/newsfirstlive-kannada/media/post_attachments/wp-content/uploads/2025/04/ALL-PARTY-1.jpg)
ಪಹಲ್ಗಾಮ್ ದಾಳಿ ಸಂಬಂಧ ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಈ ಸಭೆಯಲ್ಲಿ ಭದ್ರತಾ ಲೋಪ ಆಗಿರೋದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಏನೂ ತಪ್ಪಾಗಿಲ್ಲದಿದ್ದರೆ, ನಾವು ಇಲ್ಲಿ ಏಕೆ (ಸಭೆಯಲ್ಲಿ) ಕುಳಿತುಕೊಳ್ಳುತ್ತಿದ್ದೆವು? ಕೆಲವು ಕಡೆ ಲೋಪಗಳಾಗಿವೆ, ಅದನ್ನು ಕಂಡುಹಿಡಿಯಬೇಕು ಅಂತಾ ಆಡಳಿತ ಪಕ್ಷದ ನಾಯಕರೊಬ್ಬರು ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಂತೂ, ಇಂತೂ ತವರಿನಲ್ಲಿ ಗೆದ್ದ ಆರ್ಸಿಬಿ; ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ಪಾಟೀದಾರ್..?
ಸಭೆಯಲ್ಲಿ ಭದ್ರತಾ ಶಿಷ್ಟಾಚಾರಗಳ ವೈಫಲ್ಯದ ಬಗ್ಗೆ ವಿಪಕ್ಷಗಳು ಪ್ರಶ್ನೆ ಮಾಡಿವೆ. ಭದ್ರತಾ ಪಡೆಗಳು ಎಲ್ಲಿದ್ದವು? ಕೇಂದ್ರ ಮೀಸಲು ಪೊಲೀಸ್ ಪಡೆ ಎಲ್ಲಿತ್ತು? ಎಂದು ವಿಪಕ್ಷ ನಾಯಕರು ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ದಾಳಿಯಾದ ಪಹಲ್ಗಾಮ್ನ ಬೈಸರನ್ ಸ್ಥಳವು ಸಾಂಪ್ರದಾಯಿಕವಾಗಿ ಅಮರನಾಥ ಯಾತ್ರೆಯವರೆಗೆ (ಜುನ್, ಜುಲೈ ತನಕ) ಪ್ರವಾಸಿಗರಿಗೆ ನಿರ್ಬಂಧ ಇರುತ್ತದೆ. ಆದರೆ, ಬೈಸರನ್ ಪ್ರದೇಶವನ್ನು ತೆರೆಯುವ ಮೊದಲು ಸ್ಥಳೀಯ ಅಧಿಕಾರಿಗಳು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿಲ್ಲ ಎಂದು ಸರ್ಕಾರ ತಿಳಿಸಿದೆಯಂತೆ.
ಸಭೆಯಲ್ಲಿ ಭಾಗಿಯಾದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಸಭೆಯಲ್ಲಿ ಎಲ್ಲರೂ ಖಂಡಿಸಿದ್ರು. ಯಾವುದೇ ಕ್ರಮ ಕೈಗೊಳ್ಳಲು ವಿರೋಧ ಪಕ್ಷವು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ ರಾಹುಲ್ ಗಾಂಧಿ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆ ಪ್ರಯತ್ನಗಳ ಬಗ್ಗೆ ಚರ್ಚೆಯಾಗಿದ್ದು, ಸರ್ಕಾರ ಯಾವುದೇ ಕ್ರಮಕೈಗೊಂಡರೂ ನಮ್ಮ ಬೆಂಬಲವಿದೆ ಎಂದಿದ್ದಾರೆ.
ಇದನ್ನೂ ಓದಿ: 2 ಗಂಟೆಗಳ ಕಾಲ ಸರ್ವಪಕ್ಷ ಸಭೆ; ಗಂಭೀರ ಚರ್ಚೆಯಲ್ಲಿ ರಾಹುಲ್ ಗಾಂಧಿ ಏನಂದ್ರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ