ಅಜ್ಜಿಯ ತಮಾಷೆ ವಿಡಿಯೋ.. ₹12 ಕೋಟಿ ಕಾರು ಖರೀದಿಸಿ ದಾಖಲೆ ಸೃಷ್ಟಿಸಿದ ಮೊಮ್ಮಗ; ಯಾರಿವನು ಗೊತ್ತಾ?

author-image
admin
Updated On
ಅಜ್ಜಿಯ ತಮಾಷೆ ವಿಡಿಯೋ.. ₹12 ಕೋಟಿ ಕಾರು ಖರೀದಿಸಿ ದಾಖಲೆ ಸೃಷ್ಟಿಸಿದ ಮೊಮ್ಮಗ; ಯಾರಿವನು ಗೊತ್ತಾ?
Advertisment
  • ಲ್ಯಾಂಬೋರ್ಗಿನಿ, ಪೊರ್ಶೆ ಓಕೆ.. ಆದ್ರೆ ಅದು ಬೇಡ ಎಂದ ಅಜ್ಜಿ
  • ತಮಾಷೆಗೆ ಹೇಳಿದ್ದಕ್ಕೆ ಮಾರನೇ ದಿನ ಕಾರು ಖರೀದಿಸಿದ ಮೊಮ್ಮಗ
  • ಭಾರತದಲ್ಲಿ ಈ ಕಾರು ಖರೀದಿಸಿದ 3ನೇ ವ್ಯಕ್ತಿ ಅನ್ನುವ ದಾಖಲೆ

ಮಾತು ಆಡಿದ್ರೆ ಹೋಯ್ತು. ಮುತ್ತು ಒಡೆದ್ರೆ ಹೋಯ್ತು ಈ ಗಾದೆ ಮಾತನ್ನ ನೀವು ಕೇಳಿರ್ತೀರಾ. ಅದೇ ರೀತಿ ಈ ಅಜ್ಜಿ ಲ್ಯಾಂಬೋರ್ಗಿನಿ ಓಕೆ ಕಣಪ್ಪ, ಚೆನ್ನಾಗಿದೆ. ಆದ್ರೆ ಸೂಪರ್ ಅನ್ನೋ ತರ ಏನಿಲ್ಲ. ಅಷ್ಟ ಕಷ್ಟೇ.. ಇನ್ನು, ಪೊರ್ಷೆ ಒಳ್ಳೆ ಗಾಡಿನೇ. ಆದ್ರೆ ಅದರ ಡೋರ್ ರೆಗ್ಯುಲರ್​ ಆಗಿ ಕಾರ್ ಓಪನ್​ ಆಗುತ್ತೆ. ಅದಕ್ಕೆ ಅವೆಲ್ಲಾ ಬೇಡ.. ನೀನು ಮೆಕ್ಲರೆನ್ ಕಾರು ತಗೋ. ಅದರ ಡೋರ್ ಮೇಲಕ್ಕೆ ಹೋಗಿ ಓಪನ್ ಆಗುತ್ತೆ ಅಂತ ತನ್ನ ಮೊಮ್ಮಗನಿಗೆ ಹೇಳಿದ್ದಾರೆ.

ಈ ಅಜ್ಜಿ, ಮೊಮ್ಮಗನಿಗೆ ಒಂದು ಸಲಹೆ ಕೊಟ್ಟಿದ್ದಾರೆ. ಸಲಹೆ ಕೊಟ್ಟಿದ್ದೇ ತಡ, ಮೊಮ್ಮಗ ಸೀರಿಯಸ್ ಆಗಿ ತೆಗೆದುಕೊಂಡ್​ ಬಿಟ್ಟಿದ್ದಾನೆ. ಅಜ್ಜಿ ಸಲಹೆ ಕೊಟ್ಟ ಮಾರನೇ ದಿನವೇ ಬರೋಬ್ಬರಿ 12 ಕೋಟಿ ರೂಪಾಯಿ ಕೊಟ್ಟು ಹೊಚ್ಚ ಹೊಸ, ಸ್ಪೆಷಲ್ ಎಡಿಶನ್ ಮೆಕ್ಲೆರೆನ್ ಕಾರನ್ನ ರೋಡಿಗೆ ಇಳಿಸೇ ಬಿಟ್ಟಿದ್ದಾನೆ. ಖರೀದಿ ಮಾಡಿದ್ದಲ್ಲದೇ, ಈ ಮೊಮ್ಮಗ ಮೆಕ್ಲೆರೆನ್ 765LT ಕಾರ್ ಖರೀದಿಸಿದ ಅತಿ ಕಿರಿಯ ಭಾರತೀಯ ಅನ್ನೋ ರೆಕಾರ್ಡ್​ ಮಾಡಿದ್ದಾರೆ.

publive-image

ಈ ಮೊಮ್ಮಗನ ಹೆಸರು ಆನಂದ್ ಅಂತ. ಕೇರಳ ರಾಜ್ಯದ ಬ್ಯುಸಿನೆಸ್ ಕುಟುಂಬದ ಕುಡಿ. ಆನಂದ್ ಕೂಡ ಉದ್ಯಮ ಕ್ಷೇತ್ರದಲ್ಲೇ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಇವರ ಉದ್ಯಮ​ ಸಾಮ್ರಾಜ್ಯ ದುಬೈನಲ್ಲಿ ಹೆಮ್ಮರವಾಗಿ ಬೆಳೆದಿದೆ. 5 ತಿಂಗಳ ಹಿಂದೆ ಆನಂದ್, ಲ್ಯಾಂಬೋರ್ಗಿನಿ ಉರುಸ್ ಕಾರನ್ನ ಖರೀದಿ ಮಾಡಿದ್ದಾನೆ. ಕಾರಲ್ಲಿ ಕೂತ್ಕೊಂಡು ಮೊಮ್ಮಗ, ಇಬ್ಬರು ಅಜ್ಜಿಯರು ಲಾಂಗ್ ಡ್ರೈವ್ ಹೋಗಿದ್ದಾರೆ. ಇದೇ ಟೈಂನಲ್ಲಿ ಮೊಮ್ಮಗ, ನನ್ನ ಮುಂದಿನ ಕಾರು ಪೊರ್ಶೆ ಅಂತ ಹೇಳಿದ್ದಾನೆ. ಇದಕ್ಕೆ ಆ ಇಬ್ಬರು ಅಜ್ಜಿಯರು ತಮ್ಮ ಅಭಿಪ್ರಾಯ ಹೇಳಿದ್ದಾರೆ.

publive-image

ಒಬ್ಬ ಅಜ್ಜಿ.. ಪೊರ್ಶೆ ಚೆನ್ನಾಗಿದೆ. ಆದ್ರೆ ಎಲ್ಲರ ಹತ್ರಾ ಪೊರ್ಶೆ ಕಾರಿದೆ. ಈಗ ಪೊರ್ಶೆ ಕಾಮನ್ ಆಗ್ತಿದೆ ಅಂತ ಹೇಳಿದ್ದಾರೆ. ಮತ್ತೊಬ್ಬ ಅಜ್ಜಿ, ಪೊರ್ಶೆ ಒಳ್ಳೆ ಕಾರು, ಆದ್ರೇ ಪೊರ್ಶೆ ಕಾರಿನ ಡೋರ್, ಮೇಲಕ್ಕೆ ಓಪನ್ ಆಗಲ್ಲ. ಅದಕ್ಕೋಸ್ಕರ, ಹೊಸ ಕಾರ್​ ತಗೋಬೇಕಾದ್ರೆ ಮೆಕ್ಲರೆನ್ ಕಾರು ತಗೋ ಅಂತ ಅಜ್ಜಿ ಸಲಹೆ ಕೊಟ್ಟಿದ್ದಾರೆ. ಆಗ ಯಾವುದಕ್ಕೂ ಇರಲಿ ಅಂತ, ಮೊಮ್ಮಗ ಮತ್ತೊಮ್ಮೆ ಅಜ್ಜಿ ಹತ್ರಾ.. ಯಾವುದು ನೀವ್ ಹೇಳಿದ್ದು ಅಂತ ಕನ್ಫರ್ಮ್​ ಆಗಿ ಕೇಳಿಕೊಂಡಿದ್ದಾನೆ. ಅಜ್ಜಿ ಯಾವುದೇ ಹಿಂಜರಿಕೆ ಇಲ್ಲದೆ ಮೆಕ್ಲರೆನ್ ಅಂತ ಆನ್ಸರ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನೀವು ಈ 7 ದೇಶಗಳಲ್ಲಿ ವಾಹನ ಚಲಾಯಿಸಬಹುದು; ಯಾವುವು ಗೊತ್ತಾ? 

ಅಜ್ಜಿಯ ಈ ಮಾತನ್ನು ಸ್ವಲ್ಪ ಅಲ್ಲ.. ಹೆಚ್ಚಾಗಿ ಸೀರಿಯಸ್ ಆಗಿ ತೆಗೆದುಕೊಂಡ ಆನಂದ್, ಹೊಚ್ಚ ಹೊಸ ಮೆಕ್ಲರೆನ್ 765LT ಸ್ಪೆಷಲ್ ಎಡಿಶನ್ ಕಾರನ್ನ ಖರೀದಿ ಮಾಡಿದ್ದಾರೆ. ಇದರ ಭಾರತದ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಇದೀಗ ಆನಂದ್ ಮೆಕ್ಲರೆನ್ 765LT ಕಾರು ಖರೀದಿ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಇಷ್ಟೇ ಅಲ್ಲ, ಮೆಕ್ಲರೆನ್ 765LT ಕಾರನ್ನು ಭಾರತದಲ್ಲಿ ಖರೀದಿಸಿದ ಮೂರನೇ ವ್ಯಕ್ತಿ ಅನ್ನೋ ದಾಖಲೆ ಬರೆದಿದ್ದಾನೆ. ಆನಂದ್ ಮೂಲತಃ ಕೇರಳ ಮೂಲದವನು. ಹೀಗಾಗಿ ಮೆಕ್ಲರೆನ್ 765LT ಖರೀದಿಸಿದ ಮೊದಲ ಕೇರಳಿಗ ಅನ್ನೋ ದಾಖಲೆಯನ್ನೂ ಬರೆದಿದ್ದಾನೆ. ಆನಂದ್ ಈ ಕಾರನ್ನು ದುಬೈನಲ್ಲಿ ಖರೀದಿಸಿದ್ದಾನೆ. ಭಾರತಕ್ಕೆ ಕಾರು ತರಲು ಮುಂದಾಗಿದ್ದಾನೆ.

ಮೆಕ್ಲೆರೆನ್ 765LT ಕಾರು ಹೊಂದಿರೋ ಮೂವರು ಮಾಲೀಕರ ಪೈಕಿ ಒಬ್ಬ ಆನಂದ್. ಆದ್ರೆ ಇದಕ್ಕಿಂತ ಮೊದಲು ಈ ದುಬಾರಿ ಕಾರನ್ನ ಖರೀದಿಸಿದ ಇನ್ನಿಬ್ಬರಲ್ಲಿ ಒಬ್ಬರು, ಬೆಂಗಳೂರಿನ ಉದ್ಯಮಿ ರಂಜಿತ್ ಸುಂದರಮೂರ್ತಿ ಈ ಕಾರು ಇಟ್ಟುಕೊಂಡಿದ್ದಾರೆ. ರಂಜಿತ್ ಕೂಡ, ದುಬೈನಲ್ಲಿ ಕಾರು ಖರೀದಿಸಿ ಬಳಿಕ ಭಾರತಕ್ಕೆ ದುಬಾರಿ ಸುಂಕ ಕಟ್ಟಿ, ತಂದಿದ್ದಾರೆ. ಮೂರನೇ ಮಾಲೀಕರು ಅಂತಂದ್ರೆ ಹೈದರಾಬಾದ್ ಉದ್ಯಮಿ ನಾಸೀರ್ ಖಾನ್ ಅನ್ನೋರ ಹತ್ರಾ ಈ ಮೆಕ್ಲರೆನ್ ಕಾರು ಇದೆ. 4.0 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಈ ಕಾರಲ್ಲಿದೆ. ಪವರ್‌ಫುಲ್ ಎಂಜಿನ್ 765PS ಪವರ್ ಹಾಗೂ 800 NM ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. 7 ಸ್ಪೀಡ್ ಟ್ರಾನ್ಸ್‌ಮಿಶನ್ ಕೂಡ ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment