/newsfirstlive-kannada/media/post_attachments/wp-content/uploads/2024/11/EYES-OPERAION.jpg)
ಏನೋ ಮಾಡಲು ಹೋಗಿ ಮತ್ತೇನೋ ಮಾಡಿದರು ಅನ್ನೋದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದೆ ಗ್ರೇಟರ್ ನೊಯ್ಡಾದ ಆನಂದ ಸ್ಪೆಕ್ಟ್ರಮ್ ಆಸ್ಪತ್ರೆ. 7 ವರ್ಷದ ಮಗು ಕಣ್ಣಿನ ಆಪರೇಷನ್​ ಎಂದು ಈ ಆಸ್ಪತ್ರೆಗೆ ಬಂದಿತ್ತು. ಮಗುವಿನ ಎಡಗಣ್ಣಿನಲ್ಲಿ ಕೊಂಚ ಸಮಸ್ಯೆ ಇದ್ದಿದ್ದರಿಂದ ವೈದ್ಯರು ಆಪರೇಷನ್ ಮಾಡಬೇಕು ಎಂದಿದ್ದರು.ವೈದ್ಯರ ಸಲಹೆಯಂತೆ ಆಪರೇಷನ್​ಗಾಗಿ ಮಗುವನ್ನು ಕರೆದುಕೊಂಡು ಬಂದಿದ್ದರು ಪೋಷಕರು. ಆದ್ರೆ ವೈದ್ಯರು ಎಡಗಣ್ಣನ್ನು ಬಿಟ್ಟು ಬಲಗಣ್ಣನ್ನು ಆಪರೇಷನ್ ಮಾಡಿ ಯಡವಟ್ಟು ಮಾಡಿದ್ದಾರೆ.
ಇದನ್ನೂ ಓದಿ:ಕುಡಿದು ಬಂದ ವರನನ್ನು ವರಿಸಲು ನಿರಾಕರಿಸಿದ ವಧು; ಮದುಮಗನಿಂದ ಮದುವೆ ಖರ್ಚು ಒದ್ದು ವಸೂಲಿ!
ಮಗುವಿನ ಪೋಷಕರು ಹೇಳುವ ಪ್ರಕಾರ ಆಪರೇಷನ್ ಬಳಿಕ ನಮಗೆ ವೈದ್ಯರು ಮಾಡಿದ ಯಡವಟ್ಟು ಗೊತ್ತಾಯ್ತು. ಅದನ್ನು ವೈದ್ಯರ ಗಮನಕ್ಕೆ ತಂದಿದ್ದಾರೆ. ಆದ್ರೆ ವೈದ್ಯರು ಹಾಗೆ ಅವರೊಂದಿಗಿದ್ದ ಸಿಬ್ಬಂದಿ ಅನುಚಿತ ವರ್ತನೆ ತೋರಿದ್ದಾರೆ. ಕೂಡಲೇ ರಾಜ್ಯ ವೈದ್ಯಕೀಯ ಇಲಾಖೆಗೆ ದೂರು ನೀಡಿದ್ದಾರೆ. ಕೂಡಲೇ ವೈದ್ಯರ ಲೈಸನ್ಸ್ ರದ್ದುಪಡಿಸಿ ಆಸ್ಪತ್ರೆಯನ್ನು ಮುಚ್ಚುಸುವಂತೆ ಆಗ್ರಹಿಸಿದ್ದಾರೆ.
ಸದ್ಯ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ಕೈಗೊಂಡಿದ್ದು ವೈದ್ಯರ ಹಾಗೂ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ. ದೇಶದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಕೇರಳ ಹಾಗೂ ಲುದಿಯಾನದಲ್ಲಿಯೂ ಕೂಡ ಇದೇ ಮಾದರಿಯ ಪ್ರಕರಣಗಳು ವರದಿಯಾಗಿದ್ದವು. ದೇಹದ ಬೇರೆ ಭಾಗಕ್ಕೆ ಆಪರೇಷನ್ ಮಾಡಿ ವೈದ್ಯರು ಯಡವಟ್ಟು ಮಾಡಿಕೊಂಡಿದ್ದರು. ಇದು ವೈದ್ಯರ ಮೇಲೆ ಹಾಗೂ ಅವರ ಕರ್ತವ್ಯ ಪ್ರಜ್ಞೆಯ ಮೇಲೆ ಸಾರ್ವಜನಿಕರಿಗೆ ಸಂಶಯ ಮೂಡುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us