/newsfirstlive-kannada/media/post_attachments/wp-content/uploads/2025/02/MIRCRO-FINANCE.jpg)
ರಾಜ್ಯದಲ್ಲಿ ಗವರ್ನಮೆಂಟ್ ವರ್ಸಸ್ ಗವರ್ನರ್ ಸ್ಥಿತಿ. ಮುಡಾದಿಂದ ಶುರುವಾದ ಈ ವಾರ್​​​, ಮೈಕ್ರೋ ಫೈನಾನ್ಸ್​​ಗೆ ಬಂದು ತಟ್ಟಿದೆ. ಸುಗ್ರೀವಾಜ್ಞೆಗೆ ಮುಂದಾಗಿದ್ದ ಸರ್ಕಾರಕ್ಕೆ ರಾಜ್ಯಪಾಲರು ಶಾಕ್​​ ಕೊಟ್ಟಿದ್ದಾರೆ.. ಈ ಬೆಳವಣಿಗೆ ಕಾಂಗ್ರೆಸ್​​ ನಾಯಕರನ್ನ ಮತ್ತಷ್ಟು ಕೆರಳುವಂತೆ ಮಾಡಿದೆ..
ಸಾಲ ಯಾರಿಗಿಲ್ಲ ಹೇಳಿ, ಅವರವರ ಸಾಮರ್ಥ್ಯ. ಹಾಗಂತ ಸಾಲವೇ ಶೂಲವಾಗಬಾರದು. ಆದ್ರೆ ರಾಜ್ಯದಲ್ಲಿ ಏನಾಗ್ತಿದೆ. ಸಾಲವೇ ಸಾವಿನ ಮನೆಗೆ ಸಾಗಿಸ್ತಿದೆ. ಸತ್ತವರ ಸಂಖ್ಯೆ ಹಾಫ್​ ಸೆಂಚ್ಯೂರಿ ಹತ್ತಿರ ಇದೆ. ರಾಜ್ಯ ಸರ್ಕಾರ ಏನೋ ಕಂಟ್ರೋಲ್​ ಮಾಡೋಕೆ ಸುಗ್ರೀವಾಜ್ಞೆ ಅನ್ನೋ ಬ್ರಹ್ಮಾಸ್ತ್ರ ಪ್ರಯೋಗಿಸ್ತು. ಅದು ಹೋದಷ್ಟೇ ವೇಗ ವಾಪಸ್ಸು ಬಂತು ಇತ್ತ ಕಿರುಕುಳ ಏನಾದ್ರೂ ನಿಂತಿದ್ಯಾ? ಅದು ಇಲ್ಲ..
ರಾಜ್ಯಪಾಲರ ನಿಲುವಿನಿಂದ ಕೆರಳಿದ ಕಾಂಗ್ರೆಸ್​​​ ಪಡೆ!
ಮುಡಾ ಸೇರಿ ಹಲವು ಪ್ರಕರಣದಿಂದ ಗವರ್ನರ್​​​ ವರ್ಸಸ್​​​ ಸರ್ಕಾರ ಅಂತ ಬಿಂಬಿತವಾಗಿದೆ.. ಈ ಹೊತ್ತಲ್ಲಿ ಸುಗ್ರೀವಾಜ್ಞೆಯನ್ನ ರಾಜ್ಯಪಾಲರು ವಾಪಸ್​ ಕಳಿಸಿದ್ದೆ ತಡ, ಸರ್ಕಾರದ ಕಪಾಳಕ್ಕೆ ಬಾರಿಸಿದಂತಿದೆ. ಇದರಿಂದ ಕೆರಳಿರುವ ಸಚಿವರು, ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಕೇವಲ ಕಾಂಗ್ರೆಸ್​ ನಾಯಕರಷ್ಟೇ ಅಲ್ಲ, ಜೆಡಿಎಸ್​​ ಶಾಸಕ ಎಂ.ಟಿ ಕೃಷ್ಣಪ್ಪ ಸಹ ಗರಂ ಆಗಿದ್ದಾರೆ
ಗದಗ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್​ ಹಾವಳಿ ನಿಲ್ತಾನೆ ಇಲ್ಲ.. ಮೈಕ್ರೋ ಫೈನಾನ್ಸ್ ​ಸಿಬ್ಬಂದಿ ಕಾಟಕ್ಕೆ ಬೇಸತ್ತು ಮಹಿಳೆಯರು ಡಿಸಿ ಕಚೇರಿಗೆ ಆಗಮಿಸಿದ್ದಾರೆ.. ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ನೂರಾರು ಮಹಿಳೆಯರು ಕಿರುಕುಳ ಬಗ್ಗೆ ಕಂಪ್ಲೇಂಟ್​​ ಮಾಡಿದ್ದಾರೆ.. ಬಡ್ಡಿಗೆ ಚಕ್ರಬಡ್ಡಿ ಹಾಕಿ ಕಿರುಕುಳ ನೀಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ... ಮಾಂಗಲ್ಯ ಮಾರಿ ಸಾಲ ಕಟ್ಟಿ ಅಂತ ಕೊಟ್ಟಿದ್ದಾರೆ ಂತ ಆರೋಪಿಸಿದ್ದಾರೆ..
ಮಾರ್ಚ್​ 3 ರಿಂದ ಬಜೆಟ್​ ಅಧಿವೇಶನ ಆರಂಭ ಆಗ್ತಿದ್ದು, ಸದನದಲ್ಲೇ ಮಸೂದೆ ಮಂಡನೆ ಆಗುವ ಸಾಧ್ಯತೆ ಇದೆ.. ಉಭಯ ಸದನಗಳಲ್ಲಿ ಮಸೂದೆ ಪಾಸ್​ ಆದ ಬಳಿಕವಾದ್ರೂ ರಾಜ್ಯಪಾಲರು ಅಂಕಿತ ಹಾಕ್ತಾರೋ ಇಲ್ವೋ ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us