newsfirstkannada.com

ಗೋಬಿ ಮಂಚೂರಿ ತಿನ್ನೋರಿಗೆ ಬಿಗ್​ ಶಾಕ್​​​; ನೀವು ಓದಲೇಬೇಕಾದ ಸ್ಟೋರಿ ಇದು!

Share :

Published March 11, 2024 at 6:03am

Update March 11, 2024 at 6:04am

    ಗೋಬಿ ನಿರಂತರವಾಗಿ ದೇಹ ಸೇರಿದ್ರೆ ಮೆದುಳಿಗೂ ಎಫೆಕ್ಟ್

    ಆರೋಗ್ಯ ಇಲಾಖೆ ಗೋಬಿ ಬ್ಯಾನ್ ಬಗ್ಗೆ ಅಧಿಕೃತ ಆದೇಶ

    ಸರ್ಕಾರದ ಗೋಬಿ ಬ್ಯಾನ್ ನಿರ್ಧಾರ ಆಹಾರ ಪ್ರಿಯರಿಗೆ ಶಾಕ್

ಬೆಂಗಳೂರು: ಇವತ್ತಿನ ಜನರೇಷನ್​ವರಿಗೆ ಫಾಸ್ಟ್ ಫುಡ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಅದರಲ್ಲೂ ಗೋಬಿ ಮಂಚೂರಿ ಅಂದ್ರೆ ಪಂಚ ಪ್ರಾಣ. ಈ ಗೋಬಿ ಮಂಚೂರಿಯನ್ನ ಕೆಲ ದಿನಗಳ ಹಿಂದಷ್ಟೆ ಗೋವಾ ಬ್ಯಾನ್ ಮಾಡಿತ್ತು. ಆದ್ರೀಗ ಕರ್ನಾಟಕದಲ್ಲೂ ಗೋಬಿ ಮಂಚೂರಿ ಬ್ಯಾನ್​ಗೆ ಚಿಂತನೆ ನಡೆದಿದ್ದು, ಫುಡ್​ ಪ್ರಿಯರಿಗೆ ಬಿಗ್ ಶಾಕ್​ ಎದುರಾಗಿದೆ. ಅಷ್ಟಕ್ಕೂ ಗೋಬಿ ಮಂಚೂರಿ ಬ್ಯಾನ್​ಗೆ ಕಾರಣವೇನು ಎಂದು ಫಾಸ್ಟ್ ಫುಡ್ ಪ್ರಿಯರಿಗೆ ಪ್ರಶ್ನೆ ಕಾಡುತ್ತಿದೆ.

ಗೋಬಿ ಮಂಚೂರಿ, ಗೋಬಿ ಚಿಲ್ಲಿ, ಗೋಬಿ ಡ್ರೈ ಆಹಾ ಈ ಐಟಂ ಹೆಸರು ಕೇಳ್ತಿದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಬೆಂಗಳೂರಿನಂತ ಮೆಟ್ರೋ ಸಿಟಿಗಳಲ್ಲಿ ಜನ ಫಾಸ್ಟ್​ ಫುಡ್​​ಗೆ ಅಡಿಕ್ಟ್ ಆಗೋದು ಕಾಮನ್. ಅದ್ರಲ್ಲೂ ಗೋಬಿ ಮಂಚೂರಿ ಅಂದ್ರೆ ಜನ ಪ್ರಾಣನೇ ಬಿಡ್ತಾರೆ. ಊಟ ಇಲ್ಲ ಅಂದ್ರೂ ಒಂದು ಪ್ಲೇಟ್ ಗೋಬಿ ತಿಂದು ಹೊಟ್ಟೆ ತುಂಬಿಸಿಕೊಳ್ಳೋರು ಇದಾರೆ. ಆದ್ರೆ, ಬಾಯಿ ಚಪ್ಪರಿಸಿ ಸವಿಯುವ ಈ ಗೋಬಿ ಮಂಚೂರಿಯನ್ನ ಕೆಲ ದಿನಗಳ ಹಿಂದಷ್ಟೆ ಗೋವಾ ಸರ್ಕಾರ ಬ್ಯಾನ್ ಮಾಡಿತ್ತು. ಆದ್ರೀಗ ಕರ್ನಾಟಕದಲ್ಲೂ ಗೋಬಿ ಬ್ಯಾನ್ ಆಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಗೋಬಿ ಮಂಚೂರಿ ನಿಷೇಧಕ್ಕೆ ಕಾರಣವೇನು?

ನೆರೆಯ ತಮಿಳುನಾಡು ಮತ್ತು ಪುದುಚೇರಿಯಲ್ಲಿನಿಷೇಧಿಸಲಾಗಿರುವ ‘ಕಾಟನ್‌ ಕ್ಯಾಂಡಿ’ಮತ್ತು ಗೋಬಿ ಮಂಚೂರಿಯನ್ನೂ ರಾಜ್ಯದಲ್ಲೂ ನಿಷೇಧಿಸುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಸರ್ಕಾರ ಗೋಬಿ ಪ್ರಿಯರಿಗೆ ಶಾಕ್​ ಕೊಟ್ಟಿದೆ. ಬೇಬಿ ಕಾರ್ನ್​ ಮಂಚೂರಿ.. ಆಲೂ ಮಂಚೂರಿ, ಗೋಬಿ ಮಂಚೂರಿ, ಪಾಲಕ್​ ಮಂಚೂರಿ, ವೆಜ್​ ಮಂಚೂರಿ, ಡ್ರೈ ಗೋಬಿ, ಸೆಮಿ ಡ್ರೈ ಗೋಮಿ, ಗ್ರೇವಿ ಗೋಬಿ. ಈ ಗೋಬಿ ಲಿಸ್ಟ್ ಬಗ್ಗೆ ಹೇಳ್ತಾ ಹೋದ್ರೆ ದೊಡ್ಡದಾಗ್ತನೆ ಹೋಗುತ್ತೆ. ಆದ್ರೀಗ ಎಲ್ಲ ಗೋಬಿ ಐಟಂಗಳಿಗೆ ಸರ್ಕಾರ ನಿಷೇಧ ಹೇರೋದಕ್ಕೆ ಮುಂದಾಗಿದೆ. ಇದ್ರ ಜೊತೆಗೆ ಕಾಟನ್ ಕ್ಯಾಂಡಿಗೂ ಸರ್ಕಾರ ಕಡಿವಾಣ ಹಾಕೋದಕ್ಕೆ ತೀರ್ಮಾನಿಸಿದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದೆ. ಈ ವರದಿ ಈಗ ಆರೋಗ್ಯ ಇಲಾಖೆ ಕೈ ಸೇರಿದೆ.

ಈಗಾಗಲೇ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನ FSSAI ಸಂಗ್ರಹಿಸಿದ್ದು, ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಾದರಿ ಟೆಸ್ಟ್​​ ಮಾಡಲಾಗಿದೆ. ಟೆಸ್ಟಿಂಗ್ ವೇಳೆ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಇರೋದು ಪತ್ತೆಯಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್‌-ಬಿ ರಾಸಾಯನಿಕ ಅಂಶ ಪತ್ತೆಯಾಗಿದ್ರೆ, ಇತ್ತ ಗೋಬಿ ಮಂಚೂರಿಯಲ್ಲಿ‌ ಸನ್‌ಸೆಟ್‌ ಯೆಲ್ಲೊ‌ ಬಣ್ಣ ಮತ್ತು ಟಾಟ್ರ್ರಾಜಿನ್‌ ಪತ್ತೆಯಾಗಿದೆ. ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್‌-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್‌ಸೆಟ್‌ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರ್ರಾಜಿನ್‌’ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಎರಡೂ ತಿನಿಸುಗಳನ್ನು ನಿಷೇಧಿಸಲು ಮುಂದಾಗಿದೆ.

ಏನಿದು ರೋಡ್​ಮೈನ್ ಬಿ.. ಪರಿಣಾಮವೇನು?

ಕಾಟನ್ ಕ್ಯಾಂಡಿಯಲ್ಲಿ ಪತ್ತೆಯಾಗಿರುವ ರೋಡ್​ಮೈನ್ ಬಿ ರಾಸಾಯನಿಕವನ್ನು, ಜವಳಿ, ಕಾಗದ, ಚರ್ಮದ ಉದ್ಯಮಗಳಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕಾಗಿ ಬಳಸಲಾಗುತ್ತೆ. ಈ ರಾಸಾಯನಿಕ ಆಹಾರದ ಮೂಲಕ ದೇಹ ಸೇರಿದ್ರೆ, ಕ್ಯಾನ್ಸರ್ ಖಾಯಿಲೆಗೆ ತುತ್ತಾಗುವ ಸಂಭವವಿದೆ. ಇದು ಕಾಟನ್ ಕ್ಯಾಂಡಿಯಲ್ಲಿ ಮಾತ್ರವಲ್ಲ, ಸಿಹಿ ತಿಂಡಿಗಳಾದ ಬಣ್ಣದ ಮಿಠಾಯಿಗಳಲ್ಲೂ ಇದು ಕಂಡು ಬರುತ್ತೆ. ಇದು ನಿರಂತರವಾಗಿ ದೇಹ ಸೇರಿದ್ರೆ ಮೆದುಳಿಗೂ ತುಂಬಾ ಎಪೆಕ್ಟ್ ಆಗುವ ಸಾಧ್ಯತೆಯಿದೆ. ಸರ್ಕಾರದ ಗೋಬಿ ಬ್ಯಾನ್ ನಿರ್ಧಾರ ಆಹಾರ ಪ್ರಿಯರಿಗೆ ಸದ್ಯ ಶಾಕ್ ನೀಡಿದೆ. ಆರೋಗ್ಯ ಇಲಾಖೆ 100 ಕ್ಕೂ ಹೆಚ್ಚು ಕಡೆ ಸಂಗ್ರಹಿಸಿದ ಮಾದರಿಯಲ್ಲಿ ಗೋಬಿ ಮಂಚೂರಿ ಅಸುರಕ್ಷಿತ ಅಂತ ವರದಿ ಬಂದಿದೆ. ಹೀಗಾಗಿ ಸೋಮವಾರ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಮಹತ್ವದ ಸುದ್ಧಿಗೋಷ್ಟಿ ನಡೆಸಲಿದ್ದಾರೆ. ವರದಿ ಪರಿಶೀಲನೆ ಬಳಿಕ ಆರೋಗ್ಯ ಇಲಾಖೆ ಗೋಬಿ ಬ್ಯಾನ್ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ. ಒಂದ್ಕಡೆ ಗೋಬಿ ಬ್ಯಾನ್ ಫುಡ್ಡಿಗಳಿಗೆ ಶಾಕ್ ನೀಡಿದ್ರೆ, ಮತ್ತೊಂದ್ಕಡೆ ಗೋಬಿ ಮಂಚೂರಿ ವ್ಯಾಪರವನ್ನೇ ಆಧಾರ ಮಾಡ್ಕೊಂಡಿದ್ದ ಅದೆಷ್ಟೋ ಕುಟುಂಬಗಳು ಬೀದಿಗೆ ಬರೋ ಆತಂಕ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋಬಿ ಮಂಚೂರಿ ತಿನ್ನೋರಿಗೆ ಬಿಗ್​ ಶಾಕ್​​​; ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2024/03/gobi.jpg

Load More