ಹಿರಿಯ ನಾಗರಿಕರಿಗೆ ಬಿಗ್​ ಶಾಕ್​ ಕೊಟ್ಟ ಸರ್ಕಾರ; ಈ ಡೇಟ್ ಒಳಗೆ ದಾಖಲೆ ಕೊಡದಿದ್ರೆ ಪಿಂಚಣಿ ರದ್ದು!

author-image
Ganesh Nachikethu
Updated On
ಹಿರಿಯ ನಾಗರಿಕರಿಗೆ ಬಿಗ್​ ಶಾಕ್​ ಕೊಟ್ಟ ಸರ್ಕಾರ; ಈ ಡೇಟ್ ಒಳಗೆ ದಾಖಲೆ ಕೊಡದಿದ್ರೆ ಪಿಂಚಣಿ ರದ್ದು!
Advertisment
  • ಪಿಂಚಣಿ ನಂಬಿಕೊಂಡು ಜೀವನ ಸಾಗಿಸುತ್ತಿರೋ ಹಿರಿಯ ನಾಗರಿಕರು
  • ಹಿರಿಯ ನಾಗರಿಕರಿಗೆ ಬಿಗ್​ ಶಾಕ್​ ಕೊಟ್ಟ ನರೇಂದ್ರ ಮೋದಿ ಸರ್ಕಾರ!
  • ಆ ಸರ್ಟಿಫಿಕೇಟ್​ ಸಲ್ಲಿಸದೆ ಹೋದಲ್ಲಿ ಪಿಂಚಣಿ ರದ್ದಾಗುವುದು ಪಕ್ಕಾ

ಕೋವಿಡ್​ ನಂತರದಲ್ಲಿ ಎಷ್ಟೋ ಜನ ಸರ್ಕಾರದ ಪಿಂಚಣಿ ಹಣವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಈಗ ಪಿಂಚಣಿ ನಂಬಿಕೊಂಡು ಜೀವನ ಸಾಗಿಸುತ್ತಿರೋರಿಗೆ ಸರ್ಕಾರ ಬಿಗ್​ ಶಾಕ್​ ಕೊಟ್ಟಿದೆ. ಎಂದಿನಂತೆ ಈ ವರ್ಷ ಕೂಡ ಪಿಂಚಣಿ ಪಡೆಯಲು ಸರ್ಟಿಫಿಕೇಟ್ ಸಲ್ಲಿಸುವುದು ಮುಖ್ಯ. ಒಂದು ವೇಳೆ ನೀವು ಆ ಸರ್ಟಿಫಿಕೇಟ್​​ ಸಲ್ಲಿಸದಿದ್ರೆ ಪಿಂಚಣಿ ರದ್ದಾಗುವುದು ಗ್ಯಾರಂಟಿ!

ಯೆಸ್​​, ಈ ವರ್ಷ ಕೂಡ ಅಕ್ಟೋಬರ್​ನಿಂದಲೇ ಪಿಂಚಣಿ ಪಡೆಯೋಕೆ ಜೀವನ್ ಪ್ರಮಾಣ ಪತ್ರ ಸಲ್ಲಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪಿಂಚಣಿದಾರರು ಈ ಸರ್ಟಿಫಿಕೇಟ್​ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.

ಲೈಫ್​​ ಸರ್ಟಿಫಿಕೇಟ್​​ ವ್ಯಾಲಿಡಿಟಿ ಎಷ್ಟು?

2024ರ ಅಕ್ಟೋಬರ್ 1ನೇ ತಾರೀಕಿನಿಂದಲೇ ನೀವು ಲೈಫ್​​​ ಸರ್ಟಿಫಿಕೇಟ್​ ಸಲ್ಲಿಸಿದ್ರೆ ಮುಂದಿನ ವರ್ಷ ನವೆಂಬರ್​​​ ತಿಂಗಳವರೆಗೆ ಚಾಲ್ತಿಯಲ್ಲಿ ಇರಲಿದೆ. ಮತ್ತೆ ಮುಂದಿನ ವರ್ಷ ಈ ದಾಖಲೆ ಸಲ್ಲಿಸಲೇಬೇಕು ಎಂಬುದು ರೂಲ್ಸ್​. ನಿವೃತ್ತಿ ನಂತರ ಸುಗಮವಾಗಿ ಜೀವನ ನಡೆಸೋ ಹಿರಿಯ ನಾಗರಿಕರಿಗೆ ಈ ಪಿಂಚಣೆ ಪ್ರಮುಖ ಆದಾಯ. 60 ರಿಂದ 80 ವರ್ಷ ವಯಸ್ಸಿನ ಎಲ್ಲರೂ ಮಾಸಿಕ ಪಿಂಚಣಿ ಪಡೆಯಲು ಜೀವನ್ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

ಸರ್ಟಿಫಿಕೇಟ್ ಸಲ್ಲಿಸಲು ಬೇಕಾದ ದಾಖಲೆಗಳು

ಇನ್ನೂ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಆಧಾರ್ ಸಂಖ್ಯೆ, ಪಿಪಿಒ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ನೀಡಬೇಕು. ಈ ದಾಖಲೆಗಳನ್ನು ನೀಡುವ ಮೂಲಕ ಲೈಫ್ ಸರ್ಟಿಫಿಕೆಟ್ ಸಲ್ಲಿಸಬಹುದು.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ 2ನೇ ಟಿ20; ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ; ಸ್ಟಾರ್​ ಆಟಗಾರರೇ ಔಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment