/newsfirstlive-kannada/media/post_attachments/wp-content/uploads/2025/03/Dinesh-Gundu-rao-1.jpg)
ರಾಜ್ಯಾದ್ಯಂತ ಕೋವಿಡ್ ಕೇಸ್ಗಳು ಹೆಚ್ಚಾಗ್ತಿದ್ದಂತೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೊನಾ ಪಾಸಿಟಿವ್ ಬರುವವರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಮುನ್ನೆಚ್ಚರಿಕಾ ಕ್ರಮಗಳ ನಡುವೆಯೂ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಹೆಚ್ಚಾಗಿದೆ.
ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 148ಕ್ಕೆ ಏರಿಕೆ
ಒಂದೇ ವಾರದಲ್ಲಿ ಕೊರೊನಾ ಸೋಂಕಿಗೆ ಎರಡು ಬಲಿಯಾಗಿದೆ. ಕೊರೊನಾ ವೈರಸ್‌ಗೆ ಬೆಂಗಳೂರಿನಲ್ಲಿ ಮೊದಲ ಬಲಿಯಾಗಿದ್ರೆ ಇದೀಗ ಕೋವಿಡ್-19 ಮತ್ತೊಂದು ಬಲಿ ಪಡೆದು ತನ್ನ ಖಾತೆಯನ್ನ ಬೆಳಗಾವಿಯಲ್ಲಿ ಓಪನ್ ಮಾಡಿದೆ. ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ವೈಟ್ ಫೀಲ್ಡ್ ಮೂಲದ 84 ವರ್ಷದ ವ್ಯಕ್ತಿಯನ್ನ ಕೊರೊನಾ ಬಲಿ ತೆಗೆದುಕೊಂಡಿತ್ತು.. ಕೊರೊನಾ ಸೋಂಕಿತರಾಗಿದ್ದ ಬೆಳಗಾವಿಯ ಬೆನಕನಹಳ್ಳಿ ಗ್ರಾಮದ 70 ವರ್ಷದ ವೃದ್ಧರೊಬ್ಬರು ಮೃತ ಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 42 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 148ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಅವಿವಾಹಿತರಿಗೆ ಶುಭ ಸುದ್ದಿ, ರಿಯಲ್ ಎಸ್ಟೇಟ್, ಭೂ ವ್ಯವಹಾರ ಮಾಡುವವರು ಎಚ್ಚರದಿಂದಿರಿ
ಸಾವಿನ ಕೊರೊನಾ!
- ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 148ಕ್ಕೆ ಏರಿಕೆ
- ಕಳೆದ 24 ಗಂಟೆಯಲ್ಲಿ 42 ಹೊಸ ಕೊರೊನಾ ಪ್ರಕರಣ
- ಕಳೆದ 24 ಗಂಟೆಯಲ್ಲಿ 19 ಜನ ಸೋಂಕಿನಿಂದ ಗುಣಮುಖ
- ಕಳೆದ 24 ಗಂಟೆಯಲ್ಲಿ 513 ಮಂದಿಗೆ ಕೊರೊನಾ ಪರೀಕ್ಷೆ
- ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಸೋಂಕಿತರಿಗೆ ಚಿಕಿತ್ಸೆ
- ಖಾಸಗಿ ಆಸ್ಪತ್ರೆಯಲ್ಲಿ 6 ಸೋಂಕಿತರ ದಾಖಲಿಸಿ ಚಿಕಿತ್ಸೆ
- ರಾಜ್ಯದಲ್ಲಿ 33 ಸೋಂಕಿತರಿಗೆ ಹೋಮ್ ಐಸೋಲೇಶನ್
- ಕಳೆದ 24 ಗಂಟೆಯಲ್ಲಿ ಕೊರೊನಾ ಪಾಸಿಟಿವ್ ರೇಟ್ 8.18%
ಇದನ್ನೂ ಓದಿ: ನದಿಯಲ್ಲಿ ಸಿಕ್ಕಿಕೊಂಡ ಟೊಯೋಟೊ ಫಾರ್ಚುನರ್ ಕಾರು.. ಕ್ಷಣದಲ್ಲೇ ಎಳೆದುಕೊಟ್ಟ ಆನೆ -Video
ಚಿಕ್ಕಬಳ್ಳಾಪುರ ಜಿಲ್ಲೆಗೂ ಮಹಾಮಾರಿ ಕೊರೊನಾ ವಕ್ಕರಿಸಿದ್ದು, 13 ಸ್ಯಾಂಪಲ್ಗಳ ಪೈಕಿ ನಾಲ್ವರಿಗೆ ಪಾಸಿಟಿವ್ ದೃಢಪಟ್ಟಿದೆ. ಆರೋಗ್ಯ ಇಲಾಖೆ ಕಳೆದೆರಡು ದಿನಗಳಿಂದ ಒಟ್ಟು 13 ಜನರ ಸ್ಯಾಂಪಲ್ಗಳನ್ನ ಲ್ಯಾಬ್ಗೆ ಕಳಿಸಿತ್ತು. ಗರ್ಭಿಣಿ ಸೇರಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಪಾಸಿಟಿವ್ ಬಂದಿದೆ. ಮೂವರು ಮನೆಯಲ್ಲೇ ಕ್ವಾರಂಟೀನ್ ಆಗಿದ್ರೆ.. ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಲು ತಜ್ಞ ವೈದ್ಯರಿಗೆ ಆರೋಗ್ಯ ಇಲಾಖೆ ಭರ್ಜರಿ ಗಿಫ್ಟ್ ನೀಡಿದೆ. NHM ಅಡಿಯಲ್ಲಿ ನೇಮಕವಾಗುವ ಗುತ್ತಿಗೆ ವೈದ್ಯರ ವೇತನವನ್ನ ಹೆಚ್ಚಿಸಿ ಆದೇಶಿಸಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: RCB ಗೆಲುವಿನ ಕ್ರೆಡಿಟ್ ಯಾರಿಗೆ..? ಕ್ಯಾಪ್ಟನ್ ರಜತ್ ಹೇಳಿದ ಹೆಸರು ಹ್ಯಾಜಲ್ವುಡ್ ಅಲ್ಲವೇ ಅಲ್ಲ!
ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿ ತಜ್ಞ ವೈದ್ಯರ ಸೇವೆ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, NHM ಅಡಿಯಲ್ಲಿ ನೇಮಕವಾಗುವ ಗುತ್ತಿಗೆ ವೈದ್ಯರ ವೇತನ ಹೆಚ್ಚಿಸಿ ಆದೇಶಿಸಲಾಗಿದೆ. ಕೇಂದ್ರದ ಅನುಮತಿ ಪಡೆದು ಶೇ 25 ರಿಂದ 50 ರಷ್ಟು ವೇತನ ಹೆಚ್ಚಳ ಮಾಡಿದ್ದು, 45 ಸಾವಿರ ಇದ್ದ MBBS ವೈದ್ಯರ ವೇತನವನ್ನು 75 ಸಾವಿರಕ್ಕೆ ಪರಿಷ್ಕರಿಸಲಾಗಿದೆ. 1,10,000 ರೂಪಾಯಿ ಪಡೆಯುತ್ತಿದ್ದ ತಜ್ಞ ವೈದ್ಯರ ವೇತನವನ್ನು 1,40,000ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ನರ್ಸ್ಗಳ ವೇತನ 18 ರಿಂದ 22 ಸಾವಿರಕ್ಕೆ ಹೆಚ್ಚಿಸಲಾಗಿದೆ. ವೇತನದಲ್ಲಿನ ಭಾರಿ ಹೆಚ್ಚಳದಿಂದಾಗಿ ನಾವು ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಅನೇಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಹಾಗೂ ತಜ್ಞ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬರಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆ ಎಷ್ಟೇ ಅಲರ್ಟ್ ಆಗಿದ್ರು ಚೀನಾ ವೈರಸ್ ತನ್ನ ಪಾರುಪತ್ಯ ವಿಸ್ತರಿಸುತ್ತಾ ಸಾಗ್ತಿದೆ. ಸಾವಿನ ಸಂಖ್ಯೆ ಎರಡಕ್ಕೇರಿರೋದು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ: ಅಪ್ಪನ ಸೆಕೆಂಡ್ ಇನ್ನಿಂಗ್ಸ್ಗೆ ಆಲ್ ದೀ ಬೆಸ್ಟ್.. ಸೂರ್ಯಕುಮಾರ್ ಹೀಗೆ ಹೇಳಿದ್ದು ಯಾಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ