newsfirstkannada.com

ತಾಯಿ ಇಲ್ಲದ ಮಗಳ ಬ್ಯಾಂಕ್​ ಖಾತೆ ಮೇಲೆ ದೊಡ್ಡಮ್ಮನ ಕಣ್ಣು.. ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ

Share :

Published March 13, 2024 at 11:01am

    ತಾಯಿ ಇಲ್ಲ ಮಗಳ ಮೇಲೆ ನಂಜು ಕಾರುತ್ತಿರುವ ನಂಜಮ್ಮ

    ನಾಲ್ಕು ಲಕ್ಷ ರೂಪಾಯಿ ಹಣಕ್ಕಾಗಿ ಬಾಲಕಿಗೆ ಕೊಡಬಾರದ ಶಿಕ್ಷೆ

    ದೊಡ್ಮಮ್ಮನ ಜೊತೆ ಆಕೆಯ ಮಗನಿಂದಲೂ ಬಾಲಕಿ ಮೇಲೆ ಕೃತ್ಯ

ತುಮಕೂರು: ಹಣಕ್ಕಾಗಿ ದೊಡ್ಡಮ್ಮ ರಾಕ್ಷಸಿ ಕೃತ್ಯವೆಸಗಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ತಾಯಿ ಇಲ್ಲದ ಲಕ್ಷ್ಮೀ ಎಂಬ ಬಾಲಕಿಯ ತೊಡೆಗೆ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಕಿರುಕುಳ ನೀಡಿದ್ದಾಳೆ.

ನಂಜಮ್ಮನ ನಂಜು

ನಂಜಮ್ಮ ಎಂಬ ದೊಡ್ಡಮ್ಮ ತಾಯಿ ಇಲ್ಲದ ಬಾಲಕಿಯ ಹಣಕ್ಕಾಗಿ ಕಿರುಕುಳ ನೀಡಿದ್ದಾಳೆ. ಬ್ಯಾಂಕ್ ನಲ್ಲಿದ್ದ ಹಣಕ್ಕಾಗಿ ಬಾಲಕಿಯ ತೊಡೆಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾಳೆ. ಸದ್ಯ ತಾಯಿ ಇಲ್ಲದ ಬಾಲಕಿಯ ಗೋಳು ಕಣ್ಣೀರು ತರಿಸುವಂತಿದೆ.

ನಾಲ್ಕು ವರ್ಷದ ಹಿಂದೆ ತಾಯಿಯನ್ನ ಕಳೆದುಕೊಂಡ ಲಕ್ಷ್ಮೀ

ನಂಜಮ್ಮ ಬಾಲಕಿಯ ಬ್ಯಾಂಕ್ ನ ಖಾತೆಯಲ್ಲಿದ್ದ ನಾಲ್ಕು ಲಕ್ಷ ಹಣ ಬಿಡಿಸಿಕೊಳ್ಳಲು ಉಪಟಳ ನೀಡುತ್ತಿದ್ದಾಳೆ. ಲಕ್ಷ್ಮೀ ಗೆ ಇನ್ನಿಲ್ಲದ ಕಿರುಕುಳ ನೀಡಿತ್ತಾ ಬಂದಿದ್ದಾಳೆ. ಲಕ್ಷ್ಮೀ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ ಜಂಟಿ ಖಾತೆ ಇತ್ತು. ಹೀಗಾಗಿ ತನ್ನ ಮಗಳಿಗಾಗಿ ನಾಲ್ಕು ಲಕ್ಷ ಫಿಕ್ಸ್ ಡೆಪಾಸಿಟ್ ಮಾಡಿದ್ದರು. ಇದೀಗ ಆ ಹಣದ ಮೇಲೆ ದೊಡ್ಡಮ್ಮನ ಕಣ್ಣು ಬಿದ್ದಿದೆ. ಅದಕ್ಕಾಗಿ ಬಾಲಕಿಗೆ ನಿರಂತರ ಕಿರುಕುಳ ನೀಡುತ್ತಿದ್ದಾಳೆ.

ಊರಿಗೆ ಕರೆಸಿ ಚಿತ್ರಹಿಂಸೆ

ಕಳೆದ ಶನಿವಾರ ರಾತ್ರಿ ಬಾಲಕಿಯನ್ನು ತಮ್ಮ ಊರಿಗೆ ಕರೆಸಿ ಆಕೆಯ ತೊಡೆಗೆ ಇಸ್ತ್ರಿ ಪೆಟ್ಟಿಗೆ ಯಿಂದ ಸುಟ್ಟಿದ್ದಾಳೆ. ಈ ವೇಳೆ ನಂಜಮ್ಮನ ಮಗ ಬಸವರಾಜ್ ಬಾಲಕಿ ಕಿರುಚಾಡದಂತೆ ಬಾಯಿ ಮುಚ್ಚಿಲು ಸಾಥ್ ಕೊಟ್ಟಿದ್ದಾನೆ.

5ನೇ ತರಗತಿಯ ವಿದ್ಯಾರ್ಥಿ

ಲಕ್ಷ್ಮೀ ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಐದನೇ ತರಗತಿ ಓದುತ್ತಿದ್ದಾಳೆ. ಶಿವರಾತ್ರಿ ಹಬ್ಬಕ್ಕೆಂದು ಊರಿಗೆ ಬಂದು ಕರೆದುಕೊಂಡು ಹೋಗಿದ್ದ ದೊಡ್ಡಮ್ಮ ನಂಜಮ್ಮ. ಊರಿಗೆ ಕರೆದುಕೊಂಡು ಹೋಗಿ ತಾಯಿ ಇಲ್ಲದ ಬಾಲಕಿ ಮೇಲೆ ಕಿರುಕುಳ ನೀಡಿದ್ದಾರೆ.

ದೊಡ್ಡಮ್ಮನ ಕರಾಳ ಮುಖ ಬಯಲು

ಸದ್ಯ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗೆ ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಅತ್ತ ದೊಡ್ಡ ತನ್ನ ಮುಖವಾಡ ಎಲ್ಲಿ ಬಯಲಾಗುತ್ತೋ ಅಂತ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಟೀ ಚೆಲ್ಲಿಕೊಂಡಿದ್ದಾಳೆ ಎಂದು ಬಾಲಕಿ ಮೇಲೆ ಕಥೆ ಕಟ್ಟಿದ್ದಾಳೆ. ಆದರೆ ಗ್ರಾಮದ ಶಿಕ್ಷಕರು ಸಂಬಂಧಿಕರು ಊರಿಗೆ ಕರೆಸಿ ಬಾಲಕಿ ಜೊತೆ ಮಾತಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ ಇಲ್ಲದ ಮಗಳ ಬ್ಯಾಂಕ್​ ಖಾತೆ ಮೇಲೆ ದೊಡ್ಡಮ್ಮನ ಕಣ್ಣು.. ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ

https://newsfirstlive.com/wp-content/uploads/2024/03/Tumkur-4.jpg

Load More