/newsfirstlive-kannada/media/post_attachments/wp-content/uploads/2025/05/AJJI-MOMMAGA.jpg)
ಬೆಂಗಳೂರು: ಅಜ್ಜಿ ಮನೆಯಲ್ಲಿ ಕಳ್ಳತನ ಮಾಡಿದ್ದ ಮೊಮ್ಮಗನ ಬಂಧನವಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರೂಪದ ಪ್ರಕರಣವೊಂದು ನಡೆದಿದೆ.
ಏನಿದು ಪ್ರಕರಣ..?
ಮಿಥುನ್ ಬಂಧಿತ ಆರೋಪಿ. ಬೆಂಗಳೂರು ನಂದಿನಿ ಲೇಔಟ್ ಠಾಣೆ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಿಥುನ್, ಅಜ್ಜಿ ಬಳಿ ಆಟೋ ಕೊಡಿಸು ಅಂತಾ ಬೇಡಿಕೊಂಡಿದ್ದ. ಆದರೆ ಅಜ್ಜಿ ‘ಇಲ್ಲ, ಆಟೋ ಕೊಡಿಸೋದಲ್ಲ’ ಎಂದು ಹೇಳಿದ್ದರಂತೆ.
ಇದನ್ನೂ ಓದಿ: RCB ಗೆಲುವಿನಲ್ಲಿ ಕಿಂಗ್ ಕೊಹ್ಲಿಯ ಮುತ್ತಿನಂತ ವರ್ಲ್ಡ್ರೆಕಾರ್ಡ್ಸ್.. ಏನೇನು ದಾಖಲೆ ಬರೆದರು ವಿರಾಟ್?
ದುಡ್ಡು ಇದ್ದರೂ ಆಟೋ ಕೊಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮೊಮ್ಮಗ ಕೋಪಿಸಿಕೊಂಡಿದ್ದಾನೆ. ಅಲ್ಲದೇ ಅಜ್ಜಿಗೆ ಮಾಡಿಸಬೇಕು ಅಂತಾ ಕಳ್ಳತನಕ್ಕೆ ಪ್ಲಾನ್ ಹಾಕಿದ್ದಾನೆ. ಅಂತೆಯೇ ಅಜ್ಜಿ ಮನೆಯಲ್ಲಿ ಇಲ್ಲದಿದ್ದಾಗ ನಕಲಿ ಕೀ ಮಾಡಿಸಿದ್ದಾನೆ.
ಇತ್ತೀಚೆಗೆ ಮನೆಯಲ್ಲಿ ಅಜ್ಜಿ ಮನೆಯಲ್ಲಿ ಇಲ್ಲದಾಗ ನಕಲಿ ಕೀ ಸಹಾಯದಿಂದ ಹಣ ಕಳ್ಳತನ ಮಾಡಿದ್ದಾನೆ. 81 ಚಿನ್ನಾಭರಣ ಹಾಗೂ 9 ಲಕ್ಷ 44 ಸಾವಿರ ನಗದು ಕಳ್ಳತನ ಮಾಡಿದ್ದ. ಇನ್ನೇನು ಆಟೋ ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಜ್ಜಿ ಪುಟ್ನಂಜಮ್ಮ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ.
ಇದನ್ನೂ ಓದಿ: ಅಬ್ದುಲ್ ರಹೀಮಾನ್ ಪ್ರಕರಣಕ್ಕೆ ಟ್ವಿಸ್ಟ್ -ಗಾಯಾಳು ಶಫಿಯಿಂದ ಮಹತ್ವದ ಮಾಹಿತಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ