/newsfirstlive-kannada/media/post_attachments/wp-content/uploads/2025/05/MONEY.jpg)
ಆಸ್ತಿ ಖರೀದಿ ಹಾಗೂ ಮಾರಾಟಗಾರರಿಗೆ ರಾಜ್ಯ ಸರ್ಕಾರ ಆದಾಯ ತೆರಿಗೆ ಅಸ್ತ್ರ ಪ್ರಯೋಗಿಸಿ ಶಾಕ್ ಕೊಟ್ಟಿದೆ.. ₹30 ಲಕ್ಷ ಮೇಲಿನ ಆಸ್ತಿ ನೋಂದಣಿಗೆ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಬ್ಲಾಕ್ ಮನಿ ವೈಟ್ ಮಾಡುವ ದಂಧೆ ಹಾಗೂ ಬೇನಾಮಿ ಆಸ್ತಿ ವಹಿವಾಟು ನಿಯಂತ್ರಣಕ್ಕೆ ಸರ್ಕಾರ ಮುನ್ನುಡಿ ಬರೆದಿದೆ.
ಬೇನಾಮಿ ಆಸ್ತಿ ಖರೀದಿಸಿ ಕಳ್ಳಾಟ ಆಡುವವರ ವಿರುದ್ಧ ಸರ್ಕಾರ ಸಮರ ಸಾರಿದೆ. ಬೇನಾಮಿ ಆಸ್ತಿ ವಹಿವಾಟು ನಿಯಂತ್ರಸಿಲು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಐಟಿ ಆಸ್ತ್ರ ಪ್ರಯೋಗಿಸಿದೆ, 30 ಲಕ್ಷ ಮೇಲಿನ ಆಸ್ತಿ ನೋಂದಣಿಗೆ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ..
₹30 ಲಕ್ಷ ಮೇಲ್ಪಟ್ಟ ಆಸ್ತಿ ಖರೀದಿ ಮೇಲೆ ಇನ್ಮುಂದೆ IT ಕಣ್ಣು
ರಾಜ್ಯದಲ್ಲಿ ಇನ್ಮುಂದೆ 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ನೋಂದಣಿ ವೇಳೆ ಖರೀದಿದಾರರು ಹಾಗೂ ಮಾರಾಟಗಾರರು ಪಾನ್ ಸಂಖ್ಯೆ ಸೇರಿ ಎಲ್ಲಾ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಸುತ್ತೋಲೆ ಹೊರಡಿಸಿದೆ..
ಇದನ್ನೂ ಓದಿ: ಪ್ಲೇ-ಆಫ್ ಕನಸಿಗೆ ಮಳೆರಾಯನ ಕಾಟ.. ಚಿನ್ನಸ್ವಾಮಿಯಲ್ಲಿ ಮಳೆ ಮಳೆ..! ಮ್ಯಾಚ್ ಕತೆ ಏನು..?
ಒಂದು ವೇಳೆ ಆಸ್ತಿ ತೆರಿಗೆ ವಿವರಗಳನ್ನ ಸಲ್ಲಿಸದಿದ್ದರೇ ನಿಮ್ಮ ಆಸ್ತಿ ನೋಂದಣಿಯೇ ಆಗುವುದಿಲ್ಲ ಎಂದು ನೋಂದಣಿ & ಮುದ್ರಾಂಕ ಇಲಾಖೆ ತಿಳಿಸಿದೆ.. ಈ ಮೂಲಕ ಸರ್ಕಾರ ಬೇನಾಮಿ ಆಸ್ತಿ ವಹಿವಾಟು ನಿಯಂತ್ರಣಕ್ಕೆ ಮುನ್ನುಡಿ ಬರದಿದೆ..
ಏನಿದು ಸುತ್ತೋಲೆ?
ಮುದ್ರಾಂಕ & ನೋಂದಣಿ ಆಯುಕ್ತರಾದ ಕೆ.ಎ.ದಯಾನಂದ್, ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.. ಈ ಸುತ್ತೋಲೆಯಲ್ಲಿ 30 ಲಕ್ಷ ಮೇಲ್ಪಟ್ಟ ಆಸ್ತಿ ವಹಿವಾಟು ಮಾಹಿತಿಯನ್ನ ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು ಹಾಗೂ ಮಾಹಿತಿಯನ್ನ ಅರ್ಜಿದಾರರಿಂದ ಅವರ ಸಹಿಯೊಂದಿಗೆ ಪಡೆಯಬೇಕು, ಜೊತೆಗೆ ಎಲ್ಲಾ ದಾಖಲೆಗಳನ್ನ ಪರಿಶೀಲಿಸಿ ಸ್ವಯಂ ದೃಢೀಕರಣ ಪಡೆಯಬೇಕು, ಬಳಿಕ ದಸ್ತಾವೇಜು ಹಾಳೆ ಜೊತೆ ಅಡಕಗಳಾಗಿ ಸ್ಕ್ಯಾನ್ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.. ಹಾಗೇ ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಆಸ್ತಿ ನೋಂದಣಿ ಕೆಲಸ ಆಗುವುದಿಲ್ಲ ಅಂತ ಸ್ಪಷ್ಟ ಪಡಿಸಿದೆ.
ಈ ಸುತ್ತೋಲೆ ಮೂಲಕ ಬೇನಾಮಿ ಆಸ್ತಿ ಖರೀದಿ ವಹಿವಾಟಿಗೆ ಕಣ್ಣಿಡಲು ಸರ್ಕಾರ ತಂತ್ರ ರೂಪಿಸಿದೆ.. ಒಟ್ಟಾರೆ, ಸರ್ಕಾರ ಬೇನಾಮಿ ಆಸ್ತಿ ಖರೀದಿಸಿ ವಂಚಿಸುತ್ತಿದ್ದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇನ್ಮೇಲಾದ್ರು ಈ ಕಳ್ಳಾಟಕ್ಕೆ ಬ್ರೇಕ್ ಬೀಳಲಿದ್ಯಾ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ: ಅಭಿಮಾನದ ಹೆಸರಲ್ಲಿ ಚಾಲೆಂಜ್.. ಇದೆಂಥ ಪರಿಸ್ಥಿತಿ ತಂದ್ಕೊಂಡ್ರು ಬುದ್ಧಿಗೇಡಿಗಳು..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ