/newsfirstlive-kannada/media/post_attachments/wp-content/uploads/2025/01/UMAID-BHAVAN.jpg)
ಅಂಬಾನಿ ಮಕ್ಕಳಿಂದ ಹಿಡಿದು ಬಾಲಿವುಡ್​​ ನಟ ನಟಿಯರವರೆಗೆ ನಡೆಯುವ ವೈಭವದ ಮದುವೆಗಳು ಯಾವುದಾದರೂ ಐಷಾರಾಮಿ ಸ್ಥಳಗಳಲ್ಲಿಯೇ ನಡೆಯುತ್ತದೆ. ಈಗ ಅಂತಹ ವೈಭವದ ಮದುವೆಗಳಿಗೆ ಸಾಕ್ಷಿಯಾಗಲು ಸಜ್ಜಾಗಿದೆ ಜೋಧಪುರದ ಈ ಉಮೈದ್​ ಭವನ
ಇದು ಅತ್ಯಂತ ಬೆರಗಿನ ಹಾಗೂ ಆಕರ್ಷಕ ಪ್ಯಾಲೆಸ್​ಗಳಲ್ಲಿ ಒಂದು. ಈ ಒಂದು ಭವ್ಯ ಅರಮನೆ ಈಗ ಐಷಾರಾಮಿ ಹೋಟೆಲ್ ಆಗಿ ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾಗುವ ಸ್ಥಳವಾಗಿ ನಿಂತಿದೆ. ಸದ್ಯದಲ್ಲಿಯೇ ಭಾರತದ ಉದ್ಯಮಿಯೊಬ್ಬರ ಮಗಳ ಮದುವೆಯೂ ಕೂಡ ಇದೇ ಜಾಗದಲ್ಲಿ ನಡೆಯಲಿದೆ.
ವೈಭವದ ಮದುವೆ ನಡೆಯುವ ಸ್ಥಳವಾಗಿರುವ ಈ ಪ್ಯಾಲೆಸ್​ನಲ್ಲಿ ಸುಮಾರರು 347 ರೂಮ್​​ಗಳಿವೆ. ಪ್ರಿಯಾ ಗೋಲ್ಡ್ ಬಿಸ್ಕಟ್​​ ಮಾಲೀಕರ ಪುತ್ರಿ ಈಗ ಇದೇ ಪ್ಯಾಲೆಸ್​ನಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ. ಅದ್ದೂರಿ ಮದುವೆಗಳು, ವೈಭವದ ಸಭೆ ಸಮಾರಂಭಗಳು ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಬರುವ ಮೊದಲ ಸ್ಥಳ ಈ ಉಮೈದ್ ಭವನ.
ಇದನ್ನೂ ಓದಿ: ಟ್ರಂಪ್ ಬಂದ ಬೆನ್ನಲ್ಲೇ ಭಾರತಕ್ಕೆ ದೊಡ್ಡ ಸಕ್ಸಸ್.. ಉಗ್ರ ರಾಣಾನ ಹಸ್ತಾಂತರಿಸಲು ಅಮೆರಿಕ ಗ್ರೀನ್ ಸಿಗ್ನಲ್..!
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಮದುವೆಯೂ ಕೂಡ ಇದೇ ಉಮೈದ ಭವನದಲ್ಲಿ ನಡೆದಿರುವನ್ನು ಈಗ ನಾವು ನೆನೆಸಬಹುದು. ಈಗ ಮತ್ತೊಂದು ಅದ್ಧೂರಿ ಮದುವೆಗೆ ಸಾಕ್ಷಿಯಾಗಲು ಈ ಉಮೈದ ಭವನ ಸಜ್ಜಾಗಿದೆ. ಈಗಾಗಲೇ ಹೇಳಿದಂತೆ ಪ್ರಿಯಾ ಗೋಲ್ಡ್ ಬಿಸ್ಕಟ್​​​ನ ಮಾಲೀಕರ ಮಗಳ ಮದುವೆ ಇದೇ ಉಮೈದ್ ಭವನದಲ್ಲಿ ನಡೆಯಲಿದೆ. ಕೊಲ್ಕತ್ತಾದ ಭಾರೀ ಉದ್ಯಮಿಯೊಂದಿಗೆ ಹಸಮಣೆ ಏರಲಿರುವ ಪ್ರಿಯಾ ಗೋಲ್ಡ್ ಬಿಸ್ಕಟ್​​ನ ಮಾಲೀಕರ ಮಗಳು.
ಮದುವೆಗಾಗಿ ಇದೇ ಉಮೈದ್​ ಭವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಕಾಳ ವೈಭವೋಪೇತವಾಗಿ ಮದುವೆ ನಡೆಯಲಿದೆ. ಅದು ಅಲ್ಲದೇ ಮದುವೆಯಲ್ಲಿ ಅನೇಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಪಂಜಾಬ್​ನ ಸಿಂಗರ್ ಬಾದ್​ಶಾ, ಕರಣ್ ಹೋಜ್ಲಾ, ಬಾಲಿವುಡ್ ಸಿಂಗರ್ ಸೋನಮ್ ಮಹಾಪಾತ್ರ ಅನೇಕ ಸ್ಟಾರ್​ಗಳಿಂದ ಮನರಂಜನೆಯ ಕಾರ್ಯಕ್ರಮಗಳು ನಡೆಯಲಿವೆ.347 ಕೋಣೆಗಳನ್ನು ಹೊಂದಿರು ಈ ಉಮೈದ್​ ಪ್ಯಾಲೆಸ್​ನ ಮೌಲ್ಯ ಒಟ್ಟು 22,400 ಕೋಟಿ ರೂಪಾಯಿ ಎಂದು ಹೇಳಲಾಗಿದೆ. 347 ರೂಮ್​ಗಳ ಒಂದು ದಿನದ ಬಾಡಿಗೆ ಈ ಹೋಟೆಲ್​​ನ ಅದೆಷ್ಟೋ ನೌಕರರ ಸಂಬಳವನ್ನು ನಿರಾಳವಾಗಿ ಗಳಿಸಿಬಿಡುತ್ತದಂತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us