ಮೈಕ್ರೋ ಫೈನಾನ್ಸ್ ದಾದಾಗಿರಿ ವಿರುದ್ಧ ಹೊಸ ಅಸ್ತ್ರ; ಕಾಗ್ನಿಜಬಲ್ ಅಫೆನ್ಸ್ ಅಂದರೆ ಏನು..?

author-image
Ganesh
Updated On
ಮೈಕ್ರೋ ಫೈನಾನ್ಸ್​ಗೆ ಅಂಕುಶ ರೆಡಿ.. ಇಂದು ಮಹತ್ವದ ನಿರ್ಧಾರ..!
Advertisment
  • ಮೈಕ್ರೋ ಫೈನಾನ್ಸ್​ ವಿರುದ್ಧ ಸರ್ಕಾರದ ನಿರ್ಧಾರ ಏನು?
  • ರಾಜ್ಯದಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ ಮೈಕ್ರೋ ಫೈನಾನ್ಸ್ ಕಾಟ
  • ಹೊಸ ಕಾನೂನಿನಲ್ಲಿ ಮೂರು ಪ್ರಮುಖ ವಿಚಾರಗಳು

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಾದಾಗಿರಿ ಮುಂದುವರಿದಿದೆ. ಆಗಿರುವ ಅನಾಹುತಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದೆ. ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್​ಸ್ಟಿಟ್ಯೂಷನ್ ಆಫ್ ರೆಗುಲೇಷನ್ ಆಫ್‌ ಮನಿ ಲೆಂಡಿಂಗ್ ಬಿಲ್ ತರಲು ಮುಂದಾಗಿದೆ. ಹೊಸ ಕಾಯ್ದೆಯಲ್ಲಿ ಮೂರು ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.

ಮೂರು ಪ್ರಮುಖ ವಿಚಾರ..

  • ಮೈಕ್ರೋ ಫೈನಾನ್ಸ್ ‌ಕಿರುಕುಳ ಕಾಗ್ನಿಜೆಬಲ್ ಅಫೆನ್ಸ್ ಎಂದು ಪರಿಗಣಿಸುವುದು
  • ಹೊಸ ಕಾನೂನಿನ ಅಡಿ ಕೇಸ್ ದಾಖಲಿಸಿದರೆ ಅದು ಜಾಮೀನು ರಹಿತ
  • ಹೊಸ ಕಾಯ್ದೆಯ ಪ್ರಕಾರ ಮೂರು ವರ್ಷ ಕಠಿಣ ಶಿಕ್ಷೆ ವಿಧಿಸುವುದು

ಕಾಗ್ನಿಜಬಲ್ ಅಫೆನ್ಸ್
ಕಾಗ್ನಿಜಬಲ್ ಅಪರಾಧ ಎಂದರೆ ಪೊಲೀಸ್ ಅಧಿಕಾರಿಯು ವಾರೆಂಟ್ ಇಲ್ಲದೆಯೇ ಅಪರಾಧಿಯನ್ನು ಬಂಧಿಸಬಹುದು. ನ್ಯಾಯಾಲಯದ ಅನುಮತಿಯಿಲ್ಲದೇ ತನಿಖೆಯನ್ನು ಪ್ರಾರಂಭಿಸಬಹುದು. ಕಾನೂನಿನ ಪ್ರಕಾರ, ಒಬ್ಬ ಪೊಲೀಸ್ ಅಧಿಕಾರಿಯು ವಾರೆಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೆ ಅಪರಾಧಿಯನ್ನು ಬಂಧಿಸಬಹುದು.

ಇದನ್ನೂ ಓದಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್​ ಗೂಂಡಾಗಿರಿ.. ಸರ್ಕಾರದಿಂದ ಸುಗ್ರೀವಾಜ್ಞೆ ಮೂಗುದಾರ?

ಅಂದರೆ ಪೋಲೀಸರು ತಕ್ಷಣವೇ ಬಂಧಿಸಬಹುದು. ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿ ಕೇಸ್ ದಾಖಲಿಸಲು ಅವಕಾಶ ಇದೆ. ಮೂರು ಪ್ರಮುಖ ಅಂಶಗಳೊಂದಿಗೆ ಕಾಯ್ದೆಯನ್ನು ಕಾನೂನು ಇಲಾಖೆ ಸಿದ್ಧಪಡಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆ ಬಳಿಕ ಸುಗ್ರಿವಾಜ್ಞೆ ತಂದು ಜಾರಿಗೆ ತರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ.. ಮೈಕ್ರೋ ಫೈನಾನ್ಸ್ ಚೆಲ್ಲಾಟಕ್ಕೆ ಏನೇನು ಆಗ್ತಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment