newsfirstkannada.com

ಸರ್ಕಾರಿ ಶಾಲೆಗಾಗಿ ಲೋಕಸಭೆ, ಉಪಚುನಾವಣೆ ಬಹಿಷ್ಕಾರ ಮಾಡೋದಾಗಿ ಗ್ರಾಮಸ್ಥರು ಎಚ್ಚರಿಕೆ.. ಯಾಕೆ?

Share :

Published March 24, 2024 at 8:58am

    ಶಾಲೆಗೆ ವಿದ್ಯಾರ್ಥಿಗಳು ಬರಬೇಕಾದರೆ ಬಿಂದಿಗೆ, ಬಾಟಲ್ ತರುತ್ತಾರೆ

    ಗ್ರಾಮದ ಸರ್ಕಾರಿ ಶಾಲೆಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ

    ವಿದ್ಯಾರ್ಥಿಗಳು ಪುಸ್ತಕ ಮರೆತು ಬಂದರೂ ಬಿಂದಿಗೆ, ಬಾಟಲ್ ಮರೆಯಲ್ಲ

ಭೀಕರ.. ರಣ ಭೀಕರ.. ಬೇಸಿಗೆಯ ಬಿಸಿಲಿಗೆ ಜಲಮೂಲಗಳು ಬತ್ತಿ ಹೋಗ್ತಿವೆ. ಹನಿ ಹನಿ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ಕುಡಿಯುವ ನೀರಿಗಾಗಿ ಜನ ಗೋಳಾಡ್ತಿದ್ದಾರೆ. ನೀರಿನ ಅಭಾವ ಬರೀ ಸಾಮಾನ್ಯ ಜನರಿಗೆ ಮಾತ್ರ ತಟ್ಟಿಲ್ಲ. ವಿದ್ಯಾರ್ಥಿಗಳಿಗೂ ಜಲಕ್ಷಾಮ ತಟ್ಟಿದೆ. ಪುಸ್ತಕದ ಬದಲಿ ವಿದ್ಯಾರ್ಥಿಗಳು ಬಾಟಲ್, ಬಿಂದಿಗೆ ಹಿಡಿದು ಸ್ಕೂಲ್ ನತ್ತ ಹೆಜ್ಜೆ ಹಾಕ್ತಿದ್ದಾರೆ.

ಸುರಪುರ ತಾಲೂಕಿನ‌ ಮಂಗಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಒಂದೆಡೆ ಕೈಯಲ್ಲಿ ಬಾಟಲಿ ಹಿಡಿದು ಬರುತ್ತಾರೆ. ಮತ್ತೊಂದೆಡೆ ನೀರಿನ ಬಾಟಲ್​, ಚಂಬು ಹಿಡಿದುಕೊಂಡು ಪಾಠ ಕೇಳುತ್ತಾರೆ. ಮಕ್ಕಳು ಹೀಗೇಕೆ ಮಾಡುತ್ತಾರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.

ನೂರಕ್ಕೂ ಅಧಿಕ‌ ಮಕ್ಕಳಿರುವ ಮಂಗಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಂಪೂರ್ಣವಾಗಿ‌ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಬೇಸಿಗೆಯಲ್ಲಿ ನೀರಿಲ್ಲದೇ ವಿದ್ಯಾರ್ಥಿಗಳು ಮನೆಯಿಂದ ಕುಡಿಯಲು ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದ್ವೇಳೆ ವಿದ್ಯಾರ್ಥಿಗಳು ಪುಸ್ತಕ ಮರೆತು ಬಂದ್ರೂ ನೀರಿನ‌ ಬಾಟಲ್ ತರೋದನ್ನು ಮಾತ್ರ ಮರೆಯೋದಿಲ್ಲ. ಯಾಕಂದ್ರೆ ಮಂಗಿಹಾಳ ಗ್ರಾಮದ ಶಾಲೆಯಲ್ಲಿ ನೀರಿನ ವ್ಯವಸ್ಥೆ ಇಲ್ಲ. ಇರುವ ಕೊಳವೆಬಾವಿ ಕೂಡ ನೀರಿಲ್ಲದೇ ಬತ್ತಿಹೋಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ವಂತೆ.

ಶೌಚಾಲಯವಿಲ್ಲ, ಕುಡಿಯೋಕೆ ನೀರಿಲ್ಲ. ಬಾಲಕಿಯರು ಶೌಚಾಕ್ಕೆ ಹೊರಗಡೆ ಹೋಗುತ್ತಾರೆ. ಸರ್ಕಾರ ಸಾಕಷ್ಟು ಅನುದಾನ ಕೊಡುತ್ತದೆ. ಆದರೆ ಅದು ದುರ್ಬಳಕೆ ಆಗುತ್ತಿದೆ. ಮಕ್ಕಳು 1 ಕಿಲೋ ಮೀಟರ್ ದೂರ ಶೌಚಕ್ಕೆ ಹೋಗುತ್ತಾರೆ. ಈ ಶಾಲೆಯಲ್ಲಿ ಶಿಕ್ಷಕರಿಗು ಟಾಯ್ಲೇಟ್​ ಇಲ್ಲ.

ಲೋಹಿತ್ ಕುಮಾರ್, ಎಸ್ ಡಿ‌ಎಮ್ ಸಿ ಅಧ್ಯಕ್ಷ

ಮಂಗಿಹಾಳ ಸರ್ಕಾರಿ ಶಾಲೆಯಲ್ಲಿ ನೀರಿನ ಸಮಸ್ಯೆ ಒಂದೇ ಅಲ್ಲ… ಶೌಚಾಯಲದ ವ್ಯವಸ್ಥೆಯೂ ಇಲ್ಲ.. ಹೀಗಾಗಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೂರು ಮೀಟರ್ ದೂರ ಕ್ರಮಿಸಿ ಬಯಲಿನಲ್ಲೇ ಮೂತ್ರಿವಿಸರ್ಜನೆ ಮಾಡುವ ದುಸ್ಥಿತಿ ಇದೆ. ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ, ಬೇರೆ ಕಡೆ ಸೇರಿಸುತ್ತಿದ್ದಾರಂತೆ. ಹೀಗಾಗಿ ಕೂಡಲೇ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಸುರಪುರ ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೇ ಹೋದರೆ ನಾವು ಮುಂದಿನ ದಿನಗಳಲ್ಲಿ ಲೋಕಸಭೆ ಚುಣಾವಣೆ, ಉಪಚುನಾವಣೆಯನ್ನ ಬಹಿಷ್ಕಾರ ಮಾಡುತ್ತೇವೆ.

ಪ್ರಭು, ಗ್ರಾಮಸ್ಥ

ಹಿಂದೂಳಿದ ಜಿಲ್ಲೆ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಾಕಷ್ಟು‌ ಅನುದಾನ ಬಂದ್ರು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವಂತ್ತಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಶಾಲೆಗಾಗಿ ಲೋಕಸಭೆ, ಉಪಚುನಾವಣೆ ಬಹಿಷ್ಕಾರ ಮಾಡೋದಾಗಿ ಗ್ರಾಮಸ್ಥರು ಎಚ್ಚರಿಕೆ.. ಯಾಕೆ?

https://newsfirstlive.com/wp-content/uploads/2024/03/YDR_SCHOLL_WATER_1.jpg

Load More