/newsfirstlive-kannada/media/post_attachments/wp-content/uploads/2025/02/81-YEARS-OLD-WOMEN.jpg)
ಬಡತನ, ಹಸಿವು ಒಂದು ರೀತಿಯಲ್ಲಿ ಕಾಡಿದರೆ. ವೃದ್ಧಾಪ್ಯದಲ್ಲಿ ಒಂಟಿತನ ಮತ್ತೊಂದು ರೀತಿಯಲ್ಲಿ ಕಾಡುತ್ತದೆ. ಅದರಲ್ಲೂ ಕಿತ್ತು ತಿನ್ನುವ ಬಡತನದಲ್ಲಿ ಒಂಟಿ ವೃದ್ಧರು ಪಡುವ ಪರದಾಟಗಳು ಒಂದೆರಡಲ್ಲ. ಊಟದಿಂದ ಹಿಡಿದು ವಯೋಸಹಕ ಕಾಯಿಲೆಗೆ ಬೇಕಾಗುವ ಹಣವನ್ನು ಹುಟ್ಟಿಸಲು ಅವರಿಂದ ಆಗುವುದಿಲ್ಲ. ಇದೇ ಪರಸ್ಥಿತಿಯಲ್ಲಿ ಬಳಲುತ್ತಿದ್ದ ಜಪಾನ್ನ 81 ವರ್ಷದ ವೃದ್ಧೆ ಬೇಕಂತಲೇ ಅಪರಾಧವೊಂದನ್ನು ಮಾಡಿ ಜೈಲಿಗೆ ಹೋಗಿದ್ದಾರೆ. ನಾನು ಜೈಲಿಗೆ ಹೋಗಬೇಕು ಅಂತಲೇ ಈ ಅಪರಾಧ ಮಾಡಿದ ಎಂದು ಕೂಡ ಹೇಳಿದ್ದಾರೆ.
ಈ ಹಿಂದೆ 60 ವರ್ಷದವಳಿದ್ದಾಗ ಈ ವೃದ್ಧೆ ಎರಡು ಬಾರಿ ಕಳ್ಳತನ ಮಾಡಿ. ಅದು ಕೂಡ ಆಹಾರ ಕದ್ದು ಜೈಲು ಸೇರಿದ್ದರು. ಅಂದಿನಿಂದ ಅವರಿಗೆ ಜೈಲಿನ ಜೀವನವೇ ಉತ್ತಮ ಎನಿಸತೊಡಗಿತು. ಆಹಾರ ಫ್ರೀ. ಆರೋಗ್ಯದಲ್ಲಿ ಏರುಪೇರಾದ್ರೆ ಯಾವುದೇ ಖರ್ಚಿಲ್ಲದೇ ಚಿಕಿತ್ಸೆ ಸಿಗುತ್ತದೆ ಎಂದು ಅರಿತ ಈ ಮಹಿಳೆ ಈಗ ಮತ್ತೊಮ್ಮೆ ಉದ್ದೇಶಪೂರ್ವಕವಾಗಿಯೇ ಕಳ್ಳತನ ಮಾಡಿ ಜೈಲು ಸೇರಿದ್ದಾರೆ.
ಇದನ್ನೂ ಓದಿ:ಮರಕ್ಕೆ ಡಿಕ್ಕಿ ಹೊಡೆದ ಕಾರು.. ಭಾರತದ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯ
ಅಕಿಯೋ ಎಂಬ ಈ ವೃದ್ಧೆ ಒಟ್ಟು 500 ಜನ ಕೈದಿಗಳು ಇರುವ ಜೈಲಿನಲ್ಲಿ ಇದ್ದಾರೆ. ಅದರಲ್ಲಿ ಐದು ಜನ ಇವರಂತೆಯೇ ವೃದ್ಧಾಪ್ಯದಲ್ಲಿ ಇರುವವರು. ಜೈಲಿನಲ್ಲಿ ತುಂಬಾ ಜನ ಒಳ್ಳೆವರು ಇದ್ದಾರೆ. ಇಲ್ಲಿನ ಬದುಕೇ ನನಗೆ ಆರಾಮದಾಯಕ ಎನಿಸುತ್ತದೆ ಎಂದು ಅಕಿಯೋ ಹೇಳುತ್ತಾರೆ. ನಾನು ಈ ನಿರ್ದಾರಕ್ಕೆ ಬರಲು ನನ್ನ ಬಡತನವೇ ಕಾರಣ. ನಾನು ಇದನ್ನು ಒಂದು ಸಾಮಾನ್ಯ ಸಂಗತಿ ಎನ್ನುವ ರೀತಿಯಲ್ಲಿ ನೋಡುತ್ತೇನೆ. ಒಂದು ವೇಳೆ ನಾನು ಆರ್ಥಿಕವಾಗಿ ಸಬಲಳಿದ್ದಲ್ಲಿ. ಒಂದು ಉತ್ತಮ ಜೀವನ ಕ್ರಮ ನನ್ನದು ಆಗಿದ್ದರೆ ನಾನು ಇಂತಹ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎನಿಸುತ್ತೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ 81 ವರ್ಷ ಹರೆಯದ ಅಕಿಯೋ.
ಇದನ್ನೂ ಓದಿ:ಟೇಕ್ಆಫ್ ಆಗುತ್ತಿದ್ದಂತೆ ಹೊತ್ತಿ ಉರಿದ ವಿಮಾನ; ಆಮೇಲಾಗಿದ್ದೇನು?VIDEO
ಜೈಲಿಗೆ ಹೋಗುವ ಮೊದಲು ಅಕಿಯೋ ತನ್ನ 43 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದಳು. ಆದರೆ ಅವನು ಪದೇ ಪದೇ ಮನೆ ಬಿಟ್ಟು ಹೋಗುವಂತೆ ತಾಯಿಗೆ ಪೀಡಿಸುತ್ತಿದ್ದನಂತೆ. ಇದರಿಂದಾಗಿ ನಾನು ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ನನಗಾಗ ಅನಿಸಿದ್ದು ನಾನು ಬದುಕುವುದರಲ್ಲಿ ಏನು ಅರ್ಥವಿಲ್ಲ. ನಾನು ಸತ್ತು ಹೋಗಬೇಕು ಎಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ. ಒಬ್ಬರೇ ಬದುಕುವುದು ತುಂಬಾ ಕಷ್ಟ. ನನಗೆ ಈಗಲೂ ಅನಿಸುತ್ತೆ ನಾನು ಸ್ವಲ್ಪ ಕಠಿಣವಾಗಬೇಕಿತ್ತು. ನನ್ನ ಜೀವನವೇ ಬೇರೆಯಾಗಿರುತ್ತಿತ್ತು ಅಂತ. ಆದ್ರೆ ಈಗ ನನಗೆ ತುಂಬಾ ವಯಸ್ಸಾಗಿದೆ. ನನ್ನಿಂದ ಈಗ ಏನು ಮಾಡಲು ಸಾಧ್ಯವಿಲ್ಲ ಎಂದು ಕಣ್ಣೀರುಡುತ್ತಾರೆ ಅಕಿಯೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ