/newsfirstlive-kannada/media/post_attachments/wp-content/uploads/2024/08/wedding.jpg)
ಸಾಯೋ ಮುಂಚೆ ಮಕ್ಕಳ ಮದುವೆ ನೋಡಬೇಕು ಎಂಬುದು ಬಹುತೇಕ ಪೋಷಕರ ಕನಸು. ಕೆಲವು ಪೋಷಕರು ಹಠಕ್ಕೆ ಬಿದ್ದು ಮಕ್ಕಳ ಮದುವೆ ಮಾಡಿಸುತ್ತಾರೆ. ಇನ್ನು ಕೆಲವು ಪೋಷಕರು ಮಕ್ಕಳ ಆಸೆಯಂತೆ ಸುಮ್ಮನಾಗಿ ಬಿಡುತ್ತಾರೆ. ಆದರೆ ಇಲ್ಲೊಂದು ದೇಶ ಮದುವೆ ಮಾಡಿಕೊಳ್ಳಿ ಎಂದು ಜನರ ಬೆನ್ನು ಬಿದ್ದಿದೆ. ಸಾಲದಕ್ಕೆ ಮದ್ವೆಯಾಗಿ ಮಕ್ಕಳು ಮಾಡಿಕೊಂಡರೆ 31 ಲಕ್ಷ ನೀಡುವುದಾಗಿ ಘೋಷಿಸಿದೆ.
ಭಾರತದಲ್ಲಿ ಮದುವೆ ಅಂದರೆ ಅದ್ಧೂರಿ ಮತ್ತು ದುಬಾರಿ. ಬಹುತೇಕರು ಮದುವೆ ಅಂದಾಗ ಸುಮ್ಮನಾಗೋದೆ ಅದಕ್ಕೆ. ಸಾಲ ಮಾಡಿ ಮದ್ವೆ ಆಗಬೇಕಾಗುತ್ತದೆ ಎಂಬ ಕಾರಣಕ್ಕೆ ಮದ್ವೆ ಅಂದ್ರೆ ಒಂದು ಹೆಜ್ಜೆ ಹಿಂದಕ್ಕೆ ಹಾಕುತ್ತಾರೆ. ಆದರಂತೆಯೇ ಇಲ್ಲೊಂದು ದೇಶದಲ್ಲೂ ಅದೇ ಆಗಿದೆ. ಜನರು ಮದ್ವೆಯಾಗಲೂ ಆಸಕ್ತಿಯೇ ತೋರಿಸುತ್ತಿಲ್ಲವಂತೆ. ಅದಕ್ಕಾಗಿ ಸರ್ಕಾರವೇ ಮದುವೆ ಆಗಲು ಪ್ರಚೋದನೆ ನೀಡುತ್ತಿದೆ. ಮಾತ್ರವಲ್ಲದೆ 31 ಲಕ್ಷ ನೀಡುವುದಾಗಿ ಭರ್ಜರಿ ಆಫರ್ ಘೋಷಿಸಿದೆ.
ಇದನ್ನೂ ಓದಿ: ಬೆಂಗಳೂರಿಗೂ ಆಸ್ನಾ ಎಫೆಕ್ಟ್.. ನಿನ್ನೆಯಂತೆ ಇಂದು ಬರಲಿದೆ ಮಳೆ.. ಬೇಗ ಗೂಡು ಸೇರಿಕೊಳ್ಳಿ
ಜಪಾನ್ ದೇಶದಲ್ಲಿ ಮದುವೆಯಾಗಲು ಪ್ರಚೋದನೆ ನೀಡಿರುವ ಸಂಗತಿ ಕೇಳಿರಬಹುದು. ಆದರೆ ಇದೀಗ ದಕ್ಷಿಣ ಕೊರಿಯದ್ದೂ ಇದೇ ಸಂಗತಿ. ಮದುವೆಯಾದರೆ 31 ಲಕ್ಷ ರೂಪಾಯಿ ನೀಡುವುದಾಗಿ ಸರ್ಕಾರವೇ ಘೋಷಿಸಿದೆ. ಮದ್ವೆಯಾಗ್ರೋ ದಮ್ಮಯ್ಯಾ ಅಂತಿದೆ.
ದಕ್ಷಿಣ ಕೊರಿಯಾದಲ್ಲಿ ಯುವ ಜನಾಂಗ ಮದುವೆ- ಮಕ್ಕಳ ಬಗ್ಗೆ ಸರಿಯಾಗಿ ಆಸಕ್ತಿ ತೋರಿಸುತ್ತಿಲ್ಲವಂತೆ. ಹೀಗಾಗಿ ಅಲ್ಲಿನ ಜನನ ಪ್ರಮಾಣ ಕುಸಿದಿದ್ದು, ಅದನ್ನು ಸಮ ಪ್ರಮಾಣಕ್ಕೆ ತರಲು ಸರ್ಕಾರ ಹೋರಾಡುತ್ತಿದೆ. ಭವಿಷ್ಯದಲ್ಲಿ ಎದುರಾಗುವ ಬಹು ದೊಡ್ಡ ಅಪಾಯವನ್ನು ತಪ್ಪಿಸಲು ಸರ್ಕಾರ ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಕೆಲಸ.. 8ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು! 63 ಸಾವಿರ ರೂಪಾಯಿ ಸಂಬಳ
ಸದ್ಯ ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣ 0.72ರಷ್ಟಿದೆ ಎನ್ನಲಾಗುತ್ತಿದ್ದು, 2023ರ ಜನಗಣತಿ ಪ್ರಕಾರ ಒಟ್ಟಾರೆ ಜನಸಂಖ್ಯೆಯ 49.84 ಮಿಲಿಯನ್ ಎಂದು ಬಹಿರಂಗಪಡಿಸಿದೆ. ಇದಲ್ಲದೆ ಜನನ ಪ್ರಮಾಣ ಹೆಚ್ಚಿಸಲು ಅಲ್ಲಿನ ಸರ್ಕಾರ ನಾನಾ ಪ್ಲಾನ್ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ