/newsfirstlive-kannada/media/post_attachments/wp-content/uploads/2024/12/INSTAGRAM-LOVE.jpg)
ಹೇಳಿ ಕೇಳಿ ಇದು ಸಾಮಾಜಿ ಜಾಲತಾಣಗಳ ಯುಗ. ನಮ್ಮ ಎಲ್ಲ ಅಭಿವ್ಯಕ್ತಿಗಳು ಕೂಡ ಅಲ್ಲಿಯೇ ಹಂಚಿಕೆಗಳಾಗುತ್ತಿವೆ. ಕಣ್ಣಂಚಿನಿಂದ ಹುಟ್ಟಿ ಹೃದಯವನ್ನು ಸೇರಬೇಕಾದ ಪ್ರೀತಿಯೂ ಕೂಡ ಇಲ್ಲಿ ಅರಳುತ್ತಿದೆ. ಯಾವುದೋ ಊರಲ್ಲಿರುವ ಯುವಕ ಇನ್ಯಾವುದೋ ಊರಲ್ಲಿರುವ ಯುವತಿಯೊಂದಿಗೆ ಪ್ರೀತಿಯ ಜಾಲಕ್ಕೆ ಬೀಳುತ್ತಿದ್ದಾನೆ. ಹೀಗೆ ಹುಟ್ಟಿಕೊಂಡ ಪ್ರೇಮಗಳು ಮದುವೆಯನ್ನು ತಲಪುವಷ್ಟು ಯಶಸ್ಸು ಕಂಡಿದ್ದು ತೀರ ಅಂದ್ರೆ ತೀರ ವಿರಳ. ಹೀಗಿಯೇ ಹುಟ್ಟಿಕೊಂಡ ಪ್ರೀತಿಯೊಂದು ಮದುವೆಯ ತನಕ ಹೋಗಿ ಕೊನೆಗೆ ಮದುಮಗಳ ಮೇಲೆ ಕೇಸ್ ದಾಖಲಿಸುವ ಹಂತಕ್ಕೆ ಹೋಗಿದೆ ಪಂಜಾಬ್ನಲ್ಲಿ .
ಪಂಜಾಬ್ನ ಜಲಂದರ್ ನಗರದಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಹುಡುಗಿಯೊಂದಿಗೆ ಪ್ರೇಮಕ್ಕೆ ಬಿದ್ದ ಹುಡುಗ ಆಕೆಯನ್ನು ಮದುವೆಯಾಗಲು ನೂರಾರು ಜನರೊಂದಿಗೆ ಬಾರಾತ್ (ಮೆರವಣಿಗೆ)ನಲ್ಲಿ ಬಂದಿದ್ದಾನೆ. ಬಂದು ಮದುವೆ ನಡೆಯಬೇಕಾದ ಸ್ಥಳದಲ್ಲಿ ನೋಡಿದ್ರೆ. ಅಲ್ಲಿ ಮದುವೆಯ ಮಂಟಪವೂ ಇರಲಿಲ್ಲ, ಮದುಮಗಳ ಪತ್ತೆಯೇ ಇಲ್ಲ.
ಮೊಗಾ ಸಿಟಿಯ ದಕ್ಷಿಣ ವಿಭಾಗದ ಎಎಸ್ಐ ಹರ್ಜಿಂದರ್ ಸಿಂಗ್ ಅವರು ಹೇಳುವ ಪ್ರಕಾರ ಮದಿಯಾಲ ಎಂಬ ಗ್ರಾಮದಲ್ಲಿ ಇರುವ ಯುವಕ ದೀಪಕ್ ಎಂಬುವವನಿಗೆ ಸೋಷಿಯಲ್ ಮೀಡಿಯಾದಲ್ಲಿ ಮನ್ಪ್ರೀತ್ ಕೌರ್ ಎಂಬುವವಳ ಪರಿಚಯವಾಗಿದೆ. ಅಲ್ಲಿ ಶುರುವಾದ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ಒಬ್ಬರಿಗೊಬ್ಬರು ಒಪ್ಪಿಕೊಳ್ಳುತ್ತಾರೆ. ಕೊನೆಗೆ ಮೊಗಾದ ರೋಸ್ ಗಾರ್ಡನ್ನಲ್ಲಿ ಮದುವೆ ನಡೆಯೋದು ಎಂಬುದು ನಿಶ್ಚಯವಾಗುತ್ತದೆ.
ಇದನ್ನೂ ಓದಿ: ಭಾರತದ ಅತಿ ಸುಂದರ ಮಹಾರಾಣಿ ಯಾರು ಗೊತ್ತಾ? ಇವರ ಸ್ಟೈಲ್ನ್ನು ಐಶ್ವರ್ಯ ರೈ ಕೂಡ ಕಾಪಿ ಮಾಡಿದ್ದರು..
ಮದುಮಗ ಪೂರ್ತಿ ಖುಷಿಯಲ್ಲಿ ನೂರಾರು ಮಂದಿಯನ್ನು ಕರೆದುಕೊಂಡು ಮೆರವಣಿಗೆಯಲ್ಲಿ ಬಂದಾಗ ಗೊತ್ತಾಗುತ್ತದೆ. ಮೊಗಾದಲ್ಲಿ ರೋಸ್ ಗಾರ್ಡನ್ ಎಂಬ ಮದುವೆ ಮಂಟಪವೇ ಇಲ್ಲವೆಂದು. ಕೂಡಲೇ ದೀಪಕ್ ತನ್ನ ಇನ್ಸ್ಟಾಗ್ರಾಂ ಪ್ರೇಯಸಿ ಮನ್ಪ್ರೀತ್ಗೆ ಕರೆ ಮಾಡುತ್ತಾನೆ. ಆಗ ಮಾತನಾಡಿದ ಮನ್ಪ್ರೀತ್ ಕೌರ್, ಸ್ವಲ್ಪ ಕಾಯ್ತಿರು ನಿಮ್ಮನ್ನು ಕರೆದುಕೊಂಡು ಬರಲು ನನ್ನ ಜನರನ್ನ ಕರೆಸುತ್ತೇನೆ ಎನ್ನುತ್ತಾಳೆ. ಮಧ್ಯಾಹ್ನದಿಂದ ಸಾಯಂಕಾಲ 6 ಗಂಟೆಯವರೆಗೆ ಊಟ, ನೀರು ಬಿಟ್ಟು ದೀಪಕ್ ಹಾಗೂ ಆತನೊಂದಿಗೆ ಬಂದಿದ್ದ ಜನರು ಲೊಹರಾ ಚೌಕ್ನಲ್ಲಿ ಕಾಯುತ್ತಲೇ ಇರುತ್ತಾರೆ. ಕೊನೆಗೆ ಯಾರೂ ಬಾರದಿದ್ದಾಗ ಅವರಿಗೆ ತಾವು ಮೋಸ ಹೋಗಿದ್ದು ಗೊತ್ತಾಗಿದೆ. ಕೂಡಲೇ ಪಕ್ಕದ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಟವಲ್ ಕಟ್ಟಿಕೊಂಡು ಇಂಡಿಯಾ ಗೇಟ್ ಬಳಿ ಡ್ಯಾನ್ಸ್ ಮಾಡಿದ ಮಾಡೆಲ್! ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
ಪ್ರೇಮ ನಮ್ಮನ್ನು ಮೂರ್ಖರನ್ನಾಗಿಸುತ್ತದೆ ನಿಜ. ಆದ್ರೆ ಈ ಸ್ಟೋರಿ ಇದೆಯಲ್ಲಾ ಇದು ಈ ಎಲ್ಲ ಹಂತವನ್ನು ಮೀರಿದ್ದು. ಒಂದು ವೇಳೆ ನೀವು ಇನ್ಸ್ಟಾಗ್ರಾಮ್ನಲ್ಲಿ ಇದೇ ರೀತಿ ಪ್ರೀತಿಯಲ್ಲಿ ಬಿದ್ದಿದ್ದರೆ ಎರಡೆರಡು ಬಾರಿ ಚೆಕ್ ಮಾಡಿಕೊಳ್ಳಿ. ಯಾಕಂದ್ರೆ ಅಲ್ಲಿ ಹುಟ್ಟುವ ಕ್ಷಣಿಕ ಮೋಹಗಳ ಪ್ರೀತಿಯಾಗಿ ಅರಳಿ ದಾಂಪತ್ಯವರೆಗೂ ಬರೋದು ಬಹುತೇಕ ಅನುಮಾನ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ