಡುವೆ ಬಿರುಕು ಮೂಡಿಬಿಡ್ತಾ ಅಂತ ಅನುಮಾನ ಶುರುವಾಗಿದೆ.
/newsfirstlive-kannada/media/post_attachments/wp-content/uploads/2024/11/bbk113.jpg)
ಬಿಗ್​ಬಾಸ್​ ಶುರುವಾದಾಗಿನಿಂದ ಈ ಮೂವರು ಸ್ನೇಹಿತರಾಗಿದ್ದರು. ಏನೇ ಆದರೂ ಈ ಇಬ್ಬರು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಬಿಗ್​ಬಾಸ್​ ಕೊಟ್ಟ ಒಂದೇ ಒಂದು ಟಾಸ್ಕ್​ನಿಂದ ಈ ಮೂವರು ದಿಕ್ಕಾಪಾಲು ಆಗಿದ್ದಾರೆ. ಬಿಗ್​ಬಾಸ್​ ಕೊಟ್ಟಿದ್ದ ಬುದ್ಧಿವಂತರ ಆಟದಿಂದ ಫ್ರೆಂಡ್‌ಶಿಪ್‌ಗೆ ಪೂರ್ಣವಿರಾಮ ಬಿತ್ತಾ ಅಂತ ವೀಕ್ಷಕರಲ್ಲಿ ಗೊಂದಲ ಮನೆ ಮಾಡಿದೆ.
View this post on Instagram
ಟಾಸ್ಕ್​ ಆಡುತ್ತಿದ್ದ ಉಗ್ರಂ ಮಂಜು ಅವರು ಬುದ್ಧಿವಂತಿಕೆಯಿಂದ ಆಡಿದ್ದರು. ಆಗ ಗೌತಮಿ ಹಾಗೂ ಮೋಕ್ಷಿತಾ ಅವರ ಆಟವನ್ನು ನೋಡಿ ಬೇಸರ ಹೊರ ಹಾಕಿದ್ದಾರೆ. ಈ ಮೂವರ ಜಗಳ ಶುರುವಾಗಿದ್ದು ಹೇಗೆ? ಈ ಜಗಳಕ್ಕೆ ಮುಖ್ಯ ಕಾರಣವೇನು? ಇದಾದ ಬಳಿಕ ಏನೆಲ್ಲಾ ಆಯ್ತು? ಎಂಬುವುದರ ಬಗ್ಗೆ ಇಂದಿನ ಎಪಿಸೋಡ್​ ಮೂಲಕ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us