21ರ ಹುಡುಗಿ ಬದಲು 45 ವಯಸ್ಸಿನ ಅತ್ತೆ ಜೊತೆ ಮದುವೆಯಾದ ವರ; ಅಸಲಿಗೆ ಆಗಿದ್ದೇನು?

author-image
admin
Updated On
21ರ ಹುಡುಗಿ ಬದಲು 45 ವಯಸ್ಸಿನ ಅತ್ತೆ ಜೊತೆ ಮದುವೆಯಾದ ವರ; ಅಸಲಿಗೆ ಆಗಿದ್ದೇನು?
Advertisment
  • ವಧುವಿನ ತಾಯಿಯನ್ನು ಮದುವೆಯಾಗಿದ್ದು ಯಾಕೆ ಈ ವರ?
  • 21 ವರ್ಷದ ಮಂತಶಾ ಎಂಬ ಹುಡುಗಿ ಜೊತೆ ಮದುವೆ ನಿಶ್ಚಯ
  • ನಂತರ 45 ವರ್ಷದ ವಿಧವೆಯನ್ನ ಕಂಡು ಬೆಚ್ಚಿ ಬಿದ್ದ ಯುವಕ

ಉತ್ತರಪ್ರದೇಶ ಮೀರತ್‌ನ ಬ್ರಹ್ಮಪುರಿ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯುವಕನೊಬ್ಬ ವಧುವಿನ ಜೊತೆ ಮದುವೆ ಆಗುವ ಬದಲು ವಧುವಿನ ತಾಯಿಯನ್ನ ಮದುವೆಯಾಗಿ ಮೋಸ ಹೋಗಿದ್ದಾನೆ. ಈ ಘಟನೆ ಸಂಬಂಧ ಮೊಹಮ್ಮದ್ ಅಜೀಮ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾನೆ.

ಮೊಹಮ್ಮದ್ ಅಜೀಮ್‌ಗೆ ಶಾಮ್ಲಿ ಜಿಲ್ಲೆಯ 21 ವರ್ಷದ ಮಂತಶಾ ಎಂಬ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು. ಅಜೀಮ್‌ನ ಅಣ್ಣ ನದೀಮ್ ಮತ್ತು ಅತ್ತಿಗೆ ಶಾಯಿದಾ ಈ ಸಂಬಂಧವನ್ನು ನೋಡಿದ್ರು.

publive-image

ಕಳೆದ ಮಾರ್ಚ್ 31ರಂದು ಮದುವೆಯೂ ನಡೆದಿದೆ. ಮದುವೆಯ ಸಮಯದಲ್ಲಿ, ಮೌಲ್ವಿ ವಧುವಿನ ಹೆಸರನ್ನು ತಾಹಿರಾ ಅಂತ ಪ್ರಸ್ತಾಪಿಸಿದ್ದಾನೆ. ಈ ವೇಳೆ ಅಜೀಮ್‌ಗೆ ಅನುಮಾನ ಬಂದಿದೆ. ಅಷ್ಟೊತ್ತಿಗೆ ನಿಖಾ ಮುಗಿದು ಹೋಗಿದೆ.

ಇದನ್ನೂ ಓದಿ: ನಟಿ ಪ್ರಣೀತಾ ಮಗನ ನಾಮಕರಣಕ್ಕೆ ಸ್ಯಾಂಡಲ್‌ವುಡ್‌ ತಾರೆಯರ ಎಂಟ್ರಿ.. ಯಾರೆಲ್ಲಾ ಬಂದಿದ್ರು? 

ನಿಖಾ ಮುಗಿದ ನಂತರ ಅಜೀಮ್‌ ಬುರ್ಖಾ ತೆಗೆದು ನೋಡಿದ್ದಾನೆ. ಆಗ 45 ವರ್ಷದ ವಿಧವೆಯನ್ನ ಕಂಡು ಬೆಚ್ಚಿ ಬಿದ್ದಿದ್ದಾನೆ. ತಾನು ಮದುವೆ ಆಗಿರೋದು ವಧು ಮಂತಾಶಾಳ ತಾಯಿ ತಾಹಿರಾ ಅಂತ ಗೊತ್ತಾಗಿದೆ. ಸದ್ಯ ರಾಜೀ ಸಂಧಾನ ಆಗಿದ್ದು, ಪರಸ್ಪರ ದೂರು ವಾಪಸ್​ ಪಡೆಯಲಾಗಿದೆ. ಆದ್ರೆ, ನಿಖಾ ಬಗ್ಗೆ ಗೊಂದಲ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment