/newsfirstlive-kannada/media/post_attachments/wp-content/uploads/2025/05/gouthami6.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದರು.
ಸತ್ಯ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದು ಗೌತಮಿ ಜಾಧವ್, ಈ ಸೀರಿಯಲ್ ಬಳಿಕ ಬಿಗ್ಬಾಸ್ ಸೀಸನ್ 11ಕ್ಕೂ ಹೋದರು. ಬಿಗ್ಬಾಸ್ನಿಂದ ಆಚೆ ಬಂದ ಬಳಿ ನಟಿ ಗೌತಮಿ ಜಾದವ್ ಯಾವುದೇ ಪ್ರಾಜಕ್ಟ್ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ನಿರ್ದೇಶಕಿ ಸ್ಪಪ್ನ ಕೃಷ್ಣ ಅವರ ಗರಡಿಯಲ್ಲಿ ಮೂಡಿ ಬರುತ್ತಿರೋ ಸೀರಿಯಲ್ಗೆ ಸ್ಟಾರ್ ನಟಿ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ.
ಆದ್ರೆ ದಿಢೀರ್ ಅಂತ ಗೌತಮಿ ಜಾಧವ್ ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಸತ್ಯ ಸೀರಿಯಲ್ನಲ್ಲಿ ಟಾಮ್ ಬಾಯ್ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಗೌತಮಿ ಅವರ ಲುಕ್ ಕೊಂಚ ಬದಲಾಗಿದೆ. ಮೊದಲ ಪ್ರೋಮೋದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದರು. ಸದ್ಯ ಈಗ ನಟಿ ಗೌತಮಿ ‘ಭಾರ್ಗವಿ LL.B’ ಧಾರಾವಾಹಿ ಕಾಣಿಸಿಕೊಂಡಿದ್ದಾರೆ.
View this post on Instagram
ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸುತ್ತಿದ್ದಾರೆ. ಇದೇ ಧಾರಾವಾಹಿಯಲ್ಲಿ ಭಾರ್ಗವಿಗೆ ಪ್ರಾಣಾಪಾಯ ಎದುರಾಗಿದ್ದು, ಅವಳನ್ನು ಕಾಪಾಡಲು ಗೌತಮಿ ಜಾಧವ್ ಅವರ ಆಗಮನ ಆಗಿದೆ. ವಿಶೇಷ ಅತಿಥಿ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ. ಅಷ್ಟೇ ಅಲ್ಲದೇ ವಿಲನ್ ಮುಖಕ್ಕೆ ಡಿಚ್ಚಿ ಹೊಡೆದು ಖಡಕ್ ಡೈಲಾಗ್ ಹೊಡೆದಿದ್ದಾರೆ. ಅಲ್ಲದೇ ‘ಭಾರ್ಗವಿ LL.B’ ಧಾರಾವಾಹಿಯ ಶೂಟಿಂಗ್ ಕ್ಲಿಪ್ವೊಂದನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ