/newsfirstlive-kannada/media/post_attachments/wp-content/uploads/2024/10/RCR_MALLAMMA.jpg)
ರಾಯಚೂರು: ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಕನ್ನಯ್ಯ ನಾಯ್ಡು, ಬಿ.ಟಿ ಲಲಿತಾ ನಾಯಕ್, ಹೇಮಾ ಚೌದರಿ, ಎಂ ವೀರಪ್ಪ ಮೊಯಿಲಿ ಸೇರಿದಂತೆ ಈ ಸಲ ಒಟ್ಟು 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದರಲ್ಲಿ ಸಹಜ ಹೆರಿಗೆ ಮಾಡುವಲ್ಲಿ ಹೆಸರು ಪಡೆದ ಸೂಲಗಿತ್ತಿ ಮಲ್ಲಮ್ಮ ಎನ್ನುವರಿಗೂ ಪ್ರಶಸ್ತಿ ಒಲಿದು ಬಂದಿದೆ.
ರಾಯಚೂರಿನ ಕವಿತಾಳ ಪಟ್ಟಣದ ನಿವಾಸಿ ಸೂಲಗಿತ್ತಿ ಮಲ್ಲಮ್ಮ ಅವರು ಈಗಲೂ ಸಹಜ ಹೆರಿಗೆ ಮಾಡುತ್ತಾರೆ. ಯಾರಾದರೂ ಕರೆದರೆ ಅವರ ಮನೆಗೆ ಹೋಗಿ ಸಹಜ ಹೆರಿಗೆ ಮಾಡುತ್ತಾರೆ. ಎಷ್ಟೋ ಜನ ಆಸ್ಪತ್ರೆಗಿಂತ ಈ ಸಹಜ ಹೆರಿಗೆಯೇ ಎಷ್ಟೋ ಮೇಲೂ ಎಂದು ಇವರಿಂದಲೇ ಹೆರಿಗೆ ಮಾಡಿಸುತ್ತಾರೆ. ಇಲ್ಲಿವರೆಗೆ ಅಂದರೆ 40 ವರ್ಷಗಳಿಂದ ಮಲ್ಲಮ್ಮ ಸೂಲಗಿತ್ತಿ ಕೆಲಸ ಮಾಡಿಕೊಂಡು ಬರುತ್ತಿದ್ದು 20 ಸಾವಿರಕ್ಕೂ ಹೆಚ್ಚು ಸಹಜ ಹೆರಿಗೆಗಳನ್ನು ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/RCR_MALLAMMA_1.jpg)
ಸದ್ಯ ಈಗ ಮಲ್ಲಮ್ಮಗೆ 75 ವರ್ಷಗಳು ಆಗಿದ್ದು ಈ ವರೆಗಿನ ಅವರ ಸಮಾಜ ಸೇವೆ ಗುರುತಿಸಿ ರಾಜ್ಯ ಸರ್ಕಾರ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಪ್ರಶಸ್ತಿ ಘೋಷಣೆ ಮಾಡಿದ ಸುದ್ದಿ ಕೇಳಿ ಮಲ್ಲಮ್ಮ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ 5 ಲಕ್ಷ ರೂಪಾಯಿ ನಗದು, 25 ಗ್ರಾಂ ಚಿನ್ನದ ಪದಕ ಹಾಗೂ ಫಲ ಪ್ರಧಾನ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us