/newsfirstlive-kannada/media/post_attachments/wp-content/uploads/2025/02/KISHAN-CREDI-CARD.jpg)
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಗಾಗಿ ಬಡ್ಡಿ ಸಬ್ವೆನ್ಶನ್ ಯೋಜನೆಯಲ್ಲಿ (Interest subvention scheme) ಹೆಚ್ಚಳವನ್ನು ಘೋಷಿಸಿದ್ದಾರೆ. ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷಕ್ಕೆ ಹೆಚ್ಚಿಸಿರೋಗಿ ಘೋಷಣೆ ಮಾಡಿದ್ದಾರೆ.
ಬರೋಬ್ಬರಿ 7.7 ಕೋಟಿ ರೈತರು, ಮೀನುಗಾರರು ಮತ್ತು ಹೈನುಗಾರರು ಕಿಸಾನ್ ಕ್ರೆಡಿಟ್ ಕಾರ್ಡ್‌ನ ಲಾಭ ಪಡೆಯುತ್ತಿದ್ದಾರೆ. ಬಡ್ಡಿ ರಿಯಾಯಿತಿ ಯೋಜನೆಯಡಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗುವು ಎಂದು ತಿಳಿಸಿದರು.
ಇದನ್ನೂ ಓದಿ: MSMEsಗಳ ಅಭಿವೃದ್ಧಿಗೆಗಾಗಿ ಮಹಿಳೆಯರಿಗೆ ಸಾಲದ ಭಾಗ್ಯ.. ಮೊದಲ ಬಾರಿ ಎಸ್ಸಿ/ಎಸ್ಟಿ ಉದ್ಯಮಿಗಳಿಗೆ ಪ್ರೋತ್ಸಾಹ
ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು?
ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ರೈತರ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದು. 1998ರಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಕೆಸಿಸಿ ಯೋಜನೆಯು ರೈತರಿಗೆ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಕೆಸಿಸಿ ಯೋಜನೆಯ ಲಾಭ ಪಡೆಯಲು 18 ವರ್ಷ ತುಂಬಿರಬೇಕು. ಐದು ವರ್ಷಗಳ ಅವಧಿಗೆ 3 ಲಕ್ಷದವರೆಗೆ ಸಾಲ ಸಿಗುತ್ತಿತ್ತು. ಇದೀಗ ಐದು ಲಕ್ಷದವರೆಗೆ ಏರಿಕೆ ಮಾಡಲಾಗಿದೆ. ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸಿಂಧುತ್ವವು ಐದು ವರ್ಷಗಳಾಗಿದೆ.
ಅರ್ಹತೆ ಏನು..?
ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ರೈತರಿಗೆ ಕೆಲವು ಅರ್ಹತಾ ಮಾನದಂಡ ಇದೆ. ಕೃಷಿಕರು, ಷೇರುದಾರರು, ಹಿಡುವಳಿದಾರ ರೈತರು ಅಥವಾ ಸ್ವ-ಸಹಾಯ ಗುಂಪು ( self-help group) ಅಥವಾ ಜಂಟಿ ಹೊಣೆಗಾರಿಕೆ (self-help group) ಗುಂಪಿನ ಸದಸ್ಯರಾಗಿರಬೇಕು. ಅಂತವರು ಬೆಳೆಗಳ ಉತ್ಪಾದನೆ, ಪಶುಸಂಗೋಪನೆ, ಮೀನುಗಾರಿಕೆಯಂತಹ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು. ಈ ಹಿಂದೆ 1.60 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಗ್ಯಾರಂಟಿ ಅಗತ್ಯವಿತ್ತು. ಇದೀಗ ಆರ್‌ಬಿಐ ಗ್ಯಾರಂಟಿ ರಹಿತ ಸಾಲದ ಮಿತಿಯನ್ನು 2 ಲಕ್ಷಕ್ಕೆ ಹೆಚ್ಚಿಸಿದೆ. ಅಂದರೆ 2 ಲಕ್ಷದವರೆಗಿನ ಸಾಲ ಪಡೆಯಲು ಯಾವುದೇ ಆಧಾರಗಳು ಬೇಕಾಗಿಲ್ಲ.
ಇದನ್ನೂ ಓದಿ: ಬಜೆಟ್ ಆರಂಭದಲ್ಲೇ ಕೃಷಿಗೆ ಕೊಡುಗೆ.. ‘ಪಿಎಂ ಧನ ಧಾನ್ಯ ಕೃಷಿ ಯೋಜನೆ’ ಘೋಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ