newsfirstkannada.com

ಮಹಿಳೆಯರಿಂದ ₹30 ಲಕ್ಷಕ್ಕೂ ಅಧಿಕ ಹಣ ಪೀಕಿದ ಪಂಚಾಯತಿ ಉಪಾಧ್ಯಕ್ಷೆ.. ಗಂಡನ ಕರೆದುಕೊಂಡು ಎಸ್ಕೇಪ್

Share :

Published January 31, 2024 at 8:51am

    ಹಣ ಕಳೆದುಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆಯರು

    ಉಪಾಧ್ಯಕ್ಷೆ ವಿರುದ್ಧ ₹30 ಲಕ್ಷಕ್ಕೂ ಹೆಚ್ಚು ವಂಚನೆ ಮಾಡಿದ ಆರೋಪ

    ಮಹಿಳೆಯರಿಂದ ₹1 ಲಕ್ಷ, ₹2 ಲಕ್ಷವೆಂಬಂತೆ ಹಣ ಪೀಕಿದ್ದ ಪತಿ- ಪತ್ನಿ

ಹಾವೇರಿ: ಊರು ಉದ್ಧಾರ ಮಾಡುತ್ತೇನೆ ಎಂದು ಎಲೆಕ್ಷನ್​​ನಲ್ಲಿ ಗೆದ್ದು ಬಂದ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ 30 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಗಂಡನ ಸಮೇತ ಉಪಾಧ್ಯಕ್ಷೆ ಪರಾರಿಯಾಗಿದ್ದಾರೆ.

ಜಿಲ್ಲೆಯ ಹಾನಗಲ್ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ವಿವಿಧ ಸಂಘದ 30ಕ್ಕೂ ಹೆಚ್ಚು ಮಹಿಳೆಯರಿಗೆ ಉಪಾಧ್ಯಕ್ಷೆ ಮಂಜುಳಾ ಹುಳ್ಳಿ ಹಾಗೂ ಪತಿ ಸೇರಿ ಮೋಸ ಮಾಡಿದ್ದಾರೆ. ಈ ವಂಚನೆ ಬಯಲಿಗೆ ಬರುತ್ತಿದ್ದಂತೆ ಊರಿಂದಲೇ ಗಂಡನ ಕರೆದುಕೊಂಡು ಉಪಾಧ್ಯಕ್ಷೆ ಎಸ್ಕೇಪ್ ಆಗಿದ್ದಾಳೆ.

ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಿಸುತ್ತೇನೆ ಎಂದು ದಾಖಲೆಗಳನ್ನ ಪಡೆದು ಉಪಾಧ್ಯಕ್ಷೆ ಹಾಗೂ ಗಂಡ ಸೇರಿ ಮಹಿಳೆಯರಿಂದ 1 ಲಕ್ಷ, 2 ಲಕ್ಷವೆಂಬಂತೆ ಪೀಕಿದ್ದಾರಂತೆ. ಇದೀಗ ಮೋಸ ಹೋದವರು ನಮಗೆ ನ್ಯಾಯ ಕೊಡಿಸಿ ಎಂದು ಹಾನಗಲ್ ಪೋಲಿಸ್ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರಿಂದ ₹30 ಲಕ್ಷಕ್ಕೂ ಅಧಿಕ ಹಣ ಪೀಕಿದ ಪಂಚಾಯತಿ ಉಪಾಧ್ಯಕ್ಷೆ.. ಗಂಡನ ಕರೆದುಕೊಂಡು ಎಸ್ಕೇಪ್

https://newsfirstlive.com/wp-content/uploads/2024/01/HVR_LADY_DHOKA_1.jpg

Load More