newsfirstkannada.com

ಇಂದು ಬಿಜೆಪಿಗೆ ಜನಾರ್ದನ​ ರೆಡ್ಡಿ ಸೇರ್ಪಡೆ; ಕೇಸರಿ ಪಕ್ಷಕ್ಕೆ ಆಗೋ ಲಾಭವೇನು?

Share :

Published March 25, 2024 at 6:14am

  ಜನಾರ್ದನ ರೆಡ್ಡಿ ಬಲದಿಂದ ಹೆಚ್ಚು ‘ಲೋಕ’ ಗೆಲ್ಲಲು ಕೇಸರಿ ಪ್ಲಾನ್‌

  ಜನಾರ್ದನ ರೆಡ್ಡಿ ಮೂಲಕ ‘ಕೇಸರಿ’ ಸಾಮ್ರಾಜ್ಯ ವಿಸ್ತರಣೆಗೆ ತಂತ್ರ

  ಕಲ್ಯಾಣ ಕರ್ನಾಟಕದಲ್ಲಿ ಗಮನ ಕೇಂದ್ರೀಕರಿಸಿ ರೆಡ್ಡಿ ರಾಜಕಾರಣ

ವಿಧಾನಸಭೆ ಕದನದ ವೇಳೆ ಹೊಸ ಪಕ್ಷ ಕಟ್ಟಿ ಹೋರಾಡಿದ್ದವರು ಜನಾರ್ದನ ರೆಡ್ಡಿ. ಕೆಆರ್‌ಪಿಪಿ ಪಕ್ಷದಿಂದ ಸಿಂಗಲ್‌ ಆಗಿ ಗೆದ್ದಿದ್ದ ನಾಯಕ. ಆದ್ರೀಗ ಬಳ್ಳಾರಿ ಗಣಿಧಣಿ ಮರಳಿ ಗೂಡು ಸೇರೋದಕ್ಕೆ ಸಜ್ಜಾಗಿದ್ದಾರೆ. ಬಿಜೆಪಿ ಸೇರಲು ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದೀಗ ಕೇಸರಿ ಪಾಳಯಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಯೊಂದೇ ಬಾಕಿ ಇದೆ.

ಗಣಿಧಣಿ ಬಳ್ಳಾರಿಯಲ್ಲಿ ಕಮಲ ಅರಳಿಸಿದ ಖ್ಯಾತಿಯ ಜನಾರ್ದನ ರೆಡ್ಡಿ ಅದೇ ಬಿಜೆಪಿ ವಿರುದ್ಧ ಸೆಟೆದು ನಿಂತಿದ್ರು. ವಿಧಾನಸಭಾ ಚುನಾವಣೆ ಹೊತ್ತಲ್ಲಿ ಹೊಸ ಪಕ್ಷ ಘೋಷಣೆ ಮಾಡಿ ರಾಷ್ಟ್ರೀಯ ಪಕ್ಷಗಳ ವಿರುದ್ಧವೇ ಗುಡುಗಿದ್ರು. ಬಳ್ಳಾರಿಯಲ್ಲಿ ಕೇಸರಿ ಅಭ್ಯರ್ಥಿಯಾಗಿದ್ದ ತಮ್ಮ ಸೋದರನ ಸೋಲಿಗೆ ಕಾರಣರಾಗಿದ್ರು. ಆದ್ರೀಗ ಎಲ್ಲಾ ಮರೆತು ಪಾರ್ಲಿಮೆಂಟ್ ಫೈಟ್‌ ವೇಳೆ ಮರಳಿ ಗೂಡು ಸೇರಲು ಸಜ್ಜಾಗಿದ್ದಾರೆ.

ಇಂದು ‘ಕಮಲ’ ಮುಡಿಯಲಿರುವ ಬಳ್ಳಾರಿ ‘ಗಣಿಧಣಿ’

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಯಾರೂ ಮಿತ್ರರಲ್ಲ ಅನ್ನೋದು ಆಗಾಗ ಸಾಬೀತಾಗುತ್ತಲೇ ಇರುತ್ತೆ. ಇದೇ ರೀತಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಮೇಲಿನ ಮುನಿಸನ್ನ ಮರೆತಿದ್ದಾರೆ. ಮರಳಿ ಕಮಲ ಮುಡಿಯಲು ಮುಂದಾಗಿದ್ದಾರೆ. ಇತ್ತೀಚಿಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕೆಆರ್‌ಪಿಪಿ ಮುಖ್ಯಸ್ಥ ಜನಾರ್ದನ ರೆಡ್ಡಿ ಕಾಂಗ್ರೆಸ್ ಪರ ವೋಟಿಂಗ್ ಮಾಡಿದ್ರು. ಆದ್ರೀಗ ಲೋಕಸಭೆ ಚುನಾವಣೆ ಬರ್ತಿದ್ದಂತೆ ಬಿಜೆಪಿ ಸೇರಲು ಗಣಿಧಣಿ ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ನೇತೃತ್ವದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅ್ಯಂಡ್ ಟೀಂ ಇಂದು ಕೇಸರಿ ಧ್ವಜವನ್ನ ಹಿಡಿಯೋದು ಖಚಿತವಾಗಿದೆ.

ಇದನ್ನು ಓದಿ: ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ತಮಿಳುನಾಡು ಮಿನಿಸ್ಟರ್​​​.. ಏನಿದು ವಿವಾದ?

ರೆಡ್ಡಿ ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರ ಗ್ರೀನ್‌ಸಿಗ್ನಲ್

ಬಿಜೆಪಿ ಸೇರುವ ನಿಟ್ಟಿನಲ್ಲಿ ಇವತ್ತು ಜನಾರ್ದನ ರೆಡ್ಡಿ 200ಕ್ಕೂ ಅಧಿಕ ಕೆಆರ್‌ಪಿಪಿ ಪದಾಧಿಕಾರಿಗಳ ಸಭೆಯನ್ನ ಕರೆದಿದ್ರು. ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ಇರುವ ರೆಡ್ಡಿಯ ಪಾರಿಜಾತ ನಿವಾಸದಲ್ಲಿ ಪದಾಧಿಕಾರಿಗಳ ಸಭೆ ನಡೀತು. ಈ ಸಭೆಯಲ್ಲಿ ರೆಡ್ಡಿಗಾರು ಬಿಜೆಪಿಗೆ ಸೇರ್ಪಡೆಯಾಗುವ ಕುರಿತು ಚರ್ಚೆ ನಡೆಸಿದ್ರು. ಕೆಆರ್‌ಪಿಪಿಯನ್ನ ಬಿಜೆಪಿಯೊಳಗೆ ವಿಲೀನಗೊಳಿಸುವ ಪಕ್ಷದ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಸಭೆ ಬಳಿಕ ಮಾತನಾಡಿದ ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆಯಾಗುವ ಮಾಹಿತಿ ನೀಡಿದ್ರು. ಬಿಜೆಪಿ ಸೇರ್ಪಡೆಯಾಗಲಿರೋ ಜನಾರ್ದನ ರೆಡ್ಡಿ ಈಗಾಗಲೇ ಗೃಹ ಸಚಿವ ಅಮಿತ್ ಶಾ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಬಿಜೆಪಿ ಸೇರ್ಪಡೆಯಾಗಲು ಕೇಸರಿ ನಾಯಕ ಮುಂದೆ ಕೆಲ ಡಿಮ್ಯಾಂಡ್‌ನೂ ರೆಡ್ಡಿಗಾರು ಇಟ್ಟಿದ್ದಾರೆ.

ಬಿಜೆಪಿ ಸೇರ್ಪಡೆ ಬಗ್ಗೆ ಅಮಿತ್ ಶಾ ಭೇಟಿಯಾಗಿ ಜನಾರ್ದನ ರೆಡ್ಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನ ಬದಲಾಯಿಸುವಂತೆ ಬೇಡಿಕೆ ಇಟ್ಟಿದ್ದಾರಂತೆ. ಅಲ್ಲದೇ ಕೊಪ್ಪಳದ ಟಿಕೆಟ್‌ನ ಪತ್ನಿ ಅರುಣಾ ಲಕ್ಷ್ಮೀಗೆ ಕೊಪ್ಪಳ ಬಿಜೆಪಿ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಾಜ್ಯ ನಾಯಕರ ಜೊತೆ ಚರ್ಚಿಸುವುದಾಗಿ ಅಮಿತ್ ಶಾ ಉತ್ತರ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನೂ ಕೊಪ್ಪಳ ಟಿಕೆಟ್ ಕೊಟ್ರೆ ಬಿಜೆಪಿ ಸೇರ್ಪಡೆಯಾಗೋದು ಅಂತ ರೆಡ್ಡಿ ಷರತ್ತು ಹಾಕಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ, ಗಣಿನಾಡಿನ ಬಳಿಕ ಹನುಮನ ನಾಡನ್ನೇ ರಾಜಕೀಯ ಕೇಂದ್ರ ಮಾಡಿಕೊಳ್ಳಲು ರೆಡ್ಡಿಗಾರು ರಣತಂತ್ರ ಹೆಣೆದಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಕೊಪ್ಪಳವನ್ನ ಕಬ್ಜ ಮಾಡಲು ಮರಳಿ ಗೂಡು ಸೇತ್ರಿದ್ದಾರೆ. ಇದೀಗ ಕೊಪ್ಪಳ ಟಿಕೆಟ್‌ನ ಬಿಜೆಪಿ ಹೈಕಮಾಂಡ್ ರೆಡ್ಡಿಗಾರು ಪತ್ನಿಗೆ ನೀಡುತ್ತಾ? ಅನ್ನೋದೆ ಸದ್ಯದ ಕುತೂಹಲ.

ಬಿಜೆಪಿಗೆ ರೆಡ್ಡಿಗಾರು ಬಲ!

 • ಗಣಿನಾಡಲ್ಲಿ ತಮ್ಮದೆ ರಾಜಕೀಯ ಸಾಮ್ರಾಜ್ಯ ಕಟ್ಟಿದ್ದ ರೆಡ್ಡಿಗಾರು
 • ರೆಡ್ಡಿಯ ಸಾಮ್ರಾಜ್ಯದಲ್ಲಿ ಅಧಿಪತ್ಯ ಸಾಧಿಸಲು ಬಿಜೆಪಿ ಹೆಣಗಾಟ
 • ಜನಾರ್ದನ ರೆಡ್ಡಿ ಮೂಲಕ ‘ಕೇಸರಿ’ ಸಾಮ್ರಾಜ್ಯ ವಿಸ್ತರಣೆಗೆ ತಂತ್ರ
 • ಕಲ್ಯಾಣ ಕರ್ನಾಟಕದಲ್ಲಿ ಗಮನ ಕೇಂದ್ರೀಕರಿಸಿ ರೆಡ್ಡಿ ರಾಜಕಾರಣ
 • 20-30 ವಿಧಾನಸಭೆ ಕ್ಷೇತ್ರಗಳಲ್ಲಿ ಜನಾರ್ದನ ರೆಡ್ಡಿಗಿದೆ ಸಂಪರ್ಕ
 • ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಕ್ಷೇತ್ರದಲ್ಲಿ ಪ್ರಭಾವ
 • ಈ ಭಾಗಗಳಲ್ಲಿ ರೆಡ್ಡಿ ವರ್ಚಸ್ಸಿನಿಂದ ಬಿಜೆಪಿಗೆ ಆಗಲಿದೆ ಲಾಭ
 • ವಿಧಾನಸಭೆ ಎಲೆಕ್ಷನ್​​ನಲ್ಲಿ ರೆಡ್ಡಿ ಪರ ಲಿಂಗಾಯತ, ಅಹಿಂದ ಮತ
 • ವಿಧಾನಸಭೆಯಲ್ಲಿ ರೆಡ್ಡಿ ನಿರ್ಲಕ್ಷಿಸಿ ಬೆಲೆ ತೆತ್ತಿರುವ ಬಿಜೆಪಿ ಪಾಳಯ​​
 • ಗಾಲಿ ಜನಾರ್ದನ ರೆಡ್ಡಿಗೆ ಗೆಲ್ಲಿಸುವುದಕ್ಕಿಂತ ಸೋಲಿಸುವ ಶಕ್ತಿಯಿದೆ
 • ರೆಡ್ಡಿಗಾರು ಸಾಮರ್ಥ್ಯವನ್ನ ಅರಿತಿರುವ ಬಿಜೆಪಿ ‘ಹೈ’ ನಾಯಕರು
 • ಜನಾರ್ದನ ರೆಡ್ಡಿ ಬಲದಿಂದ ಹೆಚ್ಚು ‘ಲೋಕ’ ಗೆಲ್ಲಲು ಕೇಸರಿ ಪ್ಲಾನ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಬಿಜೆಪಿಗೆ ಜನಾರ್ದನ​ ರೆಡ್ಡಿ ಸೇರ್ಪಡೆ; ಕೇಸರಿ ಪಕ್ಷಕ್ಕೆ ಆಗೋ ಲಾಭವೇನು?

https://newsfirstlive.com/wp-content/uploads/2023/11/Janardhan-Redy.jpg

Load More