ಬಾಗಲಕೋಟೆಯಲ್ಲಿ ಹೃದಯ ವಿದ್ರಾವಕ ಘಟನೆ.. ತಾಳಿ ಕಟ್ಟಿದ 15 ನಿಮಿಷದಲ್ಲೇ ಮದುಮಗ ನಿಧನ

author-image
Veena Gangani
Updated On
ಬಾಗಲಕೋಟೆಯಲ್ಲಿ ಹೃದಯ ವಿದ್ರಾವಕ ಘಟನೆ.. ತಾಳಿ ಕಟ್ಟಿದ 15 ನಿಮಿಷದಲ್ಲೇ ಮದುಮಗ ನಿಧನ
Advertisment
  • ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲೇ ವರ ನಿಧನ ಆಗಿದ್ದೇಗೆ?
  • ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿ ಇನ್ನಿಲ್ಲ
  • ಖುಷಿ ಖುಷಿಯಾಗಿ ವಧುವಿಗೆ ತಾಳಿ ಕಟ್ಟಿದ ಪ್ರವೀಣ ಕುರಣಿ

ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ವಧುವಿಗೆ ವರ ತಾಳಿ ಕಟ್ಟಿದ ಕೇವಲ 15 ನಿಮಿಷಗಳಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವರ ಪ್ರವೀಣ ಕುರಣಿ (25).

ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್​ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್

publive-image

ಪ್ರವೀಣ ಕುರಣಿ ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿ. ಈ ಘಟನೆ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ವರನ ಹಠಾತ್ ನಿಧನಕ್ಕೆ ಎರಡೂ ಕುಟುಂಬಗಳಿಗೆ ಆಘಾತ ತಂದಿದೆ. ಹೌದು, ಇಡೀ ನಂದೀಕೇಶ್ವರ ಕಲ್ಯಾಣ ಮಂಟಪದಲ್ಲಿ ಎರಡು ಕುಟುಂಬದವರು ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದರು. ಆದರೆ, ಈ ಸಂಭ್ರಮ ಬಹಳ ಕಾಲ ಉಳಿಯಲೇ ಇಲ್ಲ. ಹೊಸ ಜೀವನ ಆರಂಭಿಸೋ ಮೊದಲೇ ವರ ಬದುಕಿಗೆ ವಿದಾಯ ಹೇಳಿದ ಹೇಳಿದ್ದಾನೆ.

publive-image

ತಾಳಿ ಕಟ್ಟಿ ಕೇವಲ 15 ನಿಮಿಷದಲ್ಲೇ ವರನಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಬೇಕು ಎನ್ನುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಜೀವಬಿಟ್ಟಿದ್ದಾನೆ. ಇನ್ನೂ ಬಾಳಿ ಬದುಕಬೇಕಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment