/newsfirstlive-kannada/media/post_attachments/wp-content/uploads/2024/06/DARSHAN_GANG-1.jpg)
ನಟ ದರ್ಶನ್ ಅಂಡ್ ಗ್ಯಾಂಗ್ಗೆ ಜೈಲೇ ಗತಿಯಾಗಿದೆ. ಈಗಾಗಲೇ ಜೈಲಿನಲ್ಲಿರುವ ಡಿ ಗ್ಯಾಂಗ್ಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಈ ಮಧ್ಯೆ ಮನೆ ಊಟ ಮತ್ತು ಹಾಸಿಗೆಗಾಗಿ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಿದ್ದು, ವಿಚಾರಣೆ ಮುಂದೂಡಿಕೆ ಆಗಿದೆ. ದರ್ಶನ್ ಪರಪ್ಪನ ಅಗ್ರಹಾರ ಪಾಲಾಗಿ ಬರೋಬ್ಬರಿ 28 ದಿನಗಳು ಕಳೆದಿವೆ ಒಂದ್ಕಡೆ ಕಣ್ಣಿಗೆ ನಿದ್ದೆಯಿಲ್ಲ. ಮತ್ತೊಂದ್ಕಡೆ ಊಟ ಸೇರ್ತಿಲ್ಲ. ಮನೆ ಊಟವೂ ಸಿಗ್ತಿಲ್ಲ. ಈ ನಡುವೆ ಸೆರೆಮನೆ ವಾಸವೂ ಮುಂದುವರೆಯುತ್ತಲೇ ಇದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ಗೆ ಮತ್ತೊಮ್ಮೆ ಜೈಲೇ ಗತಿಯಾಗಿದೆ. ಕೋರ್ಟ್ ಮತ್ತೊಮ್ಮೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಡಿ ಗ್ಯಾಂಗ್ ನಿನ್ನೆ ವಿಚಾರಣೆಗೆ ಹಾಜರಾಗಿದ್ರು. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್ ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಮನೆ ಊಟ, ಪುಸ್ತಕ, ಹಾಸಿಗೆಗಾಗಿ ಮನವಿ ಮಾಡಿ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನ ಇವತ್ತು ಹೈಕೋರ್ಟ್ನಲ್ಲಿ ನಡೆಸಲಾಯ್ತು.
ಇದನ್ನೂ ಓದಿ: ಪುಣೆಯಲ್ಲಿ ಶರದ್ ಪವಾರ್ ಪಕ್ಷದ ನಾಯಕನ ಮಗನಿಂದ ಭೀಕರ ಕಾರು ಅಪಘಾತ; ಈ ಪಟ್ಟಣಕ್ಕೆ ಏನಾಗ್ತಿದೆ..?
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನ್ಯಾಯಾಮೂರ್ತಿ ಎಸ್.ಆರ್ ಕೃಷ್ಣಕುಮಾರ್ರ ಪೀಠದ ಮುಂದೆ ದರ್ಶನ್ ಪರ ಹಿರಿಯ ವಕೀಲರಾದ ಕೆ ಎನ್ ಫಣೀಂದ್ರ. ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಿದ್ರು. ಈ ವೇಳೆ ಎರಡು ಕಡೆಯ ವರದಿ ಸ್ವೀಕರಿಸಿ ಇಂದು ಮಧಾಹ್ನಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ದರ್ಶನ್ ಮನವಿ ಪುರಸ್ಕರಿಸದಂತೆ ಸರ್ಕಾರದಿಂದ ಆಕ್ಷೇಪ ಸಲ್ಲಿಸಲಾಗಿದ್ದು, ಸರ್ಕಾರದಿಂದ ಆಕ್ಷೇಪ ಸಲ್ಲಿಸಲು ಕಾರಣವೇನು ಅನ್ನೋ EXCLUSIVE ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ.
ಸರ್ಕಾರದ ಆಕ್ಷೇಪ ಏನು?
ದರ್ಶನ್ ಅರೆಸ್ಟ್ ಆಗಿ ಜೆಸಿಗೆ ಹೋಗುವ ತನಕ ಯಾವುದೇ ಮೆಡಿಕಲ್ ಸಮಸ್ಯೆ ಇರಲಿಲ್ಲ ಚೆನ್ನಾಗಿದ್ರು. ಆದ್ರೀಗ ಏಕಾಏಕಿ ಆರೋಗ್ಯ ಸಮಸ್ಯೆ ಆಗ್ತಿದೆ ಅಂತಿದ್ದಾರೆ. ಈಗಲೂ ಸಮಸ್ಯೆ ಇದೆ ಅಂತ ಮೆಡಿಕಲ್ ರೆಕಾರ್ಡ್ನಲ್ಲಿ ಇಲ್ಲ, ಸುಮ್ಮನೆ ಕೋರ್ಟ್ ಮುಂದೆ ಒರಲ್ ಕಥೆ ಹೇಳ್ತಿದ್ದಾರೆ. ದರ್ಶನ್ ಸಲ್ಲಿಸಿರುವ ಅರ್ಜಿಗೆ ಇಲ್ಲಿ ಮಾನ್ಯತೆಯೇ ಇಲ್ಲ, ಈ ಅರ್ಜಿ ಸಲ್ಲಿಸುವ ಮೊದಲು ಸೆ. 30 Karnataka prisons act ಅಡಿ ಮೊದಲು ಐಜಿ ಬಳಿ ಕೇಳಬೇಕಿತ್ತು. ಅವರ ಮನವಿಯ ಮೇಲೆ ಐಜಿ ರೆಗ್ಯೂಲೇಷನ್ ಮಾಡ್ತಾರೆ. ಆದರೆ ಈ ಪ್ರಕರಣದಲ್ಲಿ ಎಸ್ಪಿ, ಐಜಿಗೆ ಮನವಿಯೇ ಮಾಡಿಲ್ಲ. ಅಷ್ಟೆ ಅಲ್ಲ, ಪ್ರೋಡ್ಯೂಸ್ ಮಾಡಿದಾಗ ಕೋರ್ಟ್ಗೂ ಮನವಿ ಮಾಡಿಲ್ಲ. ರಿಟ್ ಅರ್ಜಿ ಸಲ್ಲಿಸುವ ಮೊದಲು ಕಾನೂನು ಪ್ರಕ್ರಿಯೆ ಮಾಡಬೇಕು. ಆದರೆ ಅದನ್ನ ಯಾವುದು ಮಾಡದೇ ನೇರವಾಗಿ ಬಂದಿದ್ದಾರೆ. ಮೂಲಭೂತ ಹಕ್ಕು ಉಲ್ಲಂಘನೆ ಆದ್ರೆ ಮಾತ್ರ ರಿಟ್ ಬರುತ್ತೆ. ಹೀಗಾಗಿ ದರ್ಶನ್ರ ಈ ಅರ್ಜಿ ಊರ್ಜಿತ ಆಗುವುದೇ ಇಲ್ಲ ಎಂದು ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ.
ಇನ್ನೂ, ವಿಚಾರಣೆ ವೇಳೆ ಮನೆ ಊಟ ಮತ್ತು ಬಟ್ಟೆ ನೀಡಲು ಇರುವ ಅವಕಾಶಗಳನ್ನ ಉಲ್ಲೇಖಿಸಲಾಯ್ತು. 1974 ಕರ್ನಾಟಕ ಪ್ರಿಸನ್ ರೂಲ್ಸ್ನ ಚಾಪ್ಟರ್ 12ರಲ್ಲಿ ಡಯಟ್ರಿನ ಪ್ಲಾನ್ ಇದೆ. ಟ್ರಾಯಲ್ ಪ್ರಿಸನರ್ ಮತ್ತು ನಾನ್ ಟ್ರಾಯಲ್ ಪ್ರಿಸನರ್ಗೆ ಕೆಲ ಅವಕಾಶ ಇದೆ. ಆರೋಗ್ಯ ಸಮಸ್ಸೆ ಏನಿದೆ ಅನ್ನೋದರ ಮೇಲೆ ನಿರ್ಧಾರ ಮಾಡಲಾಗುತ್ತೆ. ಅದರ ಪ್ರಕಾರ ವಾರದಲ್ಲಿ ಎರಡು ಬಾರಿ ಮಟನ್ ನೀಡಲು ಅವಕಾಶ ಇದೆ. ಆದ್ರೆ, ಸರ್ಕಾರ ಪರ ಎಸ್ಪಿಪಿ ಹಾಸಿಗೆ ಮತ್ತು ಚಮಚ ನೀಡದಂತೆ ವಾದ ಮಂಡಿಸಿದ್ರು. ಕರ್ನಾಟಕ ಪ್ರಿಸನ್ಸ್ ಮತ್ತು ಕರೆಕ್ಷನಲ್ ಮ್ಯಾನವಲ್ 2021ರಡಿಯ ಹೊಸ ರೂಲ್ಸ್ ಅನ್ನ ಉಲ್ಲೇಖಿಸಿದ್ರು. ಚಾಪ್ಟರ್ 38ರ ರೂಲ್ 720, 728 ಅಡಿಯಲ್ಲಿ ಕೆಲ ನಿಯಮ ಇದ್ದು,ಅದರ ಪ್ರಕಾರ ಮರ್ಡರ್ ಆರೋಪಿಗೆ ಈ ಅವಕಾಶಗಳ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ರು. ಒಂದ್ವೇಳೆ ಅವಕಾಶ ನೀಡಿದ್ರೆ ಸೂಸೈಡ್ಗೆ ಅಥವಾ ಎಸ್ಕೇಪ್ ಆಗಲು ಸಾಧ್ಯತೆ ಇರುತ್ತೆ ಎಂದು ರೂಲ್ಸ್ ಅನ್ನ ಉಲ್ಲೇಖಿಸಿದ್ರು. ದರ್ಶನ್ ಅಂಡ್ ಗ್ಯಾಂಗ್ ಸೆರೆಮನೆ ವಾಸದಿಂದ ಸದ್ಯಕ್ಕಂತೂ ಬಿಡುಗಡೆ ಭಾಗ್ಯವಿಲ್ಲ. ಆದ್ರೆ, ದರ್ಶನ್ಗೆ ಮನೆಯೂಟದ ಭಾಗ್ಯವಾದ್ರೂ ಸಿಗುತ್ತಾ ಅನ್ನೋದು ನಾಳೆ ಗೊತ್ತಾಗಲಿದೆ.
- ಅನಾರೋಗ್ಯ ಇದ್ದರಷ್ಟೇ ಆರೋಪಿಗೆ ಮನೆ ಊಟದ ಅವಕಾಶ
- ರೂಲ್ 742 ಅಡಿ ಅನಾರೋಗ್ಯ ಇದ್ರೆ ಜೈಲಲ್ಲಿ ಚಿಕಿತ್ಸೆಗೆ ಅವಕಾಶ
- ರೂಲ್ 322 ಅಡಿ ಆರೋಪಿಗೆ ಡಯಟ್ ಊಟ ನೀಡಬಹುದು
- ಮೆಡಿಕಲ್ ಆಫೀಸ್ ನಿರ್ಧಾರದ ಮೇಲೆ ಡಯಟ್ ನೀಡಬಹುದು
- ರೂಲ್ 335 ಅಡಿ ಸಿಎಂಒ & ಎಸ್ಪಿ ಜೈಲರ್ ಚೆಕ್ ಮಾಡಬಹುದು
- ರೂಲ್ 338 ಅಡಿ ಹಾಸ್ಪಿಟಲ್ ಡಯಟ್ ನೀಡಲು ಅವಕಾಶ ಇದೆ
- 340 ಅಡಿ ಊಟ ಸರಿಯಿಲ್ಲ ಅಂತಾ ಕಂಪ್ಲೇಂಟ್ ಮಾಡಬಹುದು
- ಆರೋಪಿ ಸುಳ್ಳು ಕಂಪ್ಲೇಂಟ್ ಕೊಟ್ರೆ, ಶಿಕ್ಷೆಗೂ ಗುರಿಯಾಗಬಹುದು
- ರೂಲ್ 345 ಹೊರಗಿನ ಆಹಾರ ನೀಡಲು ಇರುವ ಅವಕಾಶ ಇರುತ್ತೆ
- ಅದು ಸೆ. 30 ಪ್ರಿಸನ್ಸ್ ಆ್ಯಕ್ಟ್ ಅಡಿ ಐಜಿಪಿ ಪ್ರಿಸನ್ಸ್ ಬಳಿ ಕೇಳಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ