ಮುಖ್ಯ ಶಿಕ್ಷಕನೇ ಕಳ್ಳನಾದ ಕತೆ ಇದು.. ಇದೆಂಥಾ ಅವಸ್ಥೆ
ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಹಾಲಿನ ಪೌಡರ್ ನೀಡುವ ಸರ್ಕಾರ
1Kg ತೂಕದ 10 ಪ್ಯಾಕೆಟ್ಸ್ ಕದ್ದೊಯ್ಯುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದ
ಮೈಸೂರು: ಶಾಲಾ ಮುಖ್ಯ ಶಿಕ್ಷಕನೇ ಮಕ್ಕಳಿಗೆ ಕೊಡುವ ಹಾಲಿನ ಪೌಡರ್ ಮೇಲೆ ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಹಾಲಿನ ಪೌಡರ್ ಕದ್ದೊಯ್ಯುವಾಗಲೇ ಮುಖ್ಯ ಶಿಕ್ಷಕ ಸಿಕ್ಕಿಬಿದ್ದಿದ್ದಾನೆ.
ಎಚ್.ಡಿ ಕೋಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಈ ನೀಚ ಕೃತ್ಯವೆಸಗಿದ್ದಾನೆ. ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ನಿನ್ನೆಗಿಂತ ಇಂದು ಜಾಸ್ತಿ! ಒಳಹರಿವು ಹೆಚ್ಚಿಸುತ್ತಿದ್ದಾಳೆ ತುಂಗಭದ್ರೆ.. ಸದ್ಯ ನೀರಿನ ಪ್ರಮಾಣ ಎಷ್ಟಿದೆ?
ಸರ್ಕಾರ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಈ ಹಾಲಿನ ಪೌಡರ್ ನೀಡಲಾಗುತ್ತದೆ. ಆದರೆ ಬಿಇಒ ಕಚೇರಿ ಹತ್ತಿರದಲ್ಲೇ ಇದ್ದರೂ ಶಾಲಾ ಮುಖ್ಯ ಶಿಕ್ಷಕ ಹಾಲಿನ ಪೌಡರ್ ಕದ್ದಿದ್ದಾನೆ. 1 ಕೆ.ಜಿ ತೂಕದ 10 ಪ್ಯಾಕೆಟ್ ಗಳ ಕದ್ದೊಯ್ಯುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಸಮೋಸಾ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು
ಮುಖ್ಯ ಶಿಕ್ಷಕನನ್ನು ಹಿಡಿದು ಬಿಇಒಗೆ ಸರ್ವಜನಿಕರು ಮಾಹಿತಿ ನೀಡಿದರೂ ಸಮಯಕ್ಕನಿಹುಣವಾಗಿ ಅಧಿಕಾರಿಗಳು ಬಂದಿಲ್ಲ.
ಪಟ್ಟಣದಲ್ಲೇ ಈ ಪರಿಸ್ಥಿತಿ ಆದರೆ, ಗ್ರಾಮೀಣ ಭಾಗದ ಶಾಲೆಗಳ ಗತಿ ಏನು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ತಡವಾಗಿ ಬಿಆರ್ಸಿ ಕೃಷ್ಣಯ್ಯ ಸ್ಥಳಕ್ಕಾಗಮಿಸಿದ್ದಾರೆ. ಕೃತ್ಯವೆಸಗಿದ ಶಿಕ್ಷಕನ ಮೇಲೆ ಶಿಸ್ತು ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ