/newsfirstlive-kannada/media/post_attachments/wp-content/uploads/2024/02/nimhans-hospital-bangalore-1.jpg)
ದೇಶಾದ್ಯಂತ ನಾಳೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ OPD ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ದೇಶಾದ್ಯಂತ ಖಾಸಗಿ ಆಸ್ಪತ್ರೆ ಬಂದ್ ಮಾಡಲು ಕರೆ ನೀಡಲಾಗಿದೆ. ನಾಳೆ ಬಂದ್ ಎಫೆಕ್ಟ್ ರೋಗಿಗಳಿಗೆ ತಟ್ಟಲಿದೆ.
ಇದನ್ನೂ ಓದಿ: ಥೂ ನೀಚ.. ಕೊಲ್ಕತ್ತಾ ರೇಪ್ & ಮರ್ಡರ್ ಕೇಸ್ಗೆ ಹೊಸ ಟ್ವಿಸ್ಟ್; ಸಾಮೂಹಿಕ ಅತ್ಯಾಚಾರದ ಸುಳಿವು!
ಆಸ್ಪತ್ರೆ ಬಂದ್‌ಗೆ ಕಾರಣವೇನು?
ಕೊಲ್ಕತ್ತಾದ ಆರ್.ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣವನ್ನು ಖಂಡಿಸಿ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಮೂಲೆ, ಮೂಲೆಯಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಕೊಲೆಗೆ ಕಾರಣರಾದರನ್ನು ಶೀಘ್ರವೇ ಗಲ್ಲುಶಿಕ್ಷೆಗೆ ಗುರಿ ಮಾಡಲು ಆಗ್ರಹಿಸಲಾಗುತ್ತಿದೆ.
ಕೊಲ್ಕತ್ತಾ ವೈದ್ಯೆಯ ಕೊಲೆ ಪ್ರಕರಣವನ್ನು ಖಂಡಿಸಿ ನಾಳೆ ದೇಶಾದ್ಯಂತ ಖಾಸಗಿ, ಸರ್ಕಾರಿ ಆಸ್ಪತ್ರೆಗಳನ್ನು ಬಂದ್ ಮಾಡಲಾಗುತ್ತಿದೆ. ಅಂದ್ರೆ ಆಸ್ಪತ್ರೆಗಳ ಓಪಿಡಿ, ಶಸ್ತ್ರಚಿಕಿತ್ಸೆಯ ಸೇವೆಯೂ ಸ್ಥಗಿತವಾಗಲಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ವಿನಯ್ ಅಗರವಾಲ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ:ಗಂಡನಿಂದಲೇ ಅಮಾನುಷ ಕೃತ್ಯ; ಹೆಂಡತಿಯ ಬೈಕ್ಗೆ ಕಟ್ಟಿ ಎಳೆದೊಯ್ತು ವಿಕೃತಿ.. ಕಾರಣ ರಿವೀಲ್
ಕೊಲ್ಕತ್ತಾದ ಮೃತ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕು. ಹಿಂಸಾಚಾರದ ವಿರುದ್ಧ ವೈದ್ಯರಿಗೆ ರಕ್ಷಣೆ ಒದಗಿಸಬೇಕು. ಆಸ್ಪತ್ರೆಗಳನ್ನು ಸೇಫ್ ಝೋನ್ ಎಂದು ಘೋಷಿಸಲು IMA ಆಗ್ರಹಿಸಿದೆ. ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ ಈಗಾಗಲೇ ತೀವ್ರ ಹೋರಾಟ ನಡೆಸುತ್ತಾ ಇದ್ದು ನಾಳೆಯೂ ಬಂದ್ ಮುಂದುವರಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕದಲ್ಲೂ ಬಂದ್, ಬಂದ್, ಬಂದ್!
ನಾಳೆ ಇಡೀ ದೇಶಾದ್ಯಂತ ನಡೆಯುತ್ತಿರುವ ಆಸ್ಪತ್ರೆ ಬಂದ್ ಬಿಸಿ ರಾಜ್ಯದ ಜನರಿಗೂ ತಟ್ಟಲಿದೆ. ನಾಳೆ ಬೆಳಗ್ಗೆ 6 ಗಂಟೆಿಯಿಂದಲೇ IMA, PHANA ಅಡಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳ OPD ಬಂದ್ ಮಾಡಲಾಗುತ್ತಿದೆ.
ಇದನ್ನೂ ಓದಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ, ಕೆಜಿಎಫ್-2 ಕಮಾಲ್.. ಪ್ರಶಸ್ತಿಗಳ ಪಟ್ಟಿ ಇಲ್ಲಿದೆ!
ನಾಳೆ ಏನಿರುತ್ತೆ? ಏನಿರಲ್ಲ?
ನಾಳೆ ಕೊಲ್ಕತ್ತಾ ವೈದ್ಯೆಯ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲಾ ಆಸ್ಪತ್ರೆಗಳ ಓಪಿಡಿ ಬಂದ್ ಆಗಲಿದ್ದು, ಎಲ್ಲಾ ಅಗತ್ಯ ಸೇವೆಗಳು ಇರುವುದಿಲ್ಲ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಮಾತ್ರ ಲಭ್ಯ ಇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ