Advertisment

ಸಿಎಂ ಸಿದ್ದರಾಮಯ್ಯಗೆ ಡಬಲ್ ಶಾಕ್‌.. ಭೇಟಿಗೆ ರಾಜ್ಯಪಾಲರ ನಿರಾಕರಣೆ; ದೂರುದಾರರಿಂದ ಕೇವಿಯಟ್!

author-image
Gopal Kulkarni
Updated On
ದಿಢೀರ್ ಬ್ರೇಕ್​ಫಾಸ್ಟ್ ಮೀಟಿಂಗ್​ ಕರೆದ ಸಿದ್ದರಾಮಯ್ಯ; ಸಭೆಯಲ್ಲಿ ಪ್ರಮುಖ 8 ವಿಚಾರಗಳು ಚರ್ಚೆ..!
Advertisment
  • ಸಿಎಂ ಸಿದ್ದು ಕಾನೂನು ಹೋರಾಟಕ್ಕೆ ಈಗ ಮತ್ತೊಂದು ಅಡ್ಡಿ ಶುರು
  • ಡಿಸಿಎಂ, ಸಚಿವರ ಭೇಟಿಗೆ ಸಮಯ ನಿರಾಕರಿಸಿದ ರಾಜ್ಯಪಾಲರು
  • ರಿಟ್ ಅರ್ಜಿ ಸಲ್ಲಿಕೆ ಮುನ್ನವೇ ಕೆವಿಯಟ್ ಅರ್ಜಿ ಹೈಕೋರ್ಟ್​ಗೆ ಸಲ್ಲಿಕೆ

ಬೆಂಗಳೂರು: ಮುಡಾ ಹಗರಣದ ಗಂಭೀರ ಆರೋಪ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಗ್ರೀನ್‌ಸಿಗ್ನಲ್ ಸಿಕ್ಕ ಮೇಲೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗುತ್ತಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವರು ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದರು. ಆದರೆ ಗರ್ವನರ್ ಕಚೇರಿಯಿಂದ ಡಿಸಿಎಂ ಹಾಗೂ ಸಚಿವರ ಭೇಟಿಗೆ ಸಮಯ ನಿರಾಕರಿಸಲಾಗಿದೆ.

Advertisment

ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ್ರಾ ಸಿಎಂ ಸಿದ್ದರಾಮಯ್ಯ? ರಾಜ್ಯಪಾಲರು ಕೊಟ್ಟಿರುವ ಅನುಮತಿಯಲ್ಲಿ ಏನೇನಿದೆ ಗೊತ್ತಾ? 

ಮುಡಾ ಹಗರಣದ ಪ್ರಾಸಿಕ್ಯೂಷನ್​ನಿಂದ ಬಚಾವಾಗಲು ಸಿಎಂ ಸಿದ್ದರಾಮಯ್ಯನವರ ಲೀಗಲ್ ಟೀಂ ಈಗಾಗಲೇ ಸಜ್ಜಾಗಿದೆ. ಸಿದ್ದರಾಮಯ್ಯ ಪರವಾಗಿ ರಿಟ್ ಅರ್ಜಿ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಸಿದ್ದು ಲೀಗಲ್ ಟೀಂ ಮಾಡಿಕೊಂಡಿತ್ತು. ಸೀನಿಯರ್ ಪೊನ್ನಣ್ಣ ಅವರು ರಿಟ್ ಅರ್ಜಿ ಸಲ್ಲಿಸಿ, ರಾಜ್ಯಪಾಲರು ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲು ಮುಂದಾಗಿದ್ದರು. ಆದ್ರೆ ಈಗ ಅದಕ್ಕೂ ಕೂಡ ಕಂಟಕ ಬಂದಿದೆ.

ಇದನ್ನೂ ಓದಿ: ಸಿಎಂಗೆ ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ ಎಂದ ಕನ್ಹಯ್ಯ.. ಸಿದ್ದರಾಮಯ್ಯರವರಿಂದ ಬಂದ ತುರ್ತು ಕರೆ ಬಗ್ಗೆ ಹೇಗಿತ್ತು ಅಂದ್ರೆ..

Advertisment

publive-image

ಕೆವಿಯಟ್ ಅರ್ಜಿ ಸಲ್ಲಿಸಿದ ದೂರುದಾರ! 
ಸಿಎಂ ಸಿದ್ದರಾಮಯ್ಯನ ಲೀಗಲ್ ಟೀಂ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸುವ ಮುನ್ನವೇ ದೂರುದಾರ ಪ್ರದೀಪ್​ ಕುಮಾರ್ ಅವರು ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ. ರಿಟ್ ಅರ್ಜಿ ಸಲ್ಲಿಕೆ ಮಾಡಿದ್ರೆ ನಮ್ಮ ವಾದವನ್ನೂ ಕೂಡ ಕೇಳಬೇಕು. ನಮ್ಮ ವಾದವನ್ನು ಆಲಿಸಿದ ಬಳಿಕವೇ ತೀರ್ಪು ನೀಡಬೇಕು ಎಂದು ಮನವಿಯನ್ನು ಮಾಡಲಾಗಿದೆ. ಈ ಮೂಲಕ ಹೈಕೋರ್ಟ್​​ನಲ್ಲಿ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ವೇದಿಕೆ ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment