newsfirstkannada.com

ಚಿನ್ನದ ನಾಡಿನಿಂದ ಕಾಂಗ್ರೆಸ್‌ ನಾಯಕರ ಭರ್ಜರಿ ಪ್ರಚಾರ.. ಇಂದಿನಿಂದ ಅಖಾಡಕ್ಕೆ ಧುಮುಕಲಿರುವ ಸಿಎಂ, ಡಿಸಿಎಂ 

Share :

Published April 6, 2024 at 7:30am

    ಇವತ್ತು ಬೆಳಗ್ಗೆ 10:30ಕ್ಕೆ ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಕೆ

    ಪೂಜೆ ಬಳಿಕ ಸಿದ್ದರಾಮಯ್ಯ, ಡಿಕೆಶಿಯ ಬೃಹತ್ ರೋಡ್ ಶೋ

    ಮೊದಲ ದಿನವಾದ ಇಂದು ಕೋಲಾರದಲ್ಲಿ ಸಿಎಂ, ಡಿಸಿಎಂ ಅಬ್ಬರ

ಪ್ರಜಾಪ್ರಭುತ್ವ ಯುದ್ಧಕ್ಕೆ ದಿನಗಣನೆ ಆರಂಭವಾಗಿದೆ. ಲೋಕ ಕದನದ ಸೇನಾನಿಗಳು ಅಖಾಡಕ್ಕೆ ಇಳಿದು ಗೆಲುವಿಗಾಗಿ ರಣಕಹಳೆ ಮೊಳಗಿಸುತ್ತಿದ್ದಾರೆ. ಇದೀಗ ಮತದಾನ ಸಮರದಲ್ಲಿ ಗೆಲ್ಲಲೇ ಬೇಕೆಂದು ಪಣ ತೊಟ್ಟಿರೋ ಕಾಂಗ್ರೆಸ್ ಪಡೆ ಲೋಕ ತಂತ್ರವನ್ನ ಹೆಣೆಯುತ್ತಿದೆ. ಇವತ್ತಿನಿಂದ ಮುಳಬಾಗಿಲಿನ ಕುರುಡುಮಲೆ ಕ್ಷೇತ್ರದಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯನ್ನ ಆರಂಭಿಸಲು ಸಜ್ಜಾಗಿದೆ.

ಲೋಕಸಭಾ ಕದನ ಕಣದಲ್ಲಿ ಇವತ್ತಿನಿಂದ ಜೋಡೆತ್ತುಗಳ ಅಬ್ಬರ ಶುರುವಾಗಲಿದೆ. ಪ್ರಜಾಪ್ರಭುತ್ವ ಯುದ್ಧದಲ್ಲಿ ಎದುರಾಳಿಗಳ ಮಣ್ಣುಮುಕ್ಕಿಸಲು ಕೈ ಕಲಿಗಳು ರಣಾಂಗಣಕ್ಕೆ ಎಂಟ್ರಿಕೊಡಲಿದ್ದಾರೆ.. ಚಿನ್ನದ ನಾಡಿನಿಂದ ಕಾಂಗ್ರೆಸ್‌ ನಾಯಕರು ಭರ್ಜರಿ ಪ್ರಚಾರವನ್ನ ಆರಂಭಿಸಲಿದ್ದಾರೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣಕಹಳೆ‌

ಇವತ್ತಿನಿಂದ ಲೋಕಸಭಾ ಚುನಾವಣೆಯ ಪ್ರಚಾರದ ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಧುಮುಕಲಿದ್ದಾರೆ. ಇವತ್ತು ಬೆಳಗ್ಗೆ 9.30ಕ್ಕೆ ಹೆಚ್‌ಎಎಲ್‌ನಿಂದ ಹೆಲಿಕಾಪ್ಟರ್ ಮೂಲಕ ಸಿಎಂ, ಡಿಸಿಎಂ ಮುಳಬಾಗಿಲಿಗೆ ತೆರಳಲಿದ್ದಾರೆ. ಬಳಿಕ ಇಬ್ಬರೂ ಸೇರಿ ಜೋಡೆತ್ತಿನಂತೆ ಪ್ರಜಾಧ್ವನಿ-2 ಯಾತ್ರೆಯ ಮೂಲಕ ಒಗ್ಗಟ್ಟಿನ ರಣಕಹಳೆ ಮೊಳಗಿಸಲಿದ್ದಾರೆ. ಇಷ್ಟು ದಿನ ಪ್ರತ್ಯೇಕವಾಗಿ ಬಹಿರಂಗ ಸಭೆ, ಅಭ್ಯರ್ಥಿಗಳ ಪರವಾಗಿ ನಡೆಯುತ್ತಿದ್ದ ಕಾಂಗ್ರೆಸ್ ರಣಕಲಿಗಳು ಇವತ್ತಿನಿಂದ ಕೆಲ ಕ್ಷೇತ್ರಗಳಲ್ಲಿ ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ ಪ್ರಚಾರ ನಡೆಸಲು ಸಿಎಂ, ಡಿಸಿಎಂ ಮುಂದಾಗಿದ್ದಾರೆ. ಕುರುಡುಮಲೆ ದೇವಸ್ಥಾನದಿಂದಲೆ ಜೋಡೆತ್ತುಗಳ ಪ್ರಜಾಧ್ವನಿ- 2 ಯಾತ್ರೆ ಆರಂಭವಾಗಲಿದೆ.

ಕುರುಡುಮಲೆ ದೇವಸ್ಥಾನದಲ್ಲಿ ಸಿಎಂ, ಡಿಸಿಎಂ ವಿಶೇಷ ಪೂಜೆ

ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿರೋ ಕುರುಡುಮಲೆ ದೇವಸ್ಥಾನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿಕುಮಾರ್‌ ಪೂಜೆ ಸಲ್ಲಿಸಲಿದ್ದಾರೆ. ಇವತ್ತು ಬೆಳಗ್ಗೆ 10:30ಕ್ಕೆ ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಲಿದ್ದಾರೆ. ಬಳಿಕ ಸಿದ್ದರಾಮಯ್ಯ, ಡಿಕೆಶಿ ಬೃಹತ್ ರೋಡ್‌ ಶೋ ನಡೆಸಲಿದ್ದಾರೆ. ಮೊದಲ ದಿನವಾದ ಇಂದು ಕೋಲಾರದಲ್ಲಿ ಸಿಎಂ, ಡಿಸಿಎಂ ಅಬ್ಬರದ ಕ್ಯಾಂಪೇನ್ ಮಾಡಲಿದ್ದಾರೆ.

ಅಂದ್ಹಾಗೆ ಕುರುಡುಮಲೆ ದೇವಸ್ಥಾನದಿಂದ ಪ್ರಾರಂಭವಾದ ಕಾರ್ಯಕ್ರಮಗಳ ಹೆಚ್ಚು ಫಲ ನೀಡಿವೆ ಎಂಬ ನಂಬಿಕೆ ಇದೆ. ಹೀಗಾಗಿ ಎಸ್.ಎಂ, ಕೃಷ್ಣ ಕಾಲದಿಂದಲೂ ಕುರುಡುಮಲೆಯಿಂದ ಕಾಂಗ್ರೆಸ್ ಕಾರ್ಯಕ್ರಮಗಳು ಆಯೋಜನೆ ಆಗುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕುರುಡುಮಲೆಯಿಂದಲೇ ಸಿಎಂ, ಡಿಸಿಎಂ ಯಾತ್ರೆ ಆರಂಭಿಸಿದ್ರು. ಹೀಗಾಗಿ ಪ್ರಜಾಧ್ವನಿ 2 ಯಾತ್ರೆಯನ್ನ ಗಣಪತಿ ಸನ್ನಿಧಿಯಿಂದ ಪ್ರಾರಂಭ ಮಾಡಲು ಕೈ ಪಡೆ ಮುಂದಾಗಿದೆ. ಇನ್ನೂ ಕೋಲಾರದ ಬಳಿಕ ಜೋಡೆತ್ತು ಬೆಂಗಳೂರಿನಲ್ಲಿ ಲೋಕಕಹಳೆ ಮೊಳಗಿಸಲಿದೆ.

ಕೋಲಾರ ಕ್ಷೇತ್ರದ ಬಳಿಕ ಕೈ ಕಲಿಗಳಿಂದ ಬೆಂಗಳೂರು ಟಾರ್ಗೆಟ್

ಕೋಲಾರ ಲೋಕಸಭಾ ಕ್ಷೇತ್ರದ ಬಳಿಕ ಕೈ ಕಲಿಗಳು ಬೆಂಗಳೂರು ಟಾರ್ಗೆಟ್ ಮಾಡಲಿದ್ದಾರೆ. ಏಪ್ರಿಲ್ 7ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಬೆಂಗಳೂರು ಉತ್ತರದಲ್ಲಿ ಪ್ರಚಾರ ನಡೆಸಲಿದ್ದಾರೆ.. ಸಂಜೆ ‌5 ಗಂಟೆಗೆಯಿಂದ 9 ಗಂಟೆಗೆಯವರಿಗೆ ಬೆಂಗಳೂರು ದಕ್ಷಿಣದಲ್ಲಿ ‌ಪ್ರಚಾರ ಆರಂಭಿಸಲಿದ್ದಾರೆ.. ಏಪ್ರಿಲ್ 8ರ ಬೆಳಗ್ಗೆ 11 ಗಂಟೆಯಿಂದ 2 ಗಂಟೆವರೆಗೆ ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆಯವರೆಗೆ ಬೆಂಗಳೂರು ಕೇಂದ್ರದಲ್ಲಿ ಕ್ಯಾಂಪೇನ್‌ ಮಾಡಲಿದ್ದಾರೆ.. ಬೆಂಗಳೂರು ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿ ಸಿಎಂ, ಡಿಸಿಎಂ ರಣಕಹಳೆ ಮೊಳಗಿಸಲಿದ್ದಾರೆ.

ಒಟ್ಟಾರೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್‌ ಬಿಜೆಪಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ.. ಇದೀಗ ವಿಜ್ಞ ನಿವಾರಕನ ಸನ್ನಿಧಿಯಿಂದ ಪ್ರಚಾರ ಆರಂಭಿಸುತ್ತಿದ್ದು, ಗಣಪನ ಕೃಪೆ ಕೈ ನಾಯಕರ ಮೇಲೆ ಇರುತ್ತಾ? ಇಲ್ವಾ? ಅನ್ನೋದು ಜೂನ್ 4ಕ್ಕೆ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನದ ನಾಡಿನಿಂದ ಕಾಂಗ್ರೆಸ್‌ ನಾಯಕರ ಭರ್ಜರಿ ಪ್ರಚಾರ.. ಇಂದಿನಿಂದ ಅಖಾಡಕ್ಕೆ ಧುಮುಕಲಿರುವ ಸಿಎಂ, ಡಿಸಿಎಂ 

https://newsfirstlive.com/wp-content/uploads/2024/03/Siddaramaiah-Dkshivakumar-5.jpg

Load More