ವಸತಿ ಗೃಹದಲ್ಲಿ ಸರ್ಕಾರಿ ಉದ್ಯೋಗಿಯ ಶವ ಪತ್ತೆ.. ಭಾರೀ ಅನುಮಾನ

author-image
Ganesh
Updated On
ವಸತಿ ಗೃಹದಲ್ಲಿ ಸರ್ಕಾರಿ ಉದ್ಯೋಗಿಯ ಶವ ಪತ್ತೆ.. ಭಾರೀ ಅನುಮಾನ
Advertisment
  • ವಸತಿ ಗ್ರಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ
  • ಮಹಿಳೆಯ ಶವ ಕಂಡು ಆಘಾತಕ್ಕೆ ಒಳಗಾದ ಕುಟುಂಬಸ್ಥರು
  • ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ, ತನಿಖೆ ಆರಂಭ

ಕಲಬುರಗಿ: ಸಿಎಚ್‌ಸಿಯ ಡಿ ಗ್ರೂಪ್‌ ಉದ್ಯೋಗಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಗ್ರಾಮದಲ್ಲಿ ನಡೆದಿದೆ. ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಮಾಲಾಶ್ರೀ (29) ಮೃತ ದುದೈರ್ವಿ.

ಕುಂಚಾವರಂನ ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲೇ ಸಾವಿಗೆ ಶರಣಾಗಿದ್ದಾರೆ. ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹ ಶಂಕೆ ವ್ಯಕ್ತವಾಗಿದೆ. ಕುಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment