/newsfirstlive-kannada/media/post_attachments/wp-content/uploads/2023/06/Gruhajyoti-Yojane.jpg)
ಬೆಂಗಳೂರು: ಸ್ವರ್ಗನೇ ಧರೆಗಿಳಿಸ್ತೀವಿ ಅನ್ನೋದು ಹೇಳೋಕು ಚಂದ, ಕೇಳೋಕು ಚಂದ. ರಾಜ್ಯ ಸರ್ಕಾರಕ್ಕೆ ಗೃಹಲಕ್ಷ್ಮಿ ನೀಡಲು ಕಾಸು ಖಾಲಿ ಆಗಿದೆ. ಮೂರು ತಿಂಗಳಾಯ್ತು ಹಣನೇ ಬಂದಿಲ್ಲ. ಈಗ ಗೃಹಜ್ಯೋತಿ ಸರದಿ. ಎಸ್ಕಾಂಗಳು ಹೊಸ ಕ್ಯಾತೆ ತೆಗೆದಿವೆ. ಗ್ರಾಹಕರಿಂದ ಬಿಲ್ ವಸೂಲಿ ಮಾಡ್ತೀವಿ ಅಂತ ಎಸ್ಕಾಂಗಳು ಕೂತಿವೆ.
ಸರ್ಕಾರದ ಗೃಹಜ್ಯೋತಿ ಗ್ಯಾರಂಟಿಗೂ ಗ್ರ‘ಹಣ’!
ಬೆಳಕು ನಂದಿಸಲು ಸನ್ನದ್ಧವಾಗಿವೆ ಎಸ್ಕಾಂಗಳು!
ಕೊಟ್ಟಿದ್ದು ಪಂಚ ಗ್ಯಾರಂಟಿ. ಹೆಚ್ಚಿದ್ದು ನೂರೆಂಟು ಬೆಲೆ ಏರಿಕೆ. ಮಣಭಾರ ಹೊರಲಾಗದೆ ಪರದಾಡುತ್ತಿರುವ ಸರ್ಕಾರ, ಮುಚ್ಚಿಟ್ಟಿದ್ದ ಮತ್ತೊಂದು ಸತ್ಯದ ದರ್ಶನವಾಗಿದೆ.
ಎಸ್ಕಾಂಗಳಿಗೆ ಸರ್ಕಾರದಿಂದ ಗೃಹಜ್ಯೋತಿ ಯೋಜನೆಯ ಹಣ ಸಂದಾಯ ವಿಚಾರದಲ್ಲಿ ಕ್ಯಾತೆ ತೆಗೆದಿವೆ. ಸರ್ಕಾರದಿಂದ ಹಣ ಪಾವತಿಸಲು ಎಸ್ಕಾಂಗಳು ಹೊಸ ವಾದ ಮುಂದಿಟ್ಟಿವೆ. ಸದ್ಯ ತಮ್ಮ ನಷ್ಟ ಭರಿಸಲು ಇಲಾಖೆ ಮುನ್ನಡೆಸಲು ಗ್ರಾಹಕರ ಮೇಲೆ ಬಿಲ್ ಹಾಕುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ವರದಿ ಆಗಿದೆ. ಅಲ್ಲದೆ, ಮೊದಲೇ ಮುಂಗಡ ಹಣ ಪಾವತಿಸಲು ಸರ್ಕಾರದ ಬಳಿ ಹೊಸ ಬೇಡಿಕೆ ಮಂಡಿಸಿವೆ ಎಂದು ಗೊತ್ತಾಗಿದ್ದು, ಉರಿದ ಬೆಳಕು ಆರುವ ಸಾಧ್ಯತೆ ಇದೆ.
ಎಸ್ಕಾಂಗಳಿಗೆ ಹಣ ಡೆಪಾಸಿಟ್ ಮಾಡದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ. ಕೆಎಸ್ಆರ್ಟಿಸಿ ಹಾಳು ಮಾಡಿದ್ದಾಯ್ತು. ಈಗ ವಿದ್ಯುತ್ ನಿಗಮವನ್ನ ಹಾಳು ಮಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಸಿಎಂಗೆ 4 ಪುಟಗಳ ಪತ್ರ ಬರೆದು ಅಭಿವೃದ್ಧಿಗೂ ಬಿಡಿಗಾಸು ಇಲ್ಲದೆ ಬರಿಗೈಯಲ್ಲಿ ಕೈ ಚಾಚಿ ಕುಳಿತಿರುವುದು ಕರ್ನಾಟಕದ ದೌರ್ಭಾಗ್ಯ ಅಂತ ಪ್ರಹಾರ ನಡೆಸಿದ್ದಾರೆ.
ನ್ಯೂಸ್ ಫಸ್ಟ್ ಜತೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸಹ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರದ ಬಗ್ಗೆ ಮಾತಾಡೋಕೆ ಅಸಹ್ಯ. ಅತ್ಯುತ್ತಮ ರಾಜ್ಯವನ್ನ ಹೀನಾಯ ಸ್ಥಿತಿಗೆ ತರ್ತಿದ್ದಾರೆ ಅಂತ ಟೀಕಿಸಿದ್ದಾರೆ.
ಪಂಚ ಗ್ಯಾರಂಟಿಗೆ ಗ್ರ‘ಹಣ’
ಸರ್ಕಾರದ ಬೇರೆ ಇಲಾಖೆಗಳ ಸಾವಿರಾರು ಕೋಟಿ ವಿದ್ಯುತ್ ಬಿಲ್ ಬಾಕಿ
ಗೃಹಜ್ಯೋತಿ ಹಣ ಪಾವತಿಸಿದ್ರೂ ಬೇರೆ ಬಿಲ್ ಬಾಕಿಯಿಂದ ಎಸ್ಕಾಂ ನಷ್ಟ
ಶಕ್ತಿ ಯೋಜನೆಯಿಂದಾಗಿ ಕೆಎಸ್ಆರ್ಟಿಸಿ ನಷ್ಟದ ಹಾದಿ ಹಿಡಿದಿದೆ
ಕೆಎಸ್ಆರ್ಟಿಸಿಗೆ ಸುಮಾರು ₹7 ಸಾವಿರ ಕೋಟಿ ಹಣ ಬಾಕಿ ಇದೆ
ಸುಮಾರು 4 ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣವು ತಲುಪಿಲ್ಲ
ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ನಿಂದ 5 ಕೆ.ಜಿ ಅಕ್ಕಿ ವಿತರಣೆ
ಆದ್ರೆ, 3 ತಿಂಗಳಿಂದ 5 ಕೆ.ಜಿ ಅಕ್ಕಿಗೆ ಪರ್ಯಾಯ 170 ರೂ. ನೀಡಿಲ್ಲ
ಯುವ ನಿಧಿಗೆ ಅರ್ಜಿ ಕರೆದು ಈವರೆಗೆ ಖಾತೆಗಳಿಗೆ ದುಡ್ಡು ಹಾಕಿಲ್ಲ
ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ನ್ಯೂಸ್.. ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ ಸಂಚಾರ ಮುಕ್ತ; ಟೋಲ್ ಫ್ರೀ!
ಪಂಚ ಭಾಗ್ಯಗಳಿಗೆ ಹಣ ಸರಿದೂಗಿಸಲು ಸರ್ಕಾರ ಸಮತೋಲನ ಕಳೆದ್ಕೊಂಡಂತೆ ಕಾಣುತ್ತಿದೆ. ಅಭಿವೃದ್ಧಿ ಎನ್ನುವುದು ಗಗನ ಕುಸುಮವಾಗಿದ್ರೆ, ಬೆಲೆ ಏರಿಕೆ ಬೇತಾಳನಂತೆ ಬೆನ್ನೇರಿದೆ. ಹೀಗಿರುವಾಗ ಎಸ್ಕಾಂನ ನಡೆ ಹೊರೆ ಅಲ್ಲ, ಬರೆ ಎಳೆದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ