/newsfirstlive-kannada/media/post_attachments/wp-content/uploads/2025/02/TRAFFIC-JAM.jpg)
ನೀವು ಯಾವ ನಗರದಲ್ಲಿ ವಾಸಿಸುತ್ತಿದ್ದೀರಿ ಅನ್ನೋದು ಒಂದು ವಿಷಯವೇ ಅಲ್ಲ. ದೆಹಲಿ, ಮುಂಬೈ, ಬೆಂಗಳೂರು ಅಥವಾ ಇನ್ಯಾವುದೋ ಬೃಹತ್ ನಗರ, ನಿಮ್ಮನ್ನು ಭೀಕರವಾಗಿ ಕಾಡುವುದು ಅಲ್ಲಿಯ ಟ್ರಾಫಿಕ್. ಟ್ರಾಫಿಕ್ ಜಾಮ್ ವಿಚಾರದಲ್ಲಿ ಈ ಪ್ರತಿಯೊಂದು ಸಿಟಿಯೂ ತನ್ನದೇ ಆದ ಖ್ಯಾತಿಯನ್ನು ಹೊಂದಿವೆ. ಟ್ರಾಫಿಕ್ ವಿಚಾರ ಅಂತ ಬಂದಾಗ ಎಲ್ಲರಿಗೂ ಒಂದೇ ರೀತಿಯ ಮರ್ಯಾದೆ ಸಿಗುತ್ತದೆ. ಅದು ಯಾವ ರೀತಿಯೆಂದರೆ ಮದುವೆಯ ಮೆರವಣಿಗೆ ವರನನ್ನೇ ಬಿಟ್ಟು ಮುಂದು ಹೋಗಿ ವರ ಟ್ರಾಫಿಕ್ನಲ್ಲಿ ಸಿಕ್ಕು ಓಡೋಡಿಕೊಂಡು ಹೋಗುವ ಮಟ್ಟಿಗೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆ.. ಮಂದಿರ ತೆರೆಯುವ ಸಮಯ ಬದಲಿಸಿದ ದೇವಸ್ಥಾನ ಮಂಡಳಿ
ಹೌದು, ಇಂತಹ ಅಚ್ಚರಿಯ ಘಟನೆಯೊಂದು ನಡೆದಿದೆ. ಇದು ಯಾವ ನಗರ, ಎಲ್ಲಿ ಹಾಗೂ ಯಾವ ದಿನದಂದು ನಡೆದಿದೆ ಎಂದು ಗೊತ್ತಿಲ್ಲ. ವಿಡಿಯೋವಂತೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಒಂದು ವಿಡಿಯೋದಲ್ಲಿ ಮದುಮಗ ತನ್ನ ಮದುವೆ ಡ್ರೆಸ್ನಲ್ಲಿ ನಟ್ಟ ನಡು ರಸ್ತೆಯಲ್ಲಿ ಟ್ರಾಫಿಕ್ ಮಧ್ಯೆ ತನ್ನ ಮದುವೆಯ ಮೆರವಣಿಗೆಯನ್ನು ಹುಡುಕಿಕೊಂಡು ಓಡೋಡಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಮದುವೆಯ ಧಿರಿಸಿಟ್ಟುಕೊಂಡವ ಹೀಗೆ ಟ್ರಾಫಿಕ್ನಲ್ಲಿ ಅವಸರವಸರವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಜನರು ಬಿಟ್ಟು ಕಣ್ಣು ಬಿಟ್ಟಂತೆ ನೋಡುತ್ತಿದ್ದರೆ ಮತ್ತೊಬ್ಬರು ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ:ಇದು ಶ್ವಾನವಾ? ಸಿಂಹವಾ?.. ಓಡುತ್ತಿರುವ ಜೀಪ್ ಬ್ಯಾನೆಟ್ ಮೇಲೆ ನಿಂತ ಪ್ರಾಣಿ ಕಂಡು ಅವಕ್ಕಾದ ಜನರು
ಶೌರ್ಯ ದವರ್ ಎಂಬುವವರು ಈ ವಿಡಿಯೋವನ್ನು ಜನವರಿ 24 ರಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ ಇಂದಿಗೂ ಕೂಡ ಅದು ಸಖತ್ ಸದ್ದು ಮಾಡುತ್ತಿದೆ. ಇಲ್ಲಿಯವರೆಗೂ ಸುಮಾರು 2.4 ಮಿಲಿಯನ್ ಅಂದ್ರೆ 20 ಲಕ್ಷ 40 ಸಾವಿರ ವೀವ್ಸ್ ಪಡೆದಿದೆ.
View this post on Instagram
ಇದನ್ನು ನೋಡಿದ ನೆಟ್ಟಿಗರು ಹಲವು ಹಾಸ್ಯ ಚಟಾಕಿಯನ್ನು ಕಮೆಂಟ್ನಲ್ಲಿ ಹಾಕಿದ್ದಾರೆ. ಟ್ರಾಫಿಕ್ ಎನ್ನುವುದು ಪ್ರತಿಯೊಬ್ಬರ ಲವ್ಸ್ಟೋರಿಗೆ ದೊಡ್ಡ ವಿಲನ್, ಆದ್ರೆ ಈ ಬಡಪಾಯಿ ಟ್ರಾಫಿಕ್ನಿಂದಾಗಿ ತನ್ನದೇ ಮದುವೆಗೆ ಓಡಿಕೊಂಡು ಹೋಗಬೇಕಾದ ಸ್ಥಿತಿ ಬಂದಿದೆ ಎಂದು ಲೇವಡಿ ಮಾಡುತ್ತಿದ್ದಾರೆ. ಇನ್ನು ಕೆಲವರು, ಬ್ರದರ್ ನೀನನು ನಿನ್ನ ಜೀವನದಲ್ಲಿ ಮತ್ತೊಂದು ಹಂತಕ್ಕಾಗಿ ಹೆಜ್ಜೆ ಹಾಕುತ್ತಿರುವೆ ಎಂದರೆ ಮತ್ತೊಬ್ಬ ವ್ಯಕ್ತಿ ಬಹುಶಃ ಮೆರವಣಿಗೆಯವರು ವರನ ಬದ್ಧತೆಯನ್ನು ಪರೀಕ್ಷಿಸುತ್ತಿರಬಹುದು. ಒಂದು ವೇಳೆ ಸರಿಯಾದ ಸಮಯಕ್ಕೆ ಈತ ಮದುವೆ ಮುಹೂರ್ತಕ್ಕೆ ತಲುಪಿದರೆ ಈತ ವಧುವಿಗೆ ತಕ್ಕ ವರ ಎಂದು ನಿರ್ಧರಿಸುತ್ತಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ