ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ ಇಟ್ಟಿದ್ದ ಕಿಡಿಗೇಡಿಗಳು, ನಿರ್ಲಕ್ಷ್ಯ ವಹಿಸಿದ PDOಗೆ ಇನ್​ಸ್ಪೆಕ್ಟರ್ ಏಕವಚನದಲ್ಲೇ ತರಾಟೆ

author-image
Ganesh
Updated On
ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ ಇಟ್ಟಿದ್ದ ಕಿಡಿಗೇಡಿಗಳು, ನಿರ್ಲಕ್ಷ್ಯ ವಹಿಸಿದ PDOಗೆ ಇನ್​ಸ್ಪೆಕ್ಟರ್ ಏಕವಚನದಲ್ಲೇ ತರಾಟೆ
Advertisment
  • ಈದ್‌ ಮಿಲಾದ್ ದಿನ ಇರಿಸಲಾಗಿದ್ದ ಬಾವುಟ
  • ಇನ್​ಸ್ಪೆಕ್ಟರ್ ಸಮಯ ಪ್ರಜ್ಞೆಯಿಂದ ತಪ್ಪಿದ ಸಂಘರ್ಷ
  • ಪಿಡಿಓ ವಿರುದ್ಧ ನಿರ್ಲಕ್ಷ್ಯ ಆರೋಪ, ಇನ್​ಸ್ಪೆಕ್ಟರ್ ತರಾಟೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗೇರು ಗಣಪತಿ ಕಟ್ಟೆಯಲ್ಲಿ ಕಿಡಿಗೇಡಿಗಳು ಹಸಿರು ಬಾವುಟ ಇಟ್ಟಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ತೆರವುಗೊಳಿಸಿದ್ದಾರೆ.

ಈದ್‌ ಮಿಲಾದ್ ದಿನ ಇರಿಸಲಾಗಿದ್ದ ಬಾವುಟ ಅದಾಗಿದೆ. ಸೆಪ್ಟೆಂಬರ್ 30 ರಂದು ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈದ್ ಮಿಲಾದ್ ದಿನ ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ ಇಟ್ಟಿರುವ ಬಗ್ಗೆ ಮಾಹಿತಿ ಇದ್ದರೂ ಪಿಡಿಓ ಬೇಜವಾಬ್ದಾರಿ ಮೆರೆದಿದ್ದಾರೆ ಎನ್ನಲಾಗಿದೆ.

ಹೊಸಬೆಟ್ಟು ಪಿಡಿಓ ಶೇಖರ್ ಅದನ್ನು ತೆರವು ಮಾಡದೇ ಉದ್ಧಟತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಪಿಡಿಓ ವಿರುದ್ಧ ಇನ್ಸ್‌ಪೆಕ್ಟರ್ ಸಂದೇಶ್ ಕಿಡಿ ಕಾಡಿದ್ದಾರೆ. ಇದರ ಮೇಲೆ‌ ಬಾವುಟ ಹಾಕಲಿಕ್ಕೆ ಪರ್ಮಿಶನ್ ತೆಗೊಂಡಿದ್ದಾರಾ? ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನ್ ಮಾಡ್ತಾ ಇದ್ದೀಯಾ? ಅವರು ಪರ್ಮಿಷನ್ ತೆಗೊಂಡಿಲ್ಲ ಅಂದ್ರೆ ಪೊಲೀಸ್ ಕಂಪ್ಲೆಟ್ ಕೊಡಬೇಕು. ಮೊದಲು ಇವನನ್ನೇ ಆರೋಪಿ‌ ಮಾಡಬೇಕು. ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ. ಸಂಬಂಧ ಇಲ್ಲ ಅಂತ ಹೇಳೋ ನೀನ್ಯಾಕೆ ಪಿಡಿಓ ಆಗಿದ್ದಿ ಎಂದು ಏಕವಚನದಲ್ಲೇ ಇನ್ಸ್​​ಪೆಕ್ಟರ್ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ಮೂಲಕ ಬಾವುಟವನ್ನು ತೆರವು ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಸಮಯ ಪ್ರಜ್ಞೆಯಿಂದ ಸಂಘರ್ಷವೊಂದು ತಪ್ಪಿದೆ ಅನ್ನೋ ಮಾತುಗಳು ಕೇಳಿಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment