/newsfirstlive-kannada/media/post_attachments/wp-content/uploads/2024/10/Jio-Fiber-1.jpg)
ದೀಪಾವಳಿ ಹಬ್ಬದ ಸಲುವಾಗಿ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಫೈಬರ್ ಹೊಸ ಕೊಡುಗೆಯೊಂದನ್ನ ನೀಡುತ್ತಿದೆ. ಹೆಚ್ಚುವರಿ ಪ್ರಯೋಜನದ ಜೊತೆಗೆ ಅದ್ಭುತ ಯೋಜನೆಗಳನ್ನು ನೀಡುತ್ತಿದೆ.
ಜಿಯೋ ಈಗಾಗಲೇ ದೀಪಾವಳಿ ಧಮಾಕಾ ಆಫರ್ ನೀಡಿದೆ. ಇದು ಹೊಸ ಫೈಬರ್ ಬ್ರಾಂಡ್ಬ್ಯಾಂಡ್ ಬಳಕೆದಾರರ ಮೇಲೆ ಕೇಂದ್ರಿಕೃತವಾಗಿದೆ. ಸೆಪ್ಟೆಂಬರ್ನಲ್ಲೂ ಜಿಯೋ ಏರ್ಫೈಬರ್ ತನ್ನ ಬಳಕೆರದಾರರಿಗೆ ವಿಭಿನ್ನ ರೀತಿಯ ಕೊಡುಗೆ ನೀಡಿದೆ. ಈ ಯೋಜನೆ ಕೂಡ ಗ್ರಾಹಕ ಮನಗೆದ್ದಿದೆ.
ದೀಪಾವಳಿ ಧಮಾಕಾ ಆಫರ್
30Mbps ಯೋಜನೆ: ದೀಪಾವಳಿ ಹಬ್ಬದ ಸಲುವಾಗಿ ಜಿಯೋ ಫೈಬರ್ ಬಳಕೆದಾರರಿಗೆ 2,222 ರೂಪಾಯಿ ಬೆಲೆ ಯೋಜನೆ ಪರಿಚಯಿಸಿದೆ. ಇದರ ಮೂಲಕ ಅನಿಯಮಿತ ಡೇಟಾ, ಉಚಿತ ಧ್ವನಿ ಕರೆಗಳು ಮತ್ತು 800 ಟಿವಿ ಚಾನೆಲ್‌ಗಳಿಗೆ ಪ್ರವೇಶ ನೀಡುತ್ತಿದೆ. ಅಂದಹಾಗೆಯೇ ಇದು ಮೂರು ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ.
101 ರೂ.ಯೋಜನೆ: ಜಿಯೋ ಹೆಚ್ಚುವರಿ ಡೇಟಾ ಪ್ರಯೋಜನವನ್ನು ಗ್ರಾಹಕರಿಗೆ ನೀಡುತ್ತಿದೆ. ಇದು 90 ದಿನಗಳ ಮಾನ್ಯತೆಯೊಂದಿಗೆ 100GB ಹೆಚ್ಚುವರಿ ಡೇಟಾ ಪ್ರಯೋಜನ ಒದಗಿಸುತ್ತಿದೆ. ಜೊತೆಗೆ ಹಲವು ಓಟಿಟಿಗಳಿಗೆ ಉಚಿತ ಪ್ರವೇಶ ನೀಡುತ್ತಿದೆ.
ಇದನ್ನೂ ಓದಿ: ಜಿಯೋ ಕಡೆಯಿಂದ ದೀಪಾವಳಿ ಭರ್ಜರಿ ಧಮಾಕಾ! ₹3,000ಗಳ ವೋಚರ್, ವಿಮಾನದಲ್ಲೂ ಪ್ರಯಾಣಿಸಬಹುದು!
3,333 ರೂ. ಯೋಜನೆ: ಇದರ ಮೂಲಕ 150GB ಉಚಿತ ಹೆಚ್ಚುವರಿ ಡೇಟಾ ಮತ್ತು ಮೂರು ತಿಂಗಳ ಮಾನ್ಯತೆ ಪಡೆದಿದೆ.
4,444 ಯೋಜನೆ: ಇದರ ಮೂಲಕ 200GB ಉಚಿತ ಡೇಟಾ ಒದಗಿಸುತ್ತಿದೆ. ಮೂರು ತಿಂಗಳ ಮಾನ್ಯತೆಯನ್ನು ಹೊಂದಿದೆ. 100Mbps ವೇಗವಿರಲಿದೆ. ಜೊತೆಗೆ ಬಹು ಪ್ರಯೋಜನಗಳನ್ನು ಈ ಯೋಜನೆಗಳು ಹೊಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ