newsfirstkannada.com

ಸೌಲಭ್ಯ ವಂಚಿತರಾದ ಎಂಡೋಸಲ್ಫಾನ್ ಬಾಧಿತರು.. ಬೇಡಿಕೆಗಳನ್ನ ಈಡೇರಿಸುವಂತೆ ಸ್ಕೋಡ್‌ವೇಸ್ ಸಂಸ್ಥೆ ಆಗ್ರಹ

Share :

Published January 14, 2024 at 7:18am

Update January 14, 2024 at 7:22am

    ಎಂಡೋಸಲ್ಫಾನ್​ನಿಂದ ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾದ ಜನ

    ಸಮೀಕ್ಷೆ ಸರಿಯಾಗಿ ಆಗದ ಕಾರಣ ಇನ್ನು ಬಾಧಿತರು ಪಟ್ಟಿಯಲ್ಲಿಲ್ಲ.!

    ಸೌಲಭ್ಯ ವಂಚಿತರಾಗಿರುವ ಸಾವಿರಾರು ಎಂಡೋಸಲ್ಫಾನ್ ಬಾಧಿತರು

ಉತ್ತರಕನ್ನಡ: ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗ್ತಿದ್ದು, ಎಂಡೋಸಲ್ಫಾನ್ ಪೀಡಿತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸ್ಕೋಡ್‌ವೇಸ್ ಸಂಸ್ಥೆ ಆಗ್ರಹಿಸಿದೆ.

ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3,607 ಜನರು, ಉಡುಪಿಯಲ್ಲಿ 1,514 ಜನರು, ಉತ್ತರಕನ್ನಡ ಜಿಲ್ಲೆಯಲ್ಲಿ 1,793 ಜನರು ಸೇರಿ ಒಟ್ಟು 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗ್ತಿದೆ. ಗೇರು ನೆಡುತೋಪಿನ 5 ಕಿ.ಮೀ. ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆಯೇ ಸರಿಯಾಗಿ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರು ಪಟ್ಟಿಯಲ್ಲಿ ಸೇರಿಲ್ಲ.

ಈ ಕಾರಣಕ್ಕಾಗಿ ಪಟ್ಟಿಯಲ್ಲಿ ಸೇರದ ಸಾವಿರಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಉತ್ತಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಸಿದಂತೆ ಜಿಲ್ಲೆಯ 5 ತಾಲೂಕುಗಳಲ್ಲಿಯು ಎಂಡೋಸಲ್ಫಾನ್ ಬಾಧಿತರ ಮರು ಸಮೀಕ್ಷೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಕೋಡ್‌ವೇಸ್ ಸಂಸ್ಥೆ ಒತ್ತಾಯಿಸಿದೆ‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌಲಭ್ಯ ವಂಚಿತರಾದ ಎಂಡೋಸಲ್ಫಾನ್ ಬಾಧಿತರು.. ಬೇಡಿಕೆಗಳನ್ನ ಈಡೇರಿಸುವಂತೆ ಸ್ಕೋಡ್‌ವೇಸ್ ಸಂಸ್ಥೆ ಆಗ್ರಹ

https://newsfirstlive.com/wp-content/uploads/2024/01/KARWARA.jpg

Load More