10 ಲಕ್ಷ ಭಾರತದ ಕಾಗೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! ಶನಿ ದೇವರ ವಾಹನವನ್ನೇ ಹತ್ಯೆ ಮಾಡ್ತಿದ್ದಾರೆ ಇಲ್ಲಿ!

author-image
AS Harshith
Updated On
10 ಲಕ್ಷ ಭಾರತದ ಕಾಗೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! ಶನಿ ದೇವರ ವಾಹನವನ್ನೇ ಹತ್ಯೆ ಮಾಡ್ತಿದ್ದಾರೆ ಇಲ್ಲಿ!
Advertisment
  • ದುಬಾರಿ ಬೆಲೆಯ ವಿಷ ನೀಡಿ ಲಕ್ಷಾಂತರ ಕಾಗೆಗಳ ಹತ್ಯೆ
  • ಡಿಸೆಂಬರ್​ 31ರ ಒಳಗೆ ಕಾಗೆಗಳನ್ನು ನಿರ್ನಾಮ ಮಾಡಲು ಪ್ಲಾನ್​
  • ಒಂದು ಕೆಜಿ ವಿಷಕ್ಕೆ 5 ಲಕ್ಷ! ನ್ಯೂಜಿಲೆಂಡ್​ನಿಂದ ಆಮದು ಆಗುತ್ತಿದೆ ವಿಷ!

ಕಾಗೆ ಪಕ್ಷಿ ಪ್ರಬೇಧಗಳಲ್ಲಿ ಒಂದು. ಭಾರತದಲ್ಲಿ ಕಾಗೆಗಳನ್ನು ಶನಿ ದೇವರ ವಾಹನ ಎಂದು ಕರೆಯುತ್ತಾರೆ. ಮಾತ್ರವಲ್ಲದೆ, ಪೂಜಿಸುತ್ತಾರೆ. ಆದರೆ ದೇಶವೊಂದು ಭಾರತದ ಮೂಲದ ಒಂದು ಮಿಲಿಯನ್​ ಕಾಗೆಗಳನ್ನು ವಿಷ ಉಣಿಸಿ ಕೊಲ್ಲಲು ಮುಂದಾಗಿದೆ ಎಂದರೆ ನಂಬುತ್ತೀರಾ? ಅಷ್ಟಕ್ಕೂ ಈ ಕಾಗೆಯಿಂದ ಎದುರಾದ ಕಂಟಕವೇನು? ಈ ಸ್ಟೋರಿ ಓದಿ.

ಕಾಗೆ ಇರದ ಊರೇ ಇಲ್ಲ. ಭಾರತದ ಮಾತ್ರವಲ್ಲ, ಪ್ರಪಂಚದ ಬಹುತೇಕ ಪ್ರದೇಶಗಳಲ್ಲಿ ಕಾಗೆಗಳನ್ನು ಕಾಣಬಹುದಾಗಿದೆ. ಅಷ್ಟೇ ಏಕೆ ಬಿಳಿಯ ಕಾಗೆಗಳು ಭೂಮಿ ಮೇಲಿದೆ. ಈ ಕಾಗೆಗಳು ಭೂಮಿ ಮೇಲಿನ ಕೊಳೆತ ವಸ್ತುಗಳನ್ನು ಸೇರಿ ಎಲ್ಲವನ್ನೂ ತಿನ್ನುತ್ತವೆ. ಆ ಮೂಲಕ ಸ್ವಚ್ಛಗೊಳಿಸುವ ಶಕ್ತಿ ಅದಕ್ಕಿದೆ. ಆದರೀಗ ದೇಶವೊಂದು ಭಾರತ ಮೂಲದ 1 ಮಿಲಿಯನ್​ ಕಾಗೆಗಳನ್ನು ಕೊಲ್ಲಲು ಮುಂದಾಗಿದೆ ಎಂದರೆ ನಂಬಲು ಅಸಾಧ್ಯ. ಡಿಸೆಂಬರ್​ 31ರ ಒಳಗೆ ಕಾಗೆಗಳನ್ನು ನಿರ್ನಾಮ ಮಾಡಲು ಹೊರಟಿರೋದು ಸುಳ್ಳಲ್ಲ.

publive-image

ಕೀನ್ಯಾದಲ್ಲಿ ಕಾಗೆಗಳ ಉಪದ್ರ ಜೋರಾಗಿದೆ. ಅಲ್ಲಿನ ಕರಾವಳಿ ಪಟ್ಟಣವಾದ ಮೊಂಬಾಸಾದಲ್ಲಿ ಕಸದ ಬಿಕ್ಕಟ್ಟು ಹೆಚ್ಚಾಗಿದ್ದು, ಕಾಗೆಗಳ ನೆಚ್ಚಿನ ತಾಣವಾಗಿ ಅದು ಬದಲಾಗಿದೆ. ಹೀಗಾಗಿ ಭಾರತೀಯ ಮೂಲದ ಕೊರ್ವಸ್ ಸ್ಪ್ಲೆಂಡೆನ್ಸ್ ಎಂಬ ಕಾಗೆಯನ್ನು ಹತ್ತಿಕ್ಕಲು ಅಲ್ಲಿನ ವನ್ಯಜೀವಿ ಸಂಘ ಮುಂದಾಗಿದೆ.

ಭಾರತದಿಂದ ಕೀನ್ಯಾಗೆ ಬಂದ ಕಾಗೆ!

ಕಾಗೆಗಳು ಸರ್ವಭಕ್ಷಕ. ಬೇರೆ ಪಕ್ಷಿಗಳಂತೆ ಕಾಗೆಗಳು ದೂರ ಊರಿಗೆ ವಲಸೆ ಅಥವಾ ಪ್ರಯಾಣಿಸುವುದು ತೀರಾ ಕಡಿಮೆ. ಆದರೆ ಇದು ಕೀನ್ಯಾ ಪ್ರವೇಶಿಸಿದ್ದು ಹೇಗೆ ಗೊತ್ತಾ?.

ಒಂದು ಮಾತಿನ ಪ್ರಕಾರ, ಬ್ರಿಟಿಷ್​ ಗವರ್ನರ್​ವೋರ್ವ ಭಾರತದಲ್ಲಿ ಕಾಗೆಯನ್ನು ಕಂಡನು. ಅವುಗಳ ಕಾರ್ಯವನ್ನು ಗಮನಿಸಿದನು. ಕಾಗೆಗಳು ಆಫ್ರಿಕಾದಲ್ಲೂ ಇರುವ ಕಸವನ್ನು ತಿಂದು ಸ್ವಚ್ಛಗೊಳಿಸಬಹುದು ಎಂದು ಯೋಚಿಸಿದನು. ಹೀಗಾಗಿ ಆ ಪ್ರದೇಶದಲ್ಲಿ ಕಾಗೆಗಳನ್ನು ಪರಿಚಯಿಸಿದನು ಎಂದು ಹೇಳಲಾಗುತ್ತದೆ.

publive-image

ಮತ್ತೊಂದೆಡೆ ದಕ್ಷಿಣ ಏಷ್ಯಾದಿಂದ ಪ್ರಯಾಣಿಸುವ ಹಗಡುಗಳಲ್ಲಿ ಕಾಗೆಗಳು ಪ್ರಯಾಣಿಸಿ ಆಫ್ರಿಕನ್​ ಖಂಡ ಸೇರಿದವು ಎಂದು ಹೇಳಲಾಗುತ್ತಿದೆ. ಅಂದಹಾಗೆಯೇ 1947ರಲ್ಲಿ ಕೀನ್ಯಾ ದೇಶವು ಕಾಗೆಯನ್ನು ಮೊದಲು ಗುರುತಿಸಿತು. ಆದರೀಗ ಈ ಪಕ್ಷಿಗಳ ಸಂಖ್ಯೆ ತ್ವರಿತವಾಗಿ ಬೆಳೆಯುತ್ತಿದ್ದು, ಇದರಿಂದ ಕೀನ್ಯಾ ಕರಾವಳಿಗೆ ಸಂಕಷ್ಟ ಎದುರಾಗಿದೆ.

ಹೋಟೆಲ್​ ಮಾಲೀಕರಿಗೆ ತೊಂದರೆ

ಕೀನ್ಯಾ ಪ್ರವಾಸೋದ್ಯಮ ಪ್ರದೇಶವಾಗಿದೆ. 3ನೇ ಅತಿದೊಡ್ಡ ವಿದೇಶಿ ವಿನಿಮಯ ಗಳಿಕೆಯನ್ನು ಹೊಂದಿದೆ. ಹೀಗಾಗಿ ಇಲ್ಲಿ ಅನೇಕ ಹೋಟೆಲ್​ಗಳು ರೆಸ್ಟೋರೆಂಟ್​ಗಳನ್ನು ಕಾಣಬಹುದಾಗಿದೆ. ಆದರೆ ಕಾಗೆಗಳ ಸಂಖ್ಯೆಯಿಂದ ಅಲ್ಲಿನ ಪ್ರವಾಸೋದ್ಯಮಕ್ಕೆ ತೊಂದರೆಯಾಗುತ್ತಿದೆ. ಹೋಟೆಲ್​ ಬಳಿ ಬಂದು ಆಹಾರ ತಿನ್ನುವುದು, ಟೇಬಲ್​ ಮೇಲೆ ಹಿಕ್ಕೆ ಹಾಕೋದರಿಂದ ತೊಂದರೆ ಉಂಟು ಮಾಡುತ್ತಿದೆ. ಇದರಿಂದ ಪ್ರವಾಸಿರು ಮತ್ತು ಗ್ರಾಹಕರು ನೆಗೆಟಿವ್ ವಿಮರ್ಶೆ ಮಾಡುತ್ತಿದ್ದಾರೆ ಎಂದು ಹೋಟೆಲ್​ ಮಾಲೀಕರು ದೂರಿದ್ದಾರೆ.

publive-image

ವಿಷವಿಟ್ಟು ಕಾಗೆಗಳನ್ನು ಕೊಲ್ಲಲು ಪ್ಲಾನ್​

ಕಾಗೆಗಳನ್ನು ಕೊಲ್ಲಲು ಕೀನ್ಯಾ ಮುಂದಾಗಿದೆ. ಡಿಸೆಂಬರ್​ 31ರೊಳಗೆ ಕಾಗೆಗಳನ್ನು ಮುಗಿಸಲಿದೆ. ಇದಕ್ಕಾಗಿಯೇ ಕೀನ್ಯಾ ಸರ್ಕಾರ ಸ್ಟಾರ್ಲೈಸೈಡ್​​ ಎಂಬ ವಿಷವನ್ನು ನ್ಯೂಜಿಲೆಂಡ್​ನಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಅಂದಹಾಗೆಯೇ ಒಂದು ಕಿಲೋ ವಿಷದ ಬೆಲೆ ಸುಮಾರು 5 ಲಕ್ಷ ರೂಪಾಯಿಯಾಗಿದೆ. ಹೀಗಾಗಿ ಕಾಗೆಗಳ ಕಾರ್ಯಾಚರಣೆಗೆ 5 ಕೆಜಿ ಬಳಸಲು ಮುಂದಾಗಿದೆ.

ಸ್ಟಾರ್ಲೈಸೈಡ್ ಅತ್ಯಂತ ವಿಷಕಾರಿ ಕೆಮಿಕಲ್​. ಪಕ್ಷಿಗಳನ್ನು ಕೊಲ್ಲಲು ಇದು ಸುಮಾರು 10ರಿಂದ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕಾಗೆಗಳಿಗೆ ಅವುಗಳು ಸೇವಿಸುವ ಮಾಂಸದೊಳಗೆ ಇರಿಸಿ ಕೊಲ್ಲಲು ಇದೀಗ ದೇಶವೊಂದು ಮುಂದಾಗಿದೆ ಅನ್ನೋದೇ ವಿಪರ್ಯಾಸ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment