newsfirstkannada.com

2024ರ ಗ್ರ್ಯಾಮಿ ಪ್ರಶಸ್ತಿ ಪಡೆದ ಶಂಕರ್ ಮಹದೇವನ್, ಝಾಕಿರ್ ಹುಸೇನ್

Share :

Published February 6, 2024 at 9:34am

    ‘ಶಕ್ತಿ’ ಬ್ಯಾಂಡ್​ಗೆ ಬೆಸ್ಟ್‌ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ಅವಾರ್ಡ್‌

    ಲಾಸ್ ಏಂಜಲೀಸ್‌ನಲ್ಲಿ ನಡೆದ 2024 ಗ್ರ್ಯಾಮಿ ಪ್ರಶಸ್ತಿಗಳ ಸಮಾರಂಭ

    3 ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದು ಇತಿಹಾಸ ಸೃಷ್ಟಿಸಿದ ಜಾಕಿರ್ ಹುಸೇನ್‌

ಅಮೆರಿಕದ ಲಾಸ್ ಏಂಜಲೀಸ್‌ನ ಅರೇನಾದಲ್ಲಿ 2024ರ ಗ್ರ್ಯಾಮಿ ಪ್ರಶಸ್ತಿಗಳ ಸಮಾರಂಭ ನಡೆಯಿತು. ಈ ಅದ್ಧೂರಿ ಸಮಾರಂಭದಲ್ಲಿ ದಿಸ್ ಮೊಮೆಂಟ್ ಆಲ್ಬಮ್​ಗಾಗಿ ಸಂಗೀತಗಾರರಾದ ಶಂಕರ್ ಮಹಾದೇವನ್ ಮತ್ತು ಝಾಕಿರ್ ಹುಸೇನ್ ಅವರ ಫ್ಯೂಷನ್​ ‘ಶಕ್ತಿ’ ಬ್ಯಾಂಡ್​ಗೆ​ ಪ್ರತಿಷ್ಠಿತ 2024ರ ಬೆಸ್ಟ್‌ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ಅವಾರ್ಡ್‌ ಲಭಿಸಿದೆ.

ಬೆಸ್ಟ್‌ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ಅವಾರ್ಡ್‌ ಪಡೆದಿರುವ ಫ್ಯೂಷನ್​ ‘ಶಕ್ತಿ’ ಬ್ಯಾಂಡ್​ನಲ್ಲಿ ಗಾಯಕ ಶಂಕರ ಮಹಾದೇವನ್, ತಬಲ ವಾದಕ ಜಾಕೀರ್ ಹುಸೇನ್, ತಾಳವಾದಕ ವಿ ಸೆಲ್ವಗಣೇಶ್, ಪಿಟೀಲು ವಾದಕ ಗಣೇಶ್ ರಾಜಗೋಪಾಲನ್ ಮತ್ತು ಗಿಟಾರಿಸ್ಟ್​ ಜಾನ್ ಮೆಕ್ಲಾಲಿನ್ ಇದ್ದಾರೆ. ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಈ ತಂಡವು ಫುಲ್ ಖುಷಿ ವ್ಯಕ್ತಪಡಿಸಿದೆ.

ವಿಶ್ವದ ಸೆನ್ಸೇಶನ್ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ 13ನೇ ಗ್ರ್ಯಾಮಿ ಅವಾರ್ಡ್ ತಮ್ಮದಾಗಿಸಿಕೊಂಡಿದ್ದು ವಿಶೇಷ ಎನಿಸಿತು. ಇದರೊಂದಿಗೆ ಬಾರ್ಬಿ ಚಿತ್ರದ ಬಿಲ್ಲಿ ಎಲಿಶ್ ಅವರ ‘ವಾಟ್ ವಾಸ್ ಐ ಮೇಡ್ ಫಾರ್? ಸಾಂಗ್​ ಅನ್ನು ವರ್ಷದ ಅತ್ಯುನ್ನತ ಸಾಂಗ್​ ಎಂದು ಇದೇ ವೇಳೆ ಘೋಷಿಸಲಾಯಿತು.

2024ರ ಗ್ರ್ಯಾಮಿ ಪ್ರಶಸ್ತಿಗಳ ಸಮಾರಂಭದಲ್ಲಿ ತಬಲ ವಾದಕ ಜಾಕಿರ್ ಹುಸೇನ್‌ ಅವರಿಗೆ 3 ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದು ಇತಿಹಾಸ ಸೃಷ್ಟಿಸಿದರು. ಜೊತೆಗೆ ಕೊಳಲು ವಾದಕ ರಾಕೇಶ್ ಚೌರಾಸಿಯಾ ಅವರು ಎರಡು ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸದ್ಯ ಇವರಿಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2024ರ ಗ್ರ್ಯಾಮಿ ಪ್ರಶಸ್ತಿ ಪಡೆದ ಶಂಕರ್ ಮಹದೇವನ್, ಝಾಕಿರ್ ಹುಸೇನ್

https://newsfirstlive.com/wp-content/uploads/2024/02/Zakir_Hussain.jpg

Load More