newsfirstkannada.com

ಅಜ್ಜ ಖರೀದಿಸಿದ್ದ 1 ಷೇರ್​​ನಿಂದ ಮೊಮ್ಮಗನಿಗೆ ಜಾಕ್‌ಪಾಟ್.. ಇದರ ಬೆಲೆ ಕೇಳಿದ್ರೆ ಶಾಕ್​​ ಆಗ್ತೀರಾ!

Share :

Published April 2, 2024 at 8:38pm

    1994ರಲ್ಲಿ ಕೇವಲ 500 ರೂಪಾಯಿಗೆ SBI ಷೇರು ಖರೀದಿಸಿದ್ದ ಅಜ್ಜ

    30 ವರ್ಷದ ಹಿಂದಿನ SBI ಬ್ಯಾಂಕ್‌ನ ಷೇರು ಪತ್ರದ ಈಗಿನ ಮೌಲ್ಯ ಎಷ್ಟು?

    ಷೇರು ಮಾರುಕಟ್ಟೆಯಲ್ಲಿ SBI ಷೇರಿನ ಮೌಲ್ಯ ಲೆಕ್ಕ ಹಾಕಿದಾಗ ಬಿಗ್ ಶಾಕ್‌!

ಬರೋಬ್ಬರಿ 30 ವರ್ಷದ ಹಿಂದೆ ಅಜ್ಜ ಷೇರು ಮಾರುಕಟ್ಟೆಯಲ್ಲಿ 500 ರೂಪಾಯಿ ಹೂಡಿಕೆ ಮಾಡಿದ್ದ. ಆ 500 ರೂಪಾಯಿಗಳಲ್ಲಿ SBI ಬ್ಯಾಂಕ್‌ನ ಷೇರು ಖರೀದಿ ಮಾಡಿ ಮನೆಯ ಲಾಕರ್‌ನಲ್ಲಿ ಇಟ್ಟಿದ್ದ. ಇದೀಗ ಅಜ್ಜನಿಂದ ಮೊಮ್ಮಗನಿಗೆ ಚಾಕ್‌ಪಾಟ್‌ ಹೊಡೆದಿದೆ. ಅಜ್ಜ 500 ರೂಪಾಯಿಗೆ ಖರೀದಿಸಿದ ಷೇರಿನಿಂದ ಮೊಮ್ಮಗನಿಗೆ ಲಕ್ಷಾಂತರ ರೂಪಾಯಿ ಲಾಭ ಬಂದಿದೆ. ಇದು ಷೇರು ಮಾರುಕಟ್ಟೆಯ ಮ್ಯಾಜಿಕ್ (power of holding equity) ಅಂತಲೇ ಸಖತ್ ಸುದ್ದಿಯಾಗಿದೆ.

ಪಂಜಾಬ್‌ ರಾಜ್ಯದ ಚಂಡೀಗಢ ಮೂಲದ ವೈದ್ಯರೊಬ್ಬರು ತನ್ನ ಅಜ್ಜನಿಂದ ಲಕ್ಷಾಂತರ ರೂಪಾಯಿ ಲಾಭಗಳಿಸಿದ್ದಾರೆ. ಡಾ. ತನ್ಮಯ್ ಮೋತಿವಾಲಾ ಎಂಬುವವರು ಇಂತಹದೊಂದು ಸಂತಸದ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ತನ್ಮಯ್ ಮೋತಿವಾಲಾ ಅವರು ತನ್ನ ಅಜ್ಜ 1994ರಲ್ಲಿ 500 ರೂಪಾಯಿಗೆ ಖರೀದಿಸಿದ SBI ಷೇರಿನ ಫೋಟೋವನ್ನು ಶೇರ್ ಮಾಡಿದ್ದಾರೆ.

ಡಾ. ತನ್ಮಯ್ ಮೋತಿವಾಲಾ ಅವರು ತಮ್ಮ ಮನೆಯಲ್ಲಿದ್ದ ಆಸ್ತಿ ಪತ್ರಗಳನ್ನು ಪರಿಶೀಲನೆ ಮಾಡುತ್ತಿರುವಾಗ ಅವರ ಕೈಗೆ SBI ಬ್ಯಾಂಕ್‌ನ ಈ ಷೇರಿನ ಪತ್ರ ಸಿಕ್ಕಿದೆ. 1994ರಲ್ಲಿ ಈ ಷೇರು ಖರೀದಿಸಿದ್ದ ಅಜ್ಜ ಇದನ್ನು ಮಾರಾಟ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ.

ಇದನ್ನೂ ಓದಿ: ಕನ್ನಡಿಗರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಚೂರು ಯಾಮಾರಿದ್ರೂ ಆರೋಗ್ಯ ಕೆಡೋದು ಗ್ಯಾರಂಟಿ!

ಸದ್ಯ SBI ಬ್ಯಾಂಕ್‌ನ ಹಳೇ ಷೇರನ್ನು ಪರಿಶೀಲನೆ ಮಾಡಿದಾಗ ಮೊಮ್ಮಗನಿಗೆ ಇದರ ಬೆಲೆ ತಿಳಿದುಕೊಳ್ಳುವ ಕುತೂಹಲ ಉಂಟಾಗಿದೆ. ಷೇರು ಮಾರುಕಟ್ಟೆಯಲ್ಲಿ SBI ಷೇರಿನ ಮೌಲ್ಯ ಲೆಕ್ಕ ಹಾಕಿದಾಗ 30 ವರ್ಷದ ಹಿಂದೆ 500 ರೂಪಾಯಿಗೆ ಖರೀದಿಸಿದ್ದ ಈ ಷೇರಿನ ಬೆಲೆ ಬರೋಬ್ಬರಿ 3 ಲಕ್ಷ 75 ಸಾವಿರ ರೂಪಾಯಿ ಅನ್ನೋದು ಗೊತ್ತಾಗಿದೆ. ಈ ವಿಚಾರದ ಗೊತ್ತಾದ ಡಾ. ತನ್ಮಯ್ ಮೋತಿವಾಲಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಜ್ಜ ಖರೀದಿಸಿದ್ದ 1 ಷೇರ್​​ನಿಂದ ಮೊಮ್ಮಗನಿಗೆ ಜಾಕ್‌ಪಾಟ್.. ಇದರ ಬೆಲೆ ಕೇಳಿದ್ರೆ ಶಾಕ್​​ ಆಗ್ತೀರಾ!

https://newsfirstlive.com/wp-content/uploads/2024/04/Chandigada-Doctor-Share.jpg

Load More