/newsfirstlive-kannada/media/post_attachments/wp-content/uploads/2024/07/ROHIT_SHARMA_KOHLI-2.jpg)
ಟೀಮ್ ಇಂಡಿಯಾದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಕೆಲ ಯುವ ಆಟಗಾರರು ತಂಡಕ್ಕೆ ಎಂಟ್ರಿ ನೀಡಿದ್ದಾರೆ. ಕೆಲವರು ಯುಗಾಂತ್ಯದ ಸ್ಥಿತಿಯಲ್ಲಿದ್ದಾರೆ. ಅತ್ತ ಅವರು ತಂಡವನ್ನು ತೊರೆಯದೆ, ಇತ್ತ ಸೆಲೆಕ್ಷನ್ ಕಮಿಟಿಯೂ ಏನು ಮಾಡಲಾದ ಸ್ಥಿತಿಯಲ್ಲಿದೆ. ಇಂಥ ಸ್ಥಿತಿಯಲ್ಲಿರುವ ಬಿಸಿಸಿಐ ಸೆಲೆಕ್ಷನ್ ಕಮಿಟಿಗೆ ಚಾಪೆಲ್, ನೀತಿ ಪಾಠ ಮಾಡಿದ್ದಾರೆ.
ಆಸ್ಟ್ರೇಲಿಯಾ, ಇಂಗ್ಲೆಂಡ್.. ವಿಶ್ವ ಕ್ರಿಕೆಟ್​ನ ಮೋಸ್ಟ್ ಡೇಂಜರಸ್.. ಇಲ್ಲಿ ಯಾವಾಗ ಯಾವ ಆಟಗಾರನ ತಲೆದಂಡವಾಗುತ್ತೆ. ಯಾರು ಹೊರ ಹೋಗ್ತಾರೆ. ಯಾವಾಗ ಯಾವ ಯಂಗ್ ಸ್ಟರ್ಸ್ ತಂಡಕ್ಕೆ ವಾಪಸ್ ಆಗ್ತಾರೆ ಅನ್ನೋದೇ ಗೊತ್ತಾಗಲ್ಲ. ಈ ವಿಚಾರದಲ್ಲಿ ಟೀಮ್ ಇಂಡಿಯಾ ಫುಲ್ ಡಿಫರೆಂಟ್.
ಇದನ್ನೂ ಓದಿ:Match Fixing: ಕ್ರಿಕೆಟ್ ಲೋಕದಲ್ಲಿ ಮತ್ತೆ ಸಂಚಲನ.. ಫ್ರಾಂಚೈಸಿ ಮಾಲೀಕ ಅರೆಸ್ಟ್..!
ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಆಟಗಾರ, 10 ಮ್ಯಾಚ್​ಗೆ ಒಮ್ಮೆ ಸೆಂಚೂರಿ ಸಿಡಿಸಿದ್ರೆ ಸಾಕು. ಟೀಮ್ ಇಂಡಿಯಾದಲ್ಲಿ ಖಾಯಂ ಪ್ಲೇಸ್ ಸಿಗುತ್ತೆ. ಸುಲಭವಾಗಿ 10 ವರ್ಷ ಟೀಮ್ ಇಂಡಿಯಾದಲ್ಲಿ ಇರ್ತಾನೆ. ವಯಸ್ಸಾದ್ರೂ ಸತತ ಎರಡೂ ಮೂರು ವರ್ಷಗಳಿಂದ ಪರದಾಡುತ್ತಿದ್ದರು. ಕನಿಷ್ಠ ಪಕ್ಷ ಬೆಂಚ್​ನಲ್ಲೂ ಕೂರಿಸಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಮತ್ತು ಅಶ್ವಿನ್ - ಜಡೇಜಾ..
ವೈಫಲ್ಯ.. ವಯಸ್ಸಾದರು ಗುಡ್​ ಬೈ ಹೇಳಲ್ಲ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಶ್ವಿನ್, ರವೀಂದ್ರ ಜಡೇಜಾ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸತತ ವೈಫಲ್ಯ ಅನುಭವಿಸ್ತಿರುವ ಇವರು, ಟೀಮ್ ಇಂಡಿಯಾ ಸೋಲಿನ ಸೂತ್ರಧಾರಿಗಳು ಆಗ್ತಿದ್ದಾರೆ. ಇಂಥ ಆಟಗಾರರನ್ನು ತಂಡದಿಂದ ಡ್ರಾಪ್ ಇರಲಿ, ಕನಿಷ್ಠ ಬೆಂಚ್ ಕೂಡ ಬಿಸಿ ಮಾಡಿಸಲು ಸಹ ಮ್ಯಾನೇಜ್​ಮೆಂಟ್​​ ಹಿಂದೇಟು ಹಾಕುತ್ತೆ.
40ರ ಆಸುಪಾಸಿನಲ್ಲಿರುವ ಆಟಗಾರರು ರನ್​​ಗಳಿಸಲು ಪರದಾಡಿದರು. ಸೆಲೆಕ್ಟರ್ಸ್ ಟಫ್ ಕಾಲ್ ತೆಗೆದುಕೊಳ್ಳಲ್ಲ. ಹಳೇ ಆಟ, ದಾಖಲೆಗಳ ನೆಪದಲ್ಲೇ ಚಾನ್ಸ್​ ನೀಡ್ತಾರೆ. ಇದು ಸಹಜವಾಗೇ ತಂಡದ ಮೇಲೆ ಎಫೆಕ್ಟ್ ಆಗುತ್ತೆ. ಹೀಗಾಗಿ ಟೀಮ್ ಇಂಡಿಯಾಗೆ ಟಫ್ ಖಡಕ್ ಸೆಲೆಕ್ಟರ್ಸ್ ಬೇಕಿದ್ದಾರೆ. ಇದೇ ವಿಚಾರವಾಗಿಯೇ ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ರೇಗ್ ಚಾಪೆಲ್ ಬೆಳಕು ಚೆಲ್ಲಿದ್ದಾರೆ.
ಸಂಬಳ ಸಿಕ್ಕಾಗ ದೂರ ಸರಿಯಲ್ಲ
ನೀವು ಉತ್ತುಂಗದಲ್ಲಿದ್ದೀರಾ ಇಲ್ವಾ ಅನ್ನೋದು ನಿಮಗೆ ತಿಳಿದಿರುತ್ತೆ. ಅವರು ಸಾಧ್ಯವಾದಷ್ಟು ಹೆಚ್ಚು ಕಾಲ ಕ್ರಿಕೆಟ್ ಆಡಲು ಇಷ್ಟಪಡ್ತಾರೆ. ಅವರಿಗೆ ಅವರದ್ದೇ ಆದ ಕಾರಣಗಳಿವೆ. ಹೀಗಾಗಿ ಸಾಧ್ಯವಾದಷ್ಟು ಹೆಚ್ಚು ದಿನ ಆಡಲು ಬಯಸ್ತಾರೆ. ಅದಕ್ಕಾಗಿಯೇ ಸೆಲೆಕ್ಷನ್ ಕಮಿಟಿ ಆ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ. ಇಂಥ ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಗತ್ಯತೆ ಆಟಗಾರರಿಗೆ ಇಲ್ಲ. ಇದು ಉತ್ತಮ ಸಂಬಳದ ಕೆಲಸ. ಅದರಿಂದ ಯಾರು ದೂರ ಸರಿಯಲ್ಲ. ಆ ನಿರ್ಧಾರಗಳನ್ನು ಬೇರೆಯವರೇ ತೆಗೆದುಕೊಳ್ಳಬೇಕಾಗುತ್ತೆ-ಗ್ರೇಗ್ ಚಾಪೆಲ್, ಮಾಜಿ ಕ್ರಿಕೆಟರ್
ಅಡ್ಡಗೋಡೆ ಮೇಲೆ ದೀಪವಲ್ಲ..
ಆ ಆಟಗಾರ ಶ್ರೇಷ್ಠ, ಟೀಮ್ ಇಂಡಿಯಾಗೆ ಸಾಕಷ್ಟು ಕೊಡುಗೆ ನೀಡಿದ್ದಾನೆ. ಆತನ ಡಿಸಿಷನ್ ಆತನೇ ತೆಗೆದುಕೊಳ್ಳಬೇಕೆಂಬ ನಿಲುವು ಸೆಲೆಕ್ಟರ್ಸ್​ಗೆ ಇರಬಾರದು. ಎಂಥ ದಿಗ್ಗಜನ ಜೊತೆಯೇ ಇರಲಿ, ಅಡ್ಡಗೋಡೆಯ ಮೇಲೆ ದೀಪದಂತೆ ಮಾತನಾಡದೆ, ನೇರ ನೇರ ಮಾತುಕತೆ ನಡೆಸೋ ಸೆಲೆಕ್ಟರ್ ಆ್ಯಂಡ್ ಪಾಲಿಸಿಯನ್ನಿ ಬಿಸಿಸಿಐ ಅಳವಡಿಸಿಕೊಳ್ಳಬೇಕಿದೆ. ಇಲ್ಲ ಟೀಮ್ ಇಂಡಿಯಾದ ಭವಿಷ್ಯಕ್ಕೆ ಅಪಾಯ.
ಉತ್ತಮ ಆಟಗಾರರನ್ನು ಕರೆತನ್ನಿ!
ಸೆಲೆಕ್ಷನ್ ಪ್ಯಾನೆಲ್ ಟಫ್ ಡಿಸಿಷನ್ ತೆಗೆದುಕೊಳ್ಳಬೇಕು. ಇದು ತುಂಬಾ ಕಠಿಣವಾಗಿದೆ. ಸರಿಯಾದ ಆಟಗಾರನ ಆಯ್ಕೆ ಮಾಡಬೇಕಾಗುತ್ತೆ. ನೀವು ಆ ವ್ಯಕ್ತಿಗಳ ಜೊತೆ ಕಠಿಣ ಮಾತುಕತೆ ನಡೆಸಲು ಸಿದ್ಧರಾಗಿರಬೇಕು. ಶ್ರೇಷ್ಠ ಆಟಗಾರರು ಏರಿಳಿತ ಹೊಂದಿರುತ್ತಾರೆ. ಅಂಥ ಉತ್ತಮ ಆಟಗಾರರಿಗೆ ಮತ್ತಷ್ಟು ಚಾನ್ಸ್​ ನೀಡಲು ಬಯಸುತ್ತೀರಿ. ಮತ್ತೆ ಆ ಬ್ಯಾಲೆನ್ಸ್ ತರಲು ಕಠಿಣವಾಗುತ್ತೆ. ಪ್ರತಿಯೊಬ್ಬರು, ಪ್ರತಿ ತಂಡವೂ ಅದೇ ದಾರಿಯಲ್ಲೇ ಸಾಗಬೇಕಿರುತ್ತೆ. ಯಾವ ಟೀಮ್​​​​​​​​​​​​​​​​ ಕೂಡ ಮುಗಿಯದ ಲೇಖನ. ಹಾಗಾಗಿ ಉತ್ತಮ ಮಾರ್ಗಗಳನ್ನು ಹುಡುಕಿ. ಉತ್ತಮ ಆಟಗಾರರನ್ನು ತಂಡಕ್ಕೆ ಕರೆತನ್ನಿ. ​​ಸೂಪರ್ ಸ್ಟಾರ್ ಆಟಗಾರರು ಸಿಕ್ಕಾಗ ನೀವೇ ಸಾಧ್ಯವಾದಷ್ಟು ಹೆಚ್ಚು ಕಾಲ ಆಡಲು ಬಯಸುತ್ತೀರಿ ಎಂದಿದ್ದಾರೆ ಗ್ರೇಗ್ ಚಾಪೆಲ್.
ಇದನ್ನೂ ಓದಿ:ಹೃದಯಾಘಾತ.. ಮಂಡ್ಯ ಕಬಡ್ಡಿ ಪಂದ್ಯಾವಳಿ ಬಳಿಕ ರಾಜ್ಯಮಟ್ಟದ ಆಟಗಾರ ದುರಂತ ಅಂತ್ಯ
ದಿಗ್ಗಜ ಆಟಗಾರರ ಮೋಹದಲ್ಲೇ ಇರುವ ಬಿಸಿಸಿಐ, ರಿಪ್ಲೇಸ್​ಮೆಂಟ್​ಗೆ ಅರ್ಹರನ್ನು ಹುಡುಕಬೇಕು. ಈ ನಿಟ್ಟಿನಲ್ಲೇ ಕೆಲಸ ಮಾಡಬೇಕು. ಪ್ರತಿಭಾವಂತ ಆಟಗಾರರಿಗೆ ಹೆಚ್ಚೆಚ್ಚು ಚಾನ್ಸ್​ ನೀಡಬೇಕು. ಆಗ ಮಾತ್ರವೇ ಕ್ವಾಲಿಟಿ ಪ್ಲೇಯರ್​ಗಳು ಸಿಗಲು ಸಾಧ್ಯ. ಒಟ್ನಲ್ಲಿ, ಟೀಮ್ ಇಂಡಿಯಾ ಕೆಲವು ಆಟಗಾರರನ್ನೇ ಬ್ರ್ಯಾಂಡ್ ಮಾಡದೆ ಆಸ್ಟ್ರೇಲಿಯಾ, ಇಂಗ್ಲೆಂಡ್​ನಂತೆ ಮಾಡೆಲ್ ಪರಿಚಯಿಸಬೇಕಿದೆ. ಇದು ಬೆಸ್ಟ್​ ಟೈಮ್​ ಕೂಡ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us