Advertisment

ಹೊಸ ರೂಲ್ಸ್​.. ಎಲ್ಲಾ ದ್ವಿಚಕ್ರ ವಾಹನಗಳಿಗೂ ABS, ಖರೀದಿ ವೇಳೆ 2 ಹೆಲ್ಮೆಟ್ ನೀಡೋದು ಕಡ್ಡಾಯ..!

author-image
Ganesh
Updated On
ಹೊಸ ರೂಲ್ಸ್​.. ಎಲ್ಲಾ ದ್ವಿಚಕ್ರ ವಾಹನಗಳಿಗೂ ABS, ಖರೀದಿ ವೇಳೆ 2 ಹೆಲ್ಮೆಟ್ ನೀಡೋದು ಕಡ್ಡಾಯ..!
Advertisment
  • ರಸ್ತೆ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಮಹತ್ವದ ಹೆಜ್ಜೆ
  • ಡೀಲರ್ಸ್​​ಗಳು ಹೆಲ್ಮೆಟ್​ ಕಡ್ಡಾಯವಾಗಿ ಕೊಡಲೇಬೇಕು
  • 2026 ರಿಂದ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ

ರಸ್ತೆ ಪ್ರಯಾಣದ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸಾರಿಗೆ ಇಲಾಖೆಯು (Transport ministry) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2026 ರಿಂದ ಎಲ್ಲಾ ಮಾದರಿಯ ಹೊಸ ದ್ವಿಚಕ್ರ ವಾಹನಗಳಿಗೆ ಎಬಿಎಸ್​ (anti-lock braking systems) ಕಡ್ಡಾಯವಾಗಿದೆ.

Advertisment

ಇದನ್ನೂ ಓದಿ: ಕಮ್ಮಿ ಬೆಲೆಗೆ ಹೆಚ್ಚು ಸ್ಮಾರ್ಟ್​..! 20,000 ರೂಪಾಯಿ ಒಳಗೆ ಕ್ವಾಲಿಟಿ ಟಿವಿ ಖರೀದಿಸಿ ಆನಂದಿಸಿ..!

ಎಂಜಿನ್ ಸಾಮರ್ಥ್ಯವನ್ನು ಲೆಕ್ಕಿಸದೇ ಎಲ್ಲಾ ಮಾದರಿಯ ದ್ವಿಚಕ್ರ ವಾಹನಗಳಿಗೆ ಈ ನಿಯಮ ಅನ್ವಯ ಆಗಲಿದೆ. ಈ ಮೊದಲು 125 ಸಿಸಿ ಎಂಜಿನ್ ಹೊಂದಿರುವ ದ್ವಿಚಕ್ರ ವಾಹನಗಳಿಗೆ ಸಿಂಗಲ್-ಚಾನಲ್ ಎಬಿಎಸ್ (Single-channel ABS) ಕಡ್ಡಾಯವಾಗಿತ್ತು. ಜೊತೆಗೆ ಡೀಲರ್ಸ್​ಗಳು ದ್ವಿಚಕ್ರ ವಾಹನ ಮಾರಾಟ ಮಾಡುವಾಗ ಎರಡು ಹೆಲ್ಮೆಟ್​ಗಳನ್ನು ಕಡ್ಡಾಯವಾಗಿ ನೀಡುವಂತೆ ಆದೇಶಿಸಲು ಸರ್ಕಾರ ಚಿಂತನೆ ನಡೆಸಿದೆ.

2025ರ ಹಣಕಾಸು ವರ್ಷದಲ್ಲಿ ದೇಶದಲ್ಲಿ 1.96 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮಾರಾಟವಾಗಿವೆ ಅಂತಾ ಆಟೋಮೊಬೈಲ್ ತಯಾರಕರ ಸಂಘ (SIAM) ಹೇಳಿದೆ. ಇವುಗಳಲ್ಲಿ 1.53 ಕೋಟಿ ದ್ವಿಚಕ್ರಗಳು 125 ಸಿಸಿ ಅಥವಾ ಅದಕ್ಕಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿವೆ. ಅಂದರೆ ಮಾರಾಟದ ವಾಹನಗಳಲ್ಲಿ ಶೇಕಡಾ 78 ರಷ್ಟು 125 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ವಾಹನಗಳಾಗಿವೆ. ಸರ್ಕಾರದ ನಿರ್ಧಾರದಿಂದಾಗಿ 125 ಸಿಸಿಗಿಂತ ಕಡಿಮೆ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಕನಿಷ್ಠ 2,000 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಯಿದೆ.

Advertisment

ಇದನ್ನೂ ಓದಿ: ಕಮ್ಮಿ ಬೆಲೆಗೆ ಹೆಚ್ಚು ಸ್ಮಾರ್ಟ್​..! 20,000 ರೂಪಾಯಿ ಒಳಗೆ ಕ್ವಾಲಿಟಿ ಟಿವಿ ಖರೀದಿಸಿ ಆನಂದಿಸಿ..!

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ದತ್ತಾಂಶದ ಪ್ರಕಾರ.. 2022 ರಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ ಶೇ 44.5 ರಷ್ಟು ದ್ವಿಚಕ್ರ ವಾಹನಗಳಿಂದ ಆಗಿದೆ. ಈ ದುರ್ಘಟನೆಯಲ್ಲಿ ಹೆಚ್ಚು ಮಂದಿಗೆ ತಲೆಗೆ ಪೆಟ್ಟು ಬಿದ್ದಿದೆ. ಹೀಗಾಗಿ ಸರ್ಕಾರ ಎಂಜಿನ್ ಗಾತ್ರ ಲೆಕ್ಕಿಸದೇ ಎಲ್ಲಾ ದ್ವಿಚಕ್ರ ವಾಹನಗಳಿಗೆ ABS ಅಳವಡಿಸಲು ನಿರ್ಧರಿಸಿದೆ.

ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS): ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳಿಗೆ ಅತ್ಯಗತ್ಯ ಸುರಕ್ಷತಾ ಕ್ರಮ. ಸ್ಕಿಡ್ಡಿಂಗ್​​ನಂತಹ ತುರ್ತು ಸಂದರ್ಭದಲ್ಲಿ ಹಠಾತ್ ಬ್ರೇಕ್ ಹಾಕುವಾಗ ಚಕ್ರ ಲಾಕ್-ಅಪ್ ಆಗೋದನ್ನು ನಿಯಂತ್ರಿಸುತ್ತದೆ. ಬ್ರೇಕ್ ಹಾಕಿದಾಗ ಆಗುವ ಒತ್ತಡವನ್ನ ನಿಯಂತ್ರಿಸಿ ಕಂಟ್ರೋಲ್​​ಗೆ ಬರುವಂತೆ ಮಾಡುತ್ತದೆ.

Advertisment

ಇದನ್ನೂ ಓದಿ: ಬೆಡ್, ಟಾಯ್ಲೆಟ್, ಮಿನಿ ಫ್ರಿಡ್ಜ್.. ಅಮೆರಿಕ B-2 ಯುದ್ಧ ವಿಮಾನದೊಳಗೆ ಏನೇನಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment