/newsfirstlive-kannada/media/post_attachments/wp-content/uploads/2024/07/UP_GROOM.jpg)
ಲಕ್ನೋ: ಮದುವೆಯಾದ ಕೇವಲ ಎರಡೇ ಗಂಟೆಯಲ್ಲಿ ಮನೆಯಲ್ಲಿ ವರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಇಟಾವಾದ ಶಿವರಾ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?
ಶಿವರಾ ಗ್ರಾಮದ ನಿವಾಸಿ ಸತೇಂದ್ರ ಯಾದವ್ ಆತ್ಮಹತ್ಯೆ ಮಾಡಿಕೊಂಡ ವರ. ದೆಹಲಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವ ಜ್ಞಾನ್ ಸಿಂಗ್ ಯಾದವ್ ಅವರ ಕಿರಿಯ ಮಗ ಸತೇಂದ್ರ ಯಾದವ್ ತಾಖಾ ರತನ್‌ಪುರ ಗ್ರಾಮದ ವಧುವನ್ನು ವಿವಾಹವಾಗಿದ್ದ. ಎರಡೂ ಕುಟುಂಬಗಳು ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ಪೂರ್ಣಗೊಳಿಸಿ ಮೆರವಣಿಗೆಯು ಚೆನ್ನಾಗಿ ಮಾಡಿದ್ದರು. ಮೆರವಣಿಗೆಯಿಂದ ಬಂದಿದ್ದ ವಧು-ವರವನ್ನು ಮನೆಯವರು ಸ್ವಾಗತಿಸಿ ಮನೆಯೊಳಗೆ ಕರೆದುಕೊಂಡು ಹೋಗಿದ್ದರು.
ಇದನ್ನೂ ಓದಿ: 9 ಕಿ.ಮೀ ವರ್ಲ್ಡ್‌ಕಪ್ ಟ್ರೋಫಿ ಮೆರವಣಿಗೆ.. ವಾಂಖೇಡೆಗೆ ಹರಿದು ಬಂದ ಜನಸಾಗರ; ಉಚಿತ ಪ್ರವೇಶ!
ರಾತ್ರಿ ನಿದ್ದೆಯಿಲ್ಲದ ಕಾರಣ ಬಂಧುಗಳು, ಕುಟುಂಬಸ್ಥರು ನಿದ್ದೆಗೆ ಜಾರಿದ್ದರು. ವರ ಕೂಡ ಸಂಜೆ ವೇಳೆ ಮನೆಯ 2ನೇ ಮಹಡಿಗೆ ಹೋಗಿದ್ದ. ಹೆಚ್ಚು ಸಮಯವಾದರು ವರ ಬಾರದಿದ್ದಕ್ಕೆ ಕುಟುಂಬಸ್ಥರು ಹೋಗಿ ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆದಿಲ್ಲ. ಹೀಗಾಗಿ ಆತಂಕದಿಂದಲೇ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ವರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ನೋಡಿದ ವಧು ತಲೆ ಸುತ್ತು ಬಂದು ನೆಲಕ್ಕೆ ಬಿದ್ದಿದ್ದಳು. ಮಗನನ್ನ ಕಳೆದುಕೊಂಡಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: BREAKING: ನಟ ದರ್ಶನ್‌ಗೆ ಮತ್ತೆ ಜೈಲೇ ಗತಿ.. ನ್ಯಾಯಾಂಗ ಬಂಧನ ವಿಸ್ತರಣೆ; ಎಷ್ಟು ದಿನ?
ಈ ಸಂಬಂಧ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. ಕೋಣೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇಟವಾಹ್‌ನ ಉಸ್ರಾಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ